ದಮ್ಮಾಮ್ :ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ದಮ್ಮಾಮ್ ವಲಯ ಅಧೀನದ ದಮ್ಮಾಮ್ ಘಟಕದಲ್ಲಿ ಬಹುಮಾನ್ಯ ಅಸ್ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ಮತ್ತು ಪದ್ಮ ಶ್ರೀ ವಿಜೇತ ಹರೇಕಳ ಹಾಜಬ್ಬ ರವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.19 ಡಿಸೆ೦ಬರ್ 2022 ಸೋಮವಾರ ಸಂಜೆ ದಮ್ಮಾಮ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹು ತಂಙಳ್ ರವರು ದುಆ ನೆರವೇರಿಸಿದರು.ಡಿಕೆಯಸ್ಸಿ ಕೇಂದ್ರ ಸಮಿತಿ ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಸನ್ ಮೂಡುತೋಟ, ಡಿಕೆಯಸ್ಸಿ ಜಿಲ್ಲಾ ಕೋಶಾಧಿಕಾರಿ ಝೈನುದ್ದೀನ್ ಪುತ್ತೂರು, ದಮ್ಮಾಮ್ ಘಟಕದ ಅಧ್ಯಕ್ಷ ಅಬೂಬಕ್ಕರ್ ಅಜಿಲಮೊಗರು, ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸೂರಿಂಜೆ, ಕೇಂದ್ರ ಸಮಿತಿ ಜೊತೆ ಕಾರ್ಯದರ್ಶಿ ಅಬೂಬಕ್ಕರ್ ಬರ್ವ, ಸ್ಥಾಪಕ ಸದಸ್ಯ ಅಬ್ದುಲ್ ಅಝೀಝ್ ಮೂಡುತೋಟ, ಫ್ಯಾಮಿಲಿ ಮುಲಾಖಾತ್ 2022 ಚೇರ್ಮ್ಯಾನ್ ಹಸನ್ ಬಾವಾ ಕುಪ್ಪೆಪದವು, ಮುಹಮ್ಮದ್ ಕೊಂಚಾರ್, ಡಿಕೆಯಸ್ಸಿ ದಮ್ಮಾಮ್ ಯೂತ್ ವಿಂಗ್ ಅಧ್ಯಕ್ಷ ಝಬೀರ್ ಮಂಗಳೂರು ಹಾಜರಿದ್ದರು.ಡಿಕೆಯಸ್ಸಿ ದಮ್ಮಾಮ್ ಘಟಕದ ವತಿಯಿಂದ ಡಿಕೆಯಸ್ಸಿ ಅಧೀನದ ಮರ್ಕಝ್ ತಅಲೀಮಿಲ್ ಇಹ್ಸಾನ್ ಮೂಳೂರು ಇದರ ಕಾರ್ಯಾಧ್ಯಕ್ಷರೂ , ಜಿಲ್ಲಾ ಸಮಿತಿ ಅಧ್ಯಕ್ಶರೂ ಆದ ಬಹು. ಅಸ್ಸಯ್ಯಿದ್ ಅಹ್ಮದ್ ಮುಖ್ಥಾರ್ ತಂಙಳ್, ಭಾರತ ಸರ್ಕಾರದ ಪದ್ಮ ಶ್ರೀ ವಿಜೇತ, ಅಕ್ಷರ ಸಂತ
ಹರೇಕಳ ಹಾಜಬ್ಬ ಹಾಗೂ ಮಕ್ಕ, ಮದೀನಾ, ಜಿದ್ದಾ ಡಿಕೆಯಸ್ಸಿ ಮುಲಾಖಾತ್, ರಿಯಾದ್ ನ ಎಲ್ಲಾ ಸಮಾರಂಭಗಳಲ್ಲಿ ಬಹು ತಂಙಳ್ ರವರೊಂದಿಗ ಪ್ರಯಾಣ ಯಾತ್ರೆಯ ಸುವ್ಯವಸ್ಥೆ ಮಾಡಿಕೊಟ್ಟ ಜನಾಬ್ ಅಬೂಬಕ್ಕರ್ ಬರ್ವ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಡಿಕೆಯಸ್ಸಿ ಖಾದಿಮ್ ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
Jazaakumullaahu Khair
ISMAIL KATIPALLA, DAMMAM