janadhvani

Kannada Online News Paper

ಖತಾರ್: ಕಡಿಮೆ ವೇತನವಿರುವ ವಿದೇಶೀಯರ ಸಂಬಳ ಹೆಚ್ಚಳ

ದೋಹಾ: ಕಡಿಮೆ ವೇತನವಿರುವ ವಿದೇಶೀ ನೌಕರರ ಸಂಬಳವನ್ನು ಈ ವರ್ಷದ ಅಂತ್ಯದ ಒಳಗೆ ಕತಾರ್ ಹೆಚ್ಚಿಸುತ್ತದೆ ಎಂಬ ವಿಶ್ವಾಸವನ್ನು ಇಂಟರ್ ನ್ಯಾಷನಲ್ ಟ್ರೇಡ್ ಯೂನಿಯನ್ಸ್ ಕಾನ್ ಫೆಡರೇಷನ್ (ಐಟಿಯುಸಿ) ವ್ಯಕ್ತಪಡಿಸಿದೆ. ಐಟಿಯುಸಿ ಪ್ರಧಾನ ಕಾರ್ಯದರ್ಶಿ ಶರೋನ್ ಬರೋ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.

ಹೊಸ ಉದ್ಯೋಗದ ಸುಧಾರಣೆಗಳು ಮನೆ ಕಾರ್ಮಿಕರನ್ನೂ ಒಳಗೊಂಡಂತೆ ಎಲ್ಲಾ ಕೆಲಸಗಾರರನ್ನು ಒಳಗೊಳ್ಳಲಿದೆ. ಖತಾರ್ ಮನೆ ಕಾರ್ಮಿಕರಿಗಾಗಿ ಪ್ರತ್ಯೇಕ ಕಾನೂನು ಜಾರಿಗೊಳಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಕಾನೂನಿನಲ್ಲಿ ಮತ್ತಷ್ಟು ಸುಧಾರಣೆಗಳನ್ನು ಪರಿಗಣಿಸಲಾಗುವುದು. ಕೆಲಸಗಾರನು ಕಾರ್ಮಿಕ ಸಚಿವಾಲಯ ಅಥವಾ ಐಎಲ್ಓ ಕಚೇರಿಗೆ ದೂರು ನೀಡಬಹುದು. ಈ ದೂರುಗಳಿಗೆ ಪರಿಹಾರ ಕಾಣಲಾಗುವುದು ಅಥವಾ ಕಾರ್ಮಿಕ ವಿವಾದ ನಿರ್ಣಯ ಸಮಿತಿಗೆ ವರ್ಗಾಯಿಸಲಾಗುವುದು.

ಅಲ್ಲದೆ, 3 ವಾರಗಳಲ್ಲಿ ದೂರನ್ನು ಬಗೆಹರಿಸಲಾಗುವುದು. ಇದು ಈ ಸುಧಾರಣೆಗಳ ಪೈಕಿ ವಿಶೇಷ ಪರಿಗಣನೆಯಾಗಿದೆ ಎಂದು ಶರೋನ್ ಬರೋ ಹೇಳಿದರು. ದೇಶವನ್ನು ತೊರೆಯುವ  ವಿದೇಶೀ  ಕಾರ್ಮಿಕರಿಗೆ ಕಡ್ಡಾಯವಾಗಿರುವ  ನಿರ್ಗಮನ ಪರವಾನಗಿಯನ್ನು ನಿಲ್ಲಿಸುವ ಘೋಷಣೆಯು ಶೀಘ್ರದಲ್ಲೇ ಬರಲಿದೆ. ನಿರ್ಗಮನ ಪರವಾನಿಗೆ ಬದಲಾಗಿ ಹೊಸ ವ್ಯವಸ್ಥೆಯನ್ನು ಅಳವಡಿಸಲು ಕಾನೂನು ಕ್ರಮ  ಪೂರ್ಣಗೊಂಡಲ್ಲಿ  ಎಕ್ಸಿಟ್ ಪರವಾನಗಿಯನ್ನು  ನಿಲ್ಲಿಸಲಾಗುವುದು ಎಂದು ಬಾರೊ ಹೇಳಿದರು.

error: Content is protected !! Not allowed copy content from janadhvani.com