ದಮ್ಮಾಮ್: ಅಲ್ ಮದೀನ ಮಂಜನಾಡಿ ಇದರ ಅಲ್ ಹಸ್ಸಾ ನೂತನ ಸಮಿತಿಯನ್ನು ಹಾರಿಸ್ ಕಾಜೂರು’ರವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಮಾಡಲಾಯಿತು.
ಅಲ್ ಮದೀನ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ರೆಹಮಾನ್ ಮದನಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲ್ ಮದೀನ ದಮ್ಮಾಂ ವಲಯ ಸಮಿತಿಯ ಅಧ್ಯಕ್ಷರಾದ ಮುಹಮ್ಮದ್ ಮಲೆಬೆಟ್ಪು ನಿರ್ವಹಿಸಿದರು.
ಹೊಸ ಸಮಿತಿಯ ಆಯ್ಕೆ ಪ್ರಕ್ರಿಯೆಗೆ ದಮ್ಮಾಮ್ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಆಬಿದ್ ಕೊಡಗು ನೇತೃತ್ವ ವಹಿಸಿದರು.
2023/25 ನೇ ಸಾಲಿನ ನೂತನ ಸಮಿತಿ
ಸಲಹಾ ಸಮಿತಿ ಚೆಯರ್ಮೇನ್: ಇಬ್ರಾಹೀಂ ಸಅದಿ ಮಚ್ಚಂಪಾಡಿ
ಸಲಹಾ ಸಮಿತಿ ಸದಸ್ಯರು:
ಅಹ್ಮದ್ ಸಅದಿ ಕಾಸರಗೋಡು
ಇಬ್ರಾಹೀಂ ದೇರಳಕಟ್ಪೆ
ಅಧ್ಯಕ್ಷರು: ಮೊಯ್ದೀನ್ ಹಾಜಿ ಮಂಜನಾಡಿ
ಉಪಾಧ್ಯಕ್ಷರು:
ಹಾರಿಸ್ ಕಾಜೂರು
ಹಮೀದ್ ಕೈರಂಗಳ
ಪ್ರಧಾನ ಕಾರ್ಯದರ್ಶಿ: ಅಬ್ದುಲ್ ಅಝೀಝ್ ಉರುಮನೆ
ಕಾರ್ಯದರ್ಶಿ: ಇಸ್ಹಾಕ್ ಸಿ.ಐ.ಫಜೀರ್
ಖೋಶಾಧಿಕಾರಿ: ಹುಸೈನ್ ಮಂಜನಾಡಿ
ಸಮಿತಿ ಸದಸ್ಯರುಗಳು:
ಅಸ್ರು ಬಜಪೆ
ಅಝೀಝ್ ಆತ್ತೂರು
ನಝೀರ್ ಹಯಾತ್ತ್
ಅಬ್ದುಲ್ ರಝಾಖ್ ಕಡೆಂಬಾರು
ಅಬೂಬಕ್ಕರ್ ಕಿಲ್ಲೂರು
ಸಿರಾಜ್ ಸಾಲತ್ತೂರು
ಇಖ್ಬಾಲ್ ಗುಲ್ವಾಡಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಲ್ ಮದೀನ ಜನರಲ್ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಉಸ್ತಾದರು, ಬಹು: ಶರಫುಲ್ ಉಲಮಾರ ದಿವ್ಯ ನೇತ್ರತ್ವದಲ್ಲಿ ಸ್ಥಾಪನೆಗೊಂಡ ಅಲ್ ಮದೀನ… ಮತ ಲೌಕಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜ ಮುಖಿ ಸೇವೆಯಲ್ಲಿ ಸಮುದಾಯಕ್ಕೆ ಅರ್ಪಿಸಿದ ಸಾಧನೆಯನ್ನು ಮತ್ತು ಮುಂದಿನ ಬಹುಮುಖ ಯೋಜನೆಗಳನ್ನು ಸವಿಸ್ತರವಾಗಿ ವಿವರಿಸಿದರು.
ಅಲ್ ಮದೀನ ಮಂಜನಾಡಿ ಆರ್ಗನೈಸರ್ ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಅಹ್ಮದ್ ಸಅದಿ ಕಾಸರಗೋಡು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಲಯ ಸಮಿತಿ ನೇತಾರರಾದ ಇಸ್ಮಾಯಿಲ್ ಪೊಯ್ಯಲ್ KCF ರಾಷ್ಟ್ರೀಯ ಸಮಿತಿ ಸದಸ್ಯರಾದ ಅಸ್ರು ಬಜಪೆ ಮತ್ತು ಇನ್ನಿತರ ನೇತಾರರು ಭಾಗವಹಿಸಿದ್ದರು.
ಕೊನೆಯಲ್ಲಿ ಕಾರ್ಯದರ್ಶಿ ಇಸ್ಹಾಕ್ ಫಜೀರ್ ವಂದಿಸಿದರು.