janadhvani

Kannada Online News Paper

1

ಸಮಸ್ತ ಕಾರ್ಯದರ್ಶಿಯಾಗಿ ಸಯ್ಯಿದ್ ಖಲೀಲುಲ್ ಬುಖಾರಿ ತಂಙಳ್ ಆಯ್ಕೆ

ಕಾಂತಪುರಂ ಎ.ಪಿ.ಮುಹಮ್ಮದ್ ಮುಸ್ಲಿಯಾರ್ ಅವರ ವಿಯೋಗ ನಂತರ ತೆರವಾಗಿದ್ದ ಸ್ಥಾನಕ್ಕೆ ಖಲೀಲುಲ್ ಬುಖಾರಿ ತಂಙಳ್ ಆಯ್ಕೆ

ಕೋಝಿಕ್ಕೋಡ್ : ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಅ್‌’ದಿನ್ ಅಕಾಡೆಮಿ ಚೇರ್ಮನ್ ಬದ್ರುಸ್ಸಾದಾತ್ ಸಯ್ಯಿದ್ ಇಬ್ರಾಹೀಮುಲ್ ಖಲೀಲ್ ಅಲ್-ಬುಖಾರಿ ಕಡಲುಂಡಿ ತಂಙಳ್ ಅವರನ್ನು ಸಮಸ್ತ ಕೇರಳ ಜಂಇಯತುಲ್ ಉಲಮಾದ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಕಾರಂದೂರು ಮರ್ಕಝ್ ನಲ್ಲಿ ನಡೆದ ಸಮಸ್ತ ಮುಶಾವರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಮಸ್ತ ಕಾರ್ಯದರ್ಶಿಯಾಗಿದ್ದ ಕಾಂತಪುರಂ ಎ.ಪಿ.ಮುಹಮ್ಮದ್ ಮುಸ್ಲಿಯಾರ್(ಚೆರಿಯೆ ಎ.ಪಿ. ಉಸ್ತಾದ್) ಅವರ ವಿಯೋಗ ನಂತರ ತೆರವಾಗಿದ್ದ ಸ್ಥಾನಕ್ಕೆ ಕಡಲುಂಡಿ ಖಲೀಲುಲ್ ಬುಖಾರಿ ತಂಙಳ್ ಅವರನ್ನು ಆಯ್ಕೆ ಮಾಡಲಾಯಿತು.

ಶೈಖುನಾ ಖಲೀಲ್ ತಂಙಳ್ ಅವರು Ideal Association For Minority Education Institutes ಕಾರ್ಯದರ್ಶಿ, ಅಖಿಲ ಭಾರತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಸ್ಥಾನಗಳನ್ನು ಸಹ ಹೊಂದಿದ್ದಾರೆ. ಗ್ಲೋಬಲ್ ಮೂವ್‌ಮೆಂಟ್ ಆಫ್ ಮಾಡರೇಟ್‌ಗಳ (global movement of moderates) ಸದಸ್ಯ, G20 ಧಾರ್ಮಿಕ ಸಾಮರಸ್ಯ ಶೃಂಗಸಭೆಯ ಸಂಘಟನಾ ಸಮಿತಿಯ ಸದಸ್ಯ, ಶಾಂತಿ ಕಾರ್ಯಕರ್ತರಿಗಾಗಿ ವಿಶ್ವಸಂಸ್ಥೆಯ ಕಾರ್ಯಕ್ರಮದ ಸದಸ್ಯ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮೂಲದ ಹಸ್ತಪ್ರತಿ ಸಂಘದ ಸದಸ್ಯ ಮುಂತಾದ ಪ್ರಮುಖ ಅಂತರರಾಷ್ಟ್ರೀಯ ಸ್ಥಾನಗಳನ್ನು ಹೊಂದಿದ್ದಾರೆ. ಅವರು ಮಲೇಷ್ಯಾ ಮೂಲದ ಇಂಟರ್‌ಫೇಯ್ತ್ ಇನಿಶಿಯೇಟಿವ್‌ನ ಮುಖ್ಯಸ್ಥರಾಗಿದ್ದಾರೆ.

ಸಯ್ಯಿದ್ ಖಲೀಲ್ ತಂಙಳ್ ಅವರು ಜಿ 20 ಶೃಂಗಸಭೆಯ ಭಾಗವಾಗಿ ಆಯೋಜಿಸಲ್ಪಡುವ ಅಂತರರಾಷ್ಟ್ರೀಯ ಧಾರ್ಮಿಕ ಸಾಮರಸ್ಯ ಶೃಂಗಸಭೆಗಳಲ್ಲಿ ಖಾಯಂ ಪ್ರತಿನಿಧಿಯಾಗಿದ್ದಾರೆ.ಆಸ್ಟ್ರೇಲಿಯಾ, ಜರ್ಮನಿ, ಚೀನಾ ಮತ್ತು ಅರ್ಜೆಂಟೀನಾದಲ್ಲಿ ಜಿ-20 ಧಾರ್ಮಿಕ ಸಾಮರಸ್ಯ ಸಮ್ಮೇಳನಗಳ ಹಾಗೂ ಮುಂದಿನ ವರ್ಷಗಳಲ್ಲಿ ಜಪಾನ್ ಮತ್ತು ಸೌದಿ ಅರೇಬಿಯಾದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪ್ರಮುಖ ಸಂಘಟಕರಲ್ಲಿ ಒಬ್ಬರಾಗಿದ್ದಾರೆ.

1
1
1

error: Content is protected !! Not allowed copy content from janadhvani.com