ಮಂಗಳೂರು: ಮುಸ್ಲಿಮ್ ಹೊರತಾದ ಭಾರತ ಸಂವಿಧಾನ ರಚಿಸುತ್ತೇವೆ, ಈ ದೇಶದ ಮುಸ್ಲಿಮರಿಗೆ ಸರಕಾರಿ ಸವಲತ್ತನ್ನು ನಿರಾಕರಿಸುವ ಆಡಳಿತ ವ್ಯವಸ್ಥೆಯನ್ನೂ ಸೃಷ್ಟಿಸುತ್ತೇವೆ ,ಎಂಬಿತ್ಯಾದಿಯಾಗಿ ವಿ.ಎಚ್.ಪಿ ನಾಯಕ ಪ್ರವೀಣ್ ತೊಗಾಡಿಯಾ ರವರು ತಮ್ಮ ಭಾಷಣದಲ್ಲಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ಮತ್ತು ಇಂತಹ ಹೇಳಿಕೆ ನಿರ್ಲಕ್ಷ್ಯಕ್ಕೆ ಅರ್ಹವಾಗಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷರಾದ ಕೆ.ಅಶ್ರಫ್ ರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದಂತಹ ಪ್ರಾಚೀನ ಪರಂಪರೆಯುಳ್ಳ ಭೌಗೋಳಿಕ, ನಿಸರ್ಗ ವ್ಯವಸ್ಥೆಯಲ್ಲಿ ಕೊಡು ಕೊಳ್ಳುವಿಕೆ ರಕ್ತ ಸಹಜ.ಇಂತಹಾ ಜನ ಸಹಕಾರ ವ್ಯವಸ್ಥೆಯಲ್ಲಿ ಧರ್ಮಾನುಯಾಯಿ ಸಮುದಾಯ ಹೊರತಾದ ಸಂವಿಧಾನ ವ್ಯವಸ್ಥೆ ಸೃಷ್ಟಿಸುವುದು ಅಪ್ರಾಯೋಗಿಕ ಎಂದು ಪ್ರವೀಣ್ ತೊಗಾಡಿಯಾರ ಅನುಯಾಯಿಗಳು ಅರಿಯುವುದು ಒಳಿತು.
ಪ್ರವೀಣ್ ತೊಗಾಡಿಯಾ ಅನುಯಾಯಿಗಳು ಅಂತಹ ಕನಸು ಕಾಣುವುದನ್ನು ಈಗಲೇ ತ್ಯಜಿಸುವುದು ಅಷ್ಟೇ ಒಳಿತು. ಭಾರತ ನೆಲೆ ಹೊಂದಿರುವುದೇ ಶಾಸನಗಳ ಚರಿತ್ರೆಯಿಂದ ಎಂದು ಇತಿಹಾಸವೇ ಹೇಳುತ್ತದೆ. ಭಾರತ ಉಪಖಂಡದ ಅಷ್ಟೂ ಶಾಸನಗಳು ಧರ್ಮಾಧಾರಿತ ವಾಗಿದೆ ಮತ್ತು ಧರ್ಮಕ್ಕೆ ಆತಿಥ್ಯ ನೀಡಿದ ಹೊರತಾದ ಒಂದೇ ಒಂದು ಶಾಸನವೂ ಈ ದೇಶದಲ್ಲಿ ಲಭ್ಯವಿಲ್ಲ ಎಂಬುದನ್ನು ತೊಗಾಡಿಯಾ ಅನುಯಾಯಿಗಳು ಅರಿಯುವುದು ಒಳಿತು ಎಂದು ಕೆ.ಅಶ್ರಫ್(ಮಾಜಿ ಮೇಯರ್)ಅಧ್ಯಕ್ಷರು,ದ.ಕ.ಮುಸ್ಲಿಮ್ ಒಕ್ಕೂಟ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.