ಮಂಗಳೂರು: ನಗರದ ಹೊರವಲಯದ ಕೃಷ್ಣಾಪುರ 4ನೇ ಬ್ಲಾಕ್ನಲ್ಲಿ ದಿನಸಿ ಅಂಗಡಿ ವ್ಯಾಪಾರಸ್ಥ ಜಲೀಲ್ ಅವರ ಹತ್ಯಯನ್ನು ಸುನ್ನಿ ಉಮರಾ ಅಸೋಸಿಯೇಶನ್ ತೀವ್ರವಾಗಿ ಖಂಡಿಸುತ್ತಿದೆ. ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ SUA ಆಗ್ರಹಿಸಿದೆ.
ಕಾಟಿಪಳ್ಳದ ನೈತಂಗಡಿಯಲ್ಲಿ ದಿನಸಿ ವ್ಯಾಪಾರ ನಡೆಸುತ್ತಿದ್ದ ಜಲೀಲ್,ಅವರ ಅಂಗಡಿಯಲ್ಲಿದ್ದ ವೇಳೆ ದುಷ್ಕರ್ಮಿಗಳು ಚೂರಿ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಇಂತಹ ಸಮಾಜಘಾತುಕ ಘಟನೆಗಳು ಮರುಕಳಿಸುತ್ತಿರುವುದಕ್ಕೆ ಇಲ್ಲಿನ ಕಾನೂನು ಸುವ್ಯವಸ್ತೆಯೇ ಕಾರಣವಾಗಿದೆ. ಪೊಲೀಸ್ ಇಲಾಕೆಯು ಜಲೀಲ್ ಹತ್ಯೆ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ SUA ಸುನ್ನಿ ಉಮರಾ ಅಸೋಸಿಯೇಶನ್ ಒತ್ತಾಯಿಸಿದೆ.