ರಿಯಾದ್: ಶುಕ್ರವಾರದ ಜುಮುಅ ಖುತ್ಬಾ ಬೋಧಿಸುವ ಹಲವು ಇಮಾಮ್ಗಳನ್ನು ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯ (Ministry of Islamic Affairs Saudi Arabia) ವಜಾಗೊಳಿಸಿದೆ.
ಸಚಿವಾಲಯಕ್ಕೆ ತಿಳಿಸದೆ ಶುಕ್ರವಾರ ‘ಖುತ್ಬಾ’ ನಿರ್ವಹಿಸಲು ಬದಲಿ ಇಮಾಮ್ಗಳನ್ನು ನಿಯೋಜಿಸಿದ್ದಕ್ಕಾಗಿ ಹಲವಾರು ಇಮಾಮ್ಗಳನ್ನು ವಜಾ ಮಾಡಲಾಗಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಶುಕ್ರವಾರದ “ಜುಮುಅ ಖುತ್ಬಾ” ವಿಷಯವನ್ನು ಸಚಿವಾಲಯವು ಮೊದಲೇ ನಿರ್ಧರಿಸಿ ಅಧಿಸೂಚನೆಯನ್ನು ಕಳುಹಿಸುವುದು ವಾಡಿಕೆ. ಇದನ್ನು ನಿರ್ಲಕ್ಷಿಸಿ, ತನ್ನದೇ ಆದ ವಿಷಯವನ್ನು ಆಯ್ಕೆ ಮಾಡಿ ಖುತ್ಬಾ ನಿರ್ವಹಿಸಲು ಸಚಿವಾಲಯವು ಅವಕಾಶ ನೀಡುವುದಿಲ್ಲ.
ಆದರೆ, ಅನೇಕ ಬದಲಿ ಇಮಾಮರು ತನ್ನದೇ ಆದ ವಿಷಯವನ್ನು ಆರಿಸಿ, ಖುತ್ಬಾ ನಿರ್ವಹಿಸಿರುವುದು ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ಅನುಮತಿ ಪಡೆಯದೆ ಬದಲಿಗಳನ್ನು ಕಳುಹಿಸಿರುವ ಇಮಾಮರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.
















ಇನ್ನಷ್ಟು ಸುದ್ದಿಗಳು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ
ಏರ್ ಇಂಡಿಯಾ ಎಕ್ಸ್ಪ್ರೆಸ್: ಹೆಚ್ಚಿನ ವಿಮಾನ ಸೇವೆಗಳ ಪುನರಾರಂಭ