✍️ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ಕನ್ನಡಿಗ)
ವಿಶ್ವದ ಭೂಕಂಪ ವಲಯಗಳಲ್ಲಿ ಒಂದಾಗಿರುವ ಟರ್ಕಿಯಲ್ಲಿ ಸೋಮವಾರ ಮಂಜಾನೆ ಉಂಟಾದ ಪ್ರಬಲ ಭೂಕಂಪನಕ್ಕೆ ಆಗ್ನೇಯ ಟರ್ಕಿಯಲ್ಲಿ ಗಗನಚುಂಬಿ ಕಟ್ಟಡಗಳು, ಮೇಲ್ಸೇತುವೆಗಳು ಧರೆಗುರುಳಿವೆ, ನರ ಭಕ್ಷಕನಂತೆ ರಸ್ತೆಗಳು ಬಾಯ್ದೆರೆದಿವೆ,
ಮನೆ ಮಠಗಳು ಧೂಳೀಪಟವಾಗಿವೆ.
ಭೂಕಂಪನದ ತೀವ್ರತೆಗೆ ಮನೆಯೊಳಗಿದ್ದವರು ತೊಟ್ಟಿಲಲ್ಲಿರುವ ಮಗುವಿನಂತೆ ತೂಗಾಡಿದ್ದಾರೆ,
ಕನಿಷ್ಠ 3500 ಜನರು ಕಟ್ಟಡಗಳ ಅವಶೇಷಗಳಡಿಯಲ್ಲಿ ಜೀವಂತ ಸಮಾಧಿಯಾಗಿದ್ದಾರೆ.
2000ಕ್ಕೂ ಮಿಕ್ಕ ಜನರು ಗಾಯಗೊಂಡಿದ್ದಾರೆ
5600 ಕ್ಕೂ ಹೆಚ್ಚು ಕಟ್ಟಡಗಳು ಕುಸಿದು ಬಿದ್ದಿವೆ.
ಟರ್ಕಿಯ ಪ್ರಬಲ ಭೂಕಂಪಕ್ಕೆ ನೆರೆಯ ಲೆಬನಾನ್, ಸಿರಿಯಾ ಮತ್ತು ಇಸ್ರೇಲ್ ಕೂಡ ಗಡಗಡ ನಡುಗಿದೆ.
ಈ ನಡುವೆ ಟರ್ಕಿಯ ಮಳೆ ಅಬ್ಬರ, ದಟ್ಟವಾಗಿ ಕವಿದ ಮಂಜಿನಿಂದ ಜನರ ರಕ್ಷಣೆಗೆ ಟರ್ಕಿ ರಕ್ಷಣಾ ತಂಡ ಹರಸಾಹಸ ಪಡುತ್ತಿದೆ.
1948 ರಿಂದ ಭಾರತ ಮತ್ತು ಟರ್ಕಿಯ ನಡುವೆ ರಾಜತಾಂತ್ರಿಕ ಸಂಬಂಧಗಳಿರುವುದರಿಂದ ಭಾರತ ಸಹಿತ ಜಗತ್ತಿನ 44 ದೇಶಗಳು ಟರ್ಕಿಯ ಬೆಂಬಲಕ್ಕೆ ನಿಂತಿದೆ.
ಕಣ್ಣೆದುರೆ ಕುಸಿದು ಬೀಳುತ್ತಿರುವ ಬಹುಮಹಡಿ ಕಟ್ಟಡಗಳನ್ನು ನೋಡುತ್ತಿದ್ದ ಯುಬಕನೊಬ್ಬನು
ಉಮ್ಮಳಿಸಿ ಬರುವ ದುಃಖವನ್ನು ಗಂಟಲಿನಲ್ಲೇ ಬಿಗಿ ಹಿಡಿದು
“ಭೂಕಂಪನವಾಗಿದೆ, ಒಂದೇ ಸ್ಥಳದಲ್ಲಿ ಒಟ್ಟಿಗೆ ಸಾಯೋಣ” ಅನ್ನುವ ವೀಡಿಯೋ ತುಣುಕು ಕಟುಕನ ಹೃದಯವನ್ನೂ ಕರಗುವಂತೆ ಮಾಡಿದೆ.
ಖುರ್‌ಆನ್ ಅಧ್ಯಾಯ: 99 ಶ್ಲೋಕ: 3
وَقَالَ ٱلْإِنسَٰنُ مَا لَهَا
(ಆಗ) ಮನುಷ್ಯನು ಹೇಳುವನು ‘ಭೂಮಿಗೆ ಏನು ಸಂಭವಿಸಿದೆ?
ಎಂಬ ಖುರ್‌ಆನ್ ಸಂದೇಶ ಮತ್ತೊಮ್ಮೆ ನೆನಪಿಗೆ ಬಂತು
ಟರ್ಕಿಗಾಗಿ ಪ್ರಾರ್ಥಿಸೋಣ..