ದಮ್ಮಾಮ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು, ಇದರ ದಮ್ಮಾಮ್ ಝೋನ್ ಅಧೀನದ ಅಲ್ ಖೋಬರ್ ಘಟಕದ 28 ನೇ ವಾರ್ಷಿಕ ಮಹಾಸಭೆಯು 3, ಫೆಬ್ರವರಿ 2023 ರಂದು ಅಬ್ದುರ್ರಶೀದ್ ಬೆಳ್ಳಾರೆ ಯವರ ನಿವಾಸದಲ್ಲಿ ಜರಗಿತು.
ಅಲ್ ಖೋಬರ್ ಘಟಕದ ಅಧ್ಯಕ್ಷರಾದ ಅಬ್ದುರ್ರಶೀದ್ ಬೆಳ್ಳಾರೆ ರವರ ಘನ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಡಿಕೆಯಸ್ಸಿ ದಾಯಿ ಇಸ್ಮಾಯೀಲ್ ಕಾಟಿಪಳ್ಳ ದುಆ ನೆರವೇರಿಸಿದರು.
ಉಬೈದ್ ಇಬ್ನು ಮುಹಮ್ಮದ್ ರೋಯಲ್ ಮುಕ್ವೆ ಖಿರಾಅತ್ ಪಠಿಸಿದರು. ಇಸ್ಮಾಯೀಲ್ ಹೊಸಂಗಡಿ ಸ್ವಾಗತಿಸಿದರು. ಡಿಕೆಯಸ್ಸಿ ದಮ್ಮಾಮ್ ರೋನ್ ಅಧ್ಯಕ್ಷ ಇಂಜಿನಿಯರ್ ಅಬ್ದುರಹ್ಮಾನ್ ಪಾಣಾಜೆ ಯವರು ಸಭೆಯನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅಶ್ರಫ್ ಚಿಕ್ಕಮಗಳೂರು ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಉಸ್ಮಾನ್ ಹೊಸಂಗಡಿ ವಾರ್ಷಿಕ ಪ್ರವರ್ತನಾ ವರದಿ ಮಂಡಿಸಿದರು.
2023-24 ನೇ ಸಾಲಿಗೆ ನೂತನ ಸಮಿತಿಯನ್ನು ಅಲ್ ಖೋಬರ್ ಘಟಕದ ಉಸ್ತುವಾರಿ ಅಬ್ದುಲ್ ಗಫೂರ್ ಸಜಿಪ ರವರು ರಚಿಸಿದರು.
ಗೌರವಾಧ್ಯಕ್ಷರಾಗಿ ಮುಹಮ್ಮದ್ ಷರೀಫ್ ಬಜ್ಪೆ, ಅಧ್ಯಕ್ಷರಾಗಿ ಇಸ್ಮಾಯೀಲ್ ಅರಮೆಕ್ಸ್, ಪ್ರಧಾನ ಕಾರ್ಯದರ್ಶಿಯಾಗಿ ಶಾಫಿ ರಿಝ್ವಾನ್ ಮಂಗಳೂರು, ಕೋಶಾಧಿಕಾರಿಯಾಗಿ ಅಶ್ರಫ್ ಚಿಕ್ಕಮಗಳೂರು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುದ್ರಶೀದ್ ಬೆಳ್ಳಾರೆ ಆಯ್ಕೆಗೊಂಡರು. ಉಪಾಧ್ಯಕ್ಷರುಗಳಾಗಿ ಉಸ್ಮಾನ್ ಹೊಸಂಗಡಿ, ಮುಹ್ಯುದ್ದೀನ್ ವಗ್ಗ, ಇರ್ಷಾದ್ ಪಾಣಾಜೆ, ಜೊತೆ ಕಾರ್ಯದರ್ಶಿಗಳಾಗಿ ಶಾಹಿದ್ ಕಲಂದರ್ ಜಾವಗಲ್, ಶಬೀರ್ ಬೆಳ್ಳಾರೆ, ಬಾತಿಷಾ ಮುಕ್ವೆ ರವರನ್ನು ನೇಮಿಸಲಾಯಿತು.
ಸಲಹಾ ಸಮಿತಿಗೆ ಇಂಜಿನಿಯರ್ ಅಬ್ದುರಹ್ಮಾನ್ ಪಾಣಾಜೆ, ಹನೀಫ್ ದೇರಳಕಟ್ಟೆ ಹಾಗೂ ಅಬ್ದುಲ್ ಜಬ್ಬಾರ್ ಕೂರ್ನಡ್ಕ, ಸಂಚಾಲಕರಾಗಿ ಮುಹಮ್ಮದ್ ರೋಯಲ್ ಮುಕ್ವೆ, ಅಶ್ರಫ್ ನಾವುಂದ, ಮುಹಮ್ಮದ್ ಮಲೆಬೆಟ್ಟು, ಹಾಗೂ 20 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ಅಬ್ದುಲ್ ರಝಾಖ್ ಕಂಬಳಬೆಟ್ಟು, ಅಬ್ದುಲ್ ಹಮೀದ್ ಸುಳ್ಯ, ಅಬ್ಬುಂಞ ಮುಕ್ವೆ, ಝೈನುದ್ದೀನ್ ಕುಂಜೂರು, ರಿಯಾಝ್ ಮುಕ್ವೆ, ಮನ್ಸೂರ್ ಮುಕ್ವೆ, ಸಲೀಂ ಮುಕ್ವೆ, ತಬ್ರೀಝ್ ಕೂರ್ನಡ್ಕ, ಹಬೀಬ್ ನೇರಳಕಟ್ಟೆ, ಅಬ್ದುಲ್ಲತೀಫ್ ಬೆಳ್ಳಾರೆ, ಹಸನ್ ಮುಕ್ವೆ, ತಾಜುದ್ದೀನ್ ಮುಕ್ವೆ, ಇಖ್ಬಾಲ್ ಕುದ್ರೋಳಿ, ಫಾರೂಖ್ ವಿಟ್ಲ, ಮುಸ್ತಫಾ ಉಮರ್ ಹಾಜಿ, ಸಿರಾಜ್ ಕಂಬಳಬೆಟ್ಟು, ಮುಸ್ತಫಾ ಮುಕ್ವೆ, ಮುಜೀಬ್ ಕಲ್ಲಡ್ಕ, ಅಬ್ಬು ಕೊಪ್ಪ, ಅಬ್ದುರ್ರಝಾಕ್ ವಿಟ್ಲ.
ಮುಖ್ಯ ಅತಿಥಿಗಳಾಗಿ ಡಿಕೆಯಸ್ಸಿ ಅಲ್ ಖೋಬರ್ ಘಟಕದ ಪ್ರಥಮ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಮೂಡುತೋಟ, ದಮ್ಮಾಮ್ ಝೋನ್ ಕೋಶಾಧಿಕಾರಿ ಅಬ್ದುಲ್ ಹಮೀದ್ ಕಾಪು, ಅಬೂಬಕ್ಕರ್ ಅಜಿಲಮೊಗರು, ಇಖ್ಬಾಲ್ ಮಲ್ಲೂರು, ಉಮರಬ್ಬ ಮರವೂರು, ಹನೀಫ್ ಪರಂಗಿಪೇಟೆ ಆಗಮಿಸಿದ್ದರು.
ಅಬ್ದುಲ್ ಖಾದರ್ ಹಾಜಿ ಸಕಲೇಶಪುರ , ಸ್ಥಾಪಕ ಸದಸ್ಯ ಝೈನುದ್ದೀನ್ ಮುಕ್ವೆ, ಡಿಕೆಯಸ್ಸಿ ದಮ್ಮಾಮ್ ಘಟಕದ ನೂತನ ಅಧ್ಯಕ್ಷ ಸಯ್ಯದ್ ಬಾವ ಬಜ್ಪೆ ಸಮಾರಂಭಕ್ಕೆ ಶುಭ ಹಾರೈಸಿದರು.ನೂತನ ಪ್ರಧಾನ ಕಾರ್ಯದರ್ಶಿ ಶಾಫಿ ರಿಝ್ವಾನ್ ಮಂಗಳೂರು ಧನ್ಯವಾದ ಗೈದರು.