janadhvani

Kannada Online News Paper

ಪವಿತ್ರ ಹಜ್ ಮತ್ತು ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ- ‘ಮಖಾಮ್’ ಹೊಸ ಆವೃತ್ತಿ ಬಿಡುಗಡೆ

ಹಜ್ ಮತ್ತು ಉಮ್ರಾ ನಿರ್ವಹಿಸಲು ಬಯಸುವವರು ಏಜೆನ್ಸಿಗಳನ್ನು ಸಂಪರ್ಕಿಸದೆ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸ ಬಹುದಾಗಿದೆ.

✍️ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ‌ಕನ್ನಡಿಗ)

ಸೌದಿ ಅರೇಬಿಯಾ: ಜಗತ್ತಿನ ಕಟ್ಟಕಡೆಯ ಮುಸಲ್ಮಾನ ಕೂಡ ಪವಿತ್ರ ಹಜ್ ಉಮ್ರಾ ನಿರ್ವಹಿಸಬೇಕೆಂಬ ಗುರಿಯೊಂದಿಗೆ ಹಜ್ ಮತ್ತು ಉಮ್ರಾ ಸಚಿವಾಲಯವು ಮಖಾಮ್(maqam) ಪೋರ್ಟಲ್‌ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಇನ್ನು ಮುಂದೆ ಹಜ್ ಮತ್ತು ಉಮ್ರಾ ನಿರ್ವಹಿಸಲು ಬಯಸುವವರು ಏಜೆನ್ಸಿಗಳನ್ನು ಸಂಪರ್ಕಿಸದೆ
ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸ ಬಹುದಾಗಿದೆ.ಇದು ಹಜ್ ಮತ್ತು ಉಮ್ರಾ ನಿರ್ವಹಿಸಲು ಉದ್ದೇಶಿಸುವ ವ್ಯಕ್ತಿಗಳಿಗೆ ಆನ್‌ಲೈನ್ ವೀಸಾ, ವಸತಿ ಮತ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತದೆ. ಈ ಹಿಂದೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾದ ಈ ಯೋಜನೆಯನ್ನು ಹಲವಾರು ಸೇವಾ ನಿರ್ವಾಹಕರು ಬಳಸುತ್ತಿದ್ದರು.

https://maqam.gds.haj.gov.sa/Home/OTAs ಈ ಲಿಂಕ್‌ ತೆರೆದು ಅರ್ಜಿದಾರರ ದೇಶ ಮತ್ತು ಇತರ ಮಾಹಿತಿಯನ್ನು ಭರ್ತಿ ಮಾಡಿದರೆ, ಹೋಟೆಲ್‌ಗಳು ವಸತಿಗಾಗಿ ವಿಧಿಸುವ ಶುಲ್ಕ ಮತ್ತು ಇತರ ಮಾಹಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗಲಿದೆ.
ಹೊಸ ಪೋರ್ಟಲ್‌ನ ಮಾಹಿತಿಯ ಪ್ರಕಾರ, ಸೌದಿ ಅರೇಬಿಯಾದಲ್ಲಿ ವಸತಿ ಮತ್ತು ಸಾರಿಗೆ ವೆಚ್ಚವು 700 ರಿಯಾಲ್‌(15000ರೂ)ಗಳಿಗಿಂತ ಕಡಿಮೆಯಿದೆ.

ಸೌದಿ ಅರೇಬಿಯಾದ ವಿಷನ್ 2030 ರ ಪ್ರಕಾರ ಒಂದು ವರ್ಷದಲ್ಲಿ 3 ಕೋಟಿ ಉಮ್ರಾ ಯಾತ್ರಿಕರನ್ನು ದೇಶಕ್ಕೆ ಕರೆತರುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ.
ಸೌದಿ ಸರಕಾರದ ಈ ವಿಶೇಷ ಯೋಜನೆಯು ಹಜ್ ಮತ್ತು ಉಮ್ರಾ ನಿರ್ವಹಿಸಲು ಬಯಸುವ ಜಗತ್ತಿನ ಬಡ ಮುಸಲ್ಮಾನರಿಗೆ ಬಹಳಷ್ಟು ಉಪಕಾರಿಯಾಗಿದೆ.

error: Content is protected !! Not allowed copy content from janadhvani.com