ರಿಯಾದ್: ಮಹಿಳೆಯರಿಗೆ ಚಾಲನಾ ಪರವಾನಗಿ ನೀಡಲಾದರೆ, ವಿದೇಶೀ ಚಾಲಕರಿಗೆ ಕೆಲಸ ನಷ್ಟಹೊಂದುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ವರ್ಷದ ಜೂನ್ 24 ರಿಂದ ಮಹಿಳೆಯರಿಗೆ ಪರವಾನಗಿ ನೀಡಲು ಸೌದಿ ಸಚಿವ ಸಂಪುಟ ನಿರ್ಧರಿಸಿತ್ತು.
ಈ ವರ್ಷ ಖಾಸಗಿ ವಲಯದಲ್ಲಿ ಚಾಲಕರಾಗಿ ನೇಮಕ ಗೊಂಡವರ ಸಂಖ್ಯೆಯು ಕಳೆದ ವರ್ಷಕ್ಕಿಂತ 30% ಕಡಿಮೆಯಾಗಿದೆ. ಡಿಸೆಂಬರ್ ಒಳಗೆ, ಹೆಚ್ಚು ವಿದೇಶಿ ಚಾಲಕರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ಸೌದಿಯಲ್ಲಿ, ಎರಡು ಲಕ್ಷ ಮನೆ ಚಾಲಕರು ಸೇರಿದಂತೆ ಹತ್ತು ಲಕ್ಷ ವಿದೇಶೀಯರು ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ಪರವಾನಗಿ ನೀಡುವ ನಿರ್ಧಾರದಿಂದಾಗಿ ವಿದೇಶಿ ಚಾಲಕರ ನೇಮಕಾತಿಯು ಗಣನೀಯವಾಗಿ ಕಡಿಮೆಯಾಗಿದೆ ಎನ್ನಲಾಗಿದೆ.
ಮಹಿಳಾ ಚಾಲಕರು ಜೂನ್ ನಿಂದ ಟಾಕ್ಸಿ ಸೇವೆಯಲ್ಲಿರುತ್ತಾರೆ. ಮಹಿಳೆಯರಿಗಾಗಿ ಮಹಿಳಾ ಟ್ಯಾಕ್ಸಿಗಳು ಚಾಲನೆಗೆ ಬರಲಿವೆ. ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಟ್ಯಾಕ್ಸಿ ಸೇವೆಗಳನ್ನು ಒದಗಿಸುವ ಉಬರ್ ಮತ್ತು ಕರೀಮ್ ಮುಂತಾದ ಕಂಪೆನಿಗಳು, ಸ್ಥಳೀಯ ಮಹಿಳೆಯರಿಗೆ ಚಾಲನೆ ಪರಿಶೀಲನೆ ನೀಡುವ ಒಪ್ಪಂದಕ್ಕೆ ಸಹಿ ಹಾಕಿವೆ.
ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಟ್ಯಾಕ್ಸಿ ಸೇವೆಯನ್ನು ಬಯಸುವವರ ಪೈಕಿ ಶೇಕಡಾ 70 ಮಹಿಳೆಯರಾಗಿದ್ದಾರೆ. ಆದ್ದರಿಂದ, ಮಹಿಳಾ ಚಾಲಕರನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ಆಯ್ಕೆ ಮಾಡಿ ಮಹಿಳೆಯರಿಗೆ ಹೆಚ್ಚು ಅನುಕೂಲಕರವಾಗಿ ಯಾತ್ರೆ ಮಾಡಬಹುದು ಎಂದು ಅಂದಾಜಿಸಲಾಗಿದೆ.