janadhvani

Kannada Online News Paper

ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಹಣಾ ಸಮಿತಿ ವಾರ್ಷಿಕ ಪ್ರಯುಕ್ತ ಬ್ಲಡ್ ಕ್ಯಾಂಪ್- ಯಶಸ್ವಿಗೆ SMA ಕರೆ

ವಿಟ್ಲ: ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಾಹಣ ಸಮಿತಿಯ ವಾರ್ಷಿಕೋತ್ಸವ ಪ್ರಯುಕ್ತ ನಡೆಯುವ ಬ್ಲಡ್ ಕ್ಯಾಂಪ್ ಸಭಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು SMA ವಿಟ್ಲ ರೀಜಿನಲ್ ಸಮಿತಿ ಕರೆ ನೀಡಿದೆ.ಸುನ್ನಿ ಕೊಡಿನೇಶನ್ ಸಮಿತಿ ವಿಟ್ಲ ಇದರ ಆಶ್ರಯದಲ್ಲಿ ಡಿ.18 ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ವಿಟ್ಲ ಆಂಬ್ಯಲೆನ್ಸ್ ನಿರ್ವಹಣಾ ಸಮಿತಿಯ ವಾರ್ಷಿಕ ಪ್ರಯುಕ್ತ ನಡೆಯುವ ” ಬೃಹತ್ ರಕ್ತದಾನ ಶಿಬಿರ ಹಾಗೂ ಅಯ್ದ ಬಡ ಕ್ಯಾನ್ಸರ್, ಕಿಡ್ನಿ ರೋಗಿಗಳಿಗೆ ಸಹಾಯ ಹಸ್ತ ಮತ್ತು ಸಾರ್ವಜನಿಕ ಸಭಾ ಕಾರ್ಯಕ್ರಮ”ವಿಟ್ಲ ಬ್ರೈಟ್ ಆಡಿಟೋರಿಯಂ ಸಭಾಂಗಣದಲ್ಲಿ ಜರಗಲಿದೆ.ಈ ಸಮಾರಂಭದಲ್ಲಿ ಹಲವು ಸಾಮಾಜಿಕ, ಧಾರ್ಮಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ವಿಟ್ಲ SMA ರೀಜನಲ್ ಸಮಿತಿ ಅಧ್ಯಕ್ಷರಾದ ಹಕೀಮ್ ಶಾಂತಿನಗರ ಪತ್ರಿಕಾ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.

error: Content is protected !! Not allowed copy content from janadhvani.com