ರಿಯಾದ್: ಸೌದಿ ಅರೇಬಿಯಾಕ್ಕೆ ಆಗಮಿಸಿರುವ ವಿದೇಶಿ ಉದ್ಯೋಗಿಯನ್ನು ಮೊದಲ ಮೂರು ತಿಂಗಳ (Probation Period) ಪರೀಕ್ಷಣಾ ಅವಧಿಯಲ್ಲಿ ಮನೆಗೆ ಕಳುಹಿಸಲು, ಉದ್ಯೋಗದಾತರಿಗೆ ಆನ್‌ಲೈನ್‌ನಲ್ಲಿ ನಿರ್ಗಮನ ವೀಸಾವನ್ನು( Exit Visa) ಪಡೆಯಲು ಸೌದಿ ಪಾಸ್‌ಪೋರ್ಟ್ ನಿರ್ದೇಶನಾಲಯವು (General Directorate of Passports-Jawazat) ಅವಕಾಶ ನೀಡಿದೆ. ಈ ಸೌಲಭ್ಯವು ಖಾಸಗಿ ವಲಯದ ವಿದೇಶಿ ಉದ್ಯೋಗಿಗಳನ್ನು ಸ್ವದೇಶಕ್ಕೆ ಮರಳಿಸಲು ಒದಗಿಸಲಾಗಿದೆ.
ಪ್ರೊಬೇಷನರಿ ಅವಧಿ(Probationary Period) ಯಲ್ಲಿ ಕಾರ್ಮಿಕರನ್ನು ಸ್ವದೇಶಕ್ಕೆ ಕಳಿಸಲು ಜವಾಝಾತ್(Jawazat) ನಿರ್ದೇಶನಾಲಯವನ್ನು ನೇರವಾಗಿ ಸಂಪರ್ಕಿಸುವ ಅಗತ್ಯವಿಲ್ಲ. ಅಬ್ಶೀರ್ ಬ್ಯುಸಿನೆಸ್ ವೇದಿಕೆಯು(Absher Business Platform) ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳು ತಮ್ಮ ಕೆಲಸಗಾರರಿಗೆ ಸುಲಭವಾಗಿ ಅಂತಿಮ ನಿರ್ಗಮನವನ್ನು(Fainal Exit) ಒದಗಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆ ಉಚಿತವಾಗಿದೆ.
ಪರೀಕ್ಷಣಾ ಅವಧಿಯಲ್ಲಿ ವಿದೇಶಿ ಉದ್ಯೋಗಿಗಳಿಗೆ ಆನ್‌ಲೈನ್‌ನಲ್ಲಿ ನೀಡಲಾದ ಅಂತಿಮ ನಿರ್ಗಮನವನ್ನು ನಂತರ ರದ್ದುಗೊಳಿಸಲಾಗುವುದಿಲ್ಲ ಮತ್ತು ಇಕಾಮಾ ಪಡೆಯುವುದಕ್ಕೂ ಸಾಧ್ಯವಿಲ್ಲ ಎಂದು ಜವಾಝಾತ್ ನಿರ್ದೇಶನಾಲಯ ತಿಳಿಸಿದೆ.