ದುಬೈ: ಗೋವಿನ ಮೂತ್ರ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ದುಬೈ ಪುರಸಭೆಯ ಆಹಾರ ಭದ್ರತಾ ಇಲಾಖೆಯ ಮುಖ್ಯಸ್ಥ ಈಮಾನ್ ಅಲ್ ಬಸ್ತಾಕಿ ಹೇಳಿದ್ದಾರೆ.ದುಬೈನಲ್ಲಿ ಒಂದೆರಡು ಸೂಪರ್ ಮಾರ್ಕೆಟ್ ಗಳಲ್ಲಿ ಗೋಮೂತ್ರ ಮಾರಾಟ ಮಾಡುವ ಬಗ್ಗೆ ವಾಟ್ಸ್ ಆ್ಯಪ್ ಪ್ರಚಾರಗಳಿಗೆ ಬಸ್ತಾಕಿ ಪ್ರತಿಕ್ರಿಯೆ ನೀಡುತ್ತಾ ವ್ಯಕ್ತ ಪಡಿಸಿದರು.
ಯಾವುದೇ ಕಂಪನಿಗಳು ಅವುಗಳನ್ನು ವಿತರಿಸುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿಲ್ಲ, ವ್ಯಾಟ್ಸ್ ಆ್ಯಪ್‌ನಲ್ಲಿ ಹರಡುವುದು ನಕಲಿ ಸುದ್ದಿಯಾಗಿರಬಹುದು,ದೇರಾ ಮತ್ತು ಬರ್ ದುಬೈ ಸೂಪರ್ ಮಾರ್ಕೆಟ್ ಗಳಲ್ಲಿ ಪರಿಶೋಧನೆ ನಡೆಸಿದಾಗ ಅಲ್ಲಿ ಗೋಮೂತ್ರ ಮಾರಾಟ ಕಂಡುಬಂದಿಲ್ಲ. ವಾಟ್ಸಾಪ್ ಸಂದೇಶಗಳು ಕಾರ್ಪೊರೇಷನ್ ಕಚೇರಿಗೂ ಲಭಿಸಿದೆ.
ಸಂದೇಶದಲ್ಲಿ 50 ml ಗೋಮೂತ್ರಕ್ಕೆ ಎರಡು ದಿರ್ಹಂ ಎಂದು ನಮೂದಿಸಿದ ಬಾಟಲಿಯ ಚಿತ್ರ ಕೂಡಾ ಸಂದೇಶದಲ್ಲಿತ್ತು.ಸೂಪರ್ ಮಾರ್ಕೆಟ್ ನಲ್ಲಿನ ಶೆಲ್ಫ್ ನಲ್ಲಿ ಜೋಡಿಸಲ್ಪಟ್ಟ ಚಿತ್ರ ಕೂಡ ರವಾನೆಯಾಗಿತ್ತು. ಸೂಪರ್ಮಾರ್ಕೆಟ್‌ನ ಮೂಲಗಳು ಕೂಡ ಗೋಮೂತ್ರ ಮಾರಾಟವಾಗಲಿಲ್ಲ ಎಂದು ಸ್ಪಷ್ಟಪಡಿಸಿದೆ.
ಗೊಮೂತ್ರವು ಔಷಧೀಯ ಗುಣಹೊಂದಿದೆ ಎನ್ನುವ ರೀತಿಯಲ್ಲಿ ದಾರಿತಪ್ಪಿಸುತ್ತಾ ಉತ್ತರ ಭಾರತದಲ್ಲಿ ಗೊಮೂತ್ರವನ್ನು ವ್ಯಾಪಕವಾಗಿ ಮಾರಾಟ ಮಾಡಲಾಗುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲ. ಕೆಲವರು ಹಸುವಿನ ಹಾಲಿಗಿಂತಲೂ ಗೂಮೂತ್ರದಲ್ಲಿ ಔಷಧೀಯ ಗುಣ ಇದೆ ಎನ್ನುವ ಪ್ರಚಾರವನ್ನು ಕೂಡಾ ಹರಡುತ್ತಿದ್ದಾರೆ.
ಭಾರತೀಯ ಸುದ್ದಿಪತ್ರಿಕೆಯೊಂದು ಗೂಮೂತ್ರ ವ್ಯಾಪಾರದಲ್ಲಿ 100 ಕೋಟಿ ಡಾಲರ್ ಗಳಿಗಿಂತ ಹೆಚ್ಚು ವಾಣಿಜ್ಯ ಸಾಧ್ಯತೆ ಇದೆ ಎಂದು ವರದಿ ಮಾಡಿತ್ತು.
ದುಬೈ ಮುನಿಸಿಪಾಲಿಟಿಯು ದುಬೈನಲ್ಲಿ ಗೂಮೂತ್ರ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವ್ಯಕ್ತಪಡಿಸಿದೆ.
Good job
Good job