ಪುತ್ತೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಟಿಕೇಟಿಗಾಗಿ ಹಲವು ರೀತಿಯ ತಂತ್ರಗಾರಿಕೆ ನಡೆಯುತ್ತಿದೆ.ಪುತ್ತೂರು ಬಣ ರಾಜಕೀಯದ ಸದ್ದು ಜೋರಾಗಿದ್ದು ಮತ್ತೊಂದು ಕಡೆ ಈಗಲೂ ಬಿಜೆಪಿಯಲ್ಲಿರುವ ಓರ್ವರ ಹೆಸರು ಮುಂಚೂಣಿಯಲ್ಲಿದೆ.
ಕಾಂಗ್ರೆಸ್ ಯಾರಿಗೆ ಬೇಕಾದರು ಟಿಕೇಟ್ ನೀಡಲಿ, ಆದರೆ ಬೇರೆ ಪಕ್ಷದಿಂದ ದಿಢೀರನೆ ಸೀಟಿನ ಆಸೆಗಾಗಿ ಬಂದವರಿಗೆ ಅವಕಾಶ ಕೊಟ್ಟರೆ ಪಕ್ಷೇತರ ಅಭ್ಯರ್ಥಿಯನ್ನು ನಿಲ್ಲಿಸಿ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಖ್ಯಾತ ವಾಗ್ಮಿ, ಚಿಂತಕ ಇಕ್ಬಾಲ್ ಬಾಳಿಲ ತಿಳಿಸಿದ್ದಾರೆ.
ಈ ವಿಚಾರದಲ್ಲಿ ಯುವಕರ ಆವೇಶ ಶಬ್ದವಾಗಿರುವ ಇಕ್ಬಾಲ್ ಬಾಳಿಲ, ಯುವಕರನ್ನು ಸಂಘಟಿಸಿ ಈಗಾಗಲೇ ಕಾರ್ಯಪ್ರವೃತರಾಗಿದ್ದಾರೆ.
ಕಾಂಗ್ರೆಸ್ ಎಂಬುವುದು ಜಾತ್ಯಾತೀತ ಪಕ್ಷ, ಅದು ಹಾಗೆಯೇ ಮುಂದುವರಿಯಬೇಕು. ಆದರೆ ಇತ್ತೀಚಿನ ಕೆಲವೊಂದು ನಡೆಯು ವಿಷಾದನೀಯ.
ಪುತ್ತೂರು ಕಾಂಗ್ರೆಸಿನಲ್ಲಿ ನಿಲ್ಲಲು ಇಲ್ಲಿ ಬೇಕಾದಷ್ಟು ಅಭ್ಯರ್ಥಿಗಳಿರುವಾಗ ಅದರ ನಡುವೆ ಬೇರೆ ಪಕ್ಷದಿಂದ ಬಂದವರಿಗೆ ಅವಕಾಶ ಕೊಡುವುದು ನ್ಯಾಯವಲ್ಲ, ಅದು ಕೂಡಾ ಅವಕಾಶ ಕೊಡುವುದಾದರೆ ಮಾತ್ರ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಎಂದು ಹೇಳುವವರಿಗೆ ಹೇಗೆ ಟಿಕೇಟ್ ಕೊಡಲು ಸಾದ್ಯ.? ಹಾಗಾದರೆ ಪಕ್ಷದ ತತ್ವ ಸಿದ್ದಾಂತಗಳೆಲ್ಲ ಬಡವರಿಗೆ ಮಾತ್ರವಾ.? ಇಲ್ಲಿ ನ್ಯಾಯಯುತವಾಗಿ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಅವಕಾಶ ಕೊಡಿ, ಅದು ಯಾರಾದರು ಸೈ. ಇಲ್ಲವಾದರೆ ಪಕ್ಷೇತರ ಅಭ್ಯರ್ಥಿಯನ್ನು ನಿಲ್ಲಿಸಿ ಅಖಾಡಕ್ಕೆ ಇಳಿಯಲಿದ್ದೇವೆ ಎಂದು ಬಾಳಿಲ ತಿಳಿಸಿದ್ದಾರೆ.
ಈ ಕುರಿತು ಈಗಾಗಲೇ ಅಭಿಪ್ರಾಯವನ್ನು ಹಂಚಿಕೊಂಡಾಗ ನೂರಾರು ಯುವಕರು ಕೈ ಜೋಡಿಸಿದ್ದಾರೆ ಎಂದು ಬಾಳಿಲ ತಿಳಿಸಿದ್ದಾರೆ.
ಕಾಂಗ್ರೇಸಿನಲ್ಲಿ ನ್ಯಾಯಯುತ ಅವಕಾಶಗಳು ಲಭಿಸಲೆಂದು ಈ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.