janadhvani

Kannada Online News Paper

ಜಲೀಲ್ ಹತ್ಯೆ: ದುಷ್ಕರ್ಮಿಗಳ ಬಂಧನಕ್ಕೆ ಎಸ್ಸೆಸ್ಸೆಫ್ ಆಗ್ರಹ

ಕರಾವಳಿಯಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವನ್ನು ವಿಫಲಗೊಳಿಸದಿದ್ದರೆ ಅರಾಜಕತೆ ಉಂಟಾಗುವ ಅಪಾಯ ಇದೆ.

ಮಂಗಳೂರು: ಸುನ್ನಿ ಸಂಘಟನಾ ಕಾರ್ಯಕರ್ತ, ಅಮಾಯಕ ಜಲೀಲ್ ರನ್ನು ಹತ್ಯೆ ಮಾಡಿರುವ ದುಷ್ಕೃತ್ಯಗಳ ಕೃತ್ಯ ಅತ್ಯಂತ ಖಂಡನೀಯವಾಗಿದ್ದು, ಪೋಲಿಸ್ ಇಲಾಖೆಯು ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಎಸ್ಸೆಸ್ಸೆಫ್(Sunni Students Federation) ರಾಜ್ಯಸಮಿತಿ ಆಗ್ರಹಿಸಿದೆ.

ಕರಾವಳಿಯಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರವನ್ನು ವಿಫಲಗೊಳಿಸದಿದ್ದರೆ ಅರಾಜಕತೆ ಉಂಟಾಗುವ ಅಪಾಯ ಇದೆ. ಇದನ್ನು ಮನಗಂಡು ಸರಕಾರ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸಮಿತಿಯು ಪ್ರಕಟನೆಯಲ್ಲಿ ತಿಳಿಸಿದೆ.

ಫಾಝಿಲ್ ಹತ್ಯೆಯ ಬಳಿಕ ಶಾಂತವಾಗಿದ್ದ ಸುರತ್ಕಲ್‌ನಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ.’ಲತೀಫಾ ಸ್ಟೋರ್’ ಎಂಬ ದಿನಸಿ ಅಂಗಡಿ ಹೊಂದಿದ್ದ ಜಲೀಲ್ ಅವರು, ಅಂಗಡಿಯಲ್ಲಿದ್ದ ವೇಳೆ ಅವರ ಎದೆಯ ಭಾಗಕ್ಕೆ ಚೂರಿ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದು,ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.