ಸೌದಿ ಅರೇಬಿಯಾ: ಜುಬೈಲ್ ನಲ್ಲಿ ಕಳೆದ ಗುರುವಾರ ಮೃತಪಟ್ಟ ಮಂಗಳೂರು ತಾಲ್ಲೂಕಿನ ಗುರುಪುರ-ಕೈಕಂಬ ಸಮೀಪದ ಸೂರಲ್ಪಾಡಿ ನಿವಾಸಿ ಅಬ್ದುಲ್ ಜಬ್ಬಾರ್ ಎಂಬವರ ಅಂತ್ಯಕ್ರಿಯೆಯು ನವೆಂಬರ್ 28 ರ ಸೋಮವಾರದಂದು ಜುಬೈಲ್ ನ ಖಬರ್ ಸ್ಥಾನದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಕೆಸಿಎಫ್ ಸದಸ್ಯರ ಸಮ್ಮುಖದಲ್ಲಿ ದುವಾಮೂಲಕ ನೆರವೇರಿಸಲಾಯಿತು.
ಕೇವಲ ಐದು ತಿಂಗಳ ಹಿಂದೆ ಉದ್ಯೋಗ ನಿಮಿತ್ತ ಸೌದಿ ಅರೇಬಿಯಾಕ್ಕೆ ಆಗಮಿಸಿದ ಇವರು ದಿನಾಂಕ 25-11-2022 ರ ಶುಕ್ರವಾರದಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಮೃತರಿಗೆ ಹೆಂಡತಿ ಮತ್ತು ಒಂದು ಹೆಣ್ಣು ಮಗುವಿದೆ. ಮೃತರ ಅಂತ್ಯ ಸಂಸ್ಕಾರಕ್ಕೆ ಬೇಕಾದ ಎಲ್ಲಾ ದಾಖಲೆ ಪತ್ರಗಳು, ಭಾರತೀಯ ರಾಯಭಾರಿ ಕಛೇರಿಗೆ ಬೇಕಾದ ಕಡತಗಳು ಹಾಗೂ ಇನ್ನಿತರ ಎಲ್ಲಾ ವ್ಯವಸ್ಥೆಗಳನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF) ನಾಯಕರ ನೇತೃತ್ವದಲ್ಲಿ ಸರಿಪಡಿಸಿದ್ದರು.
ಈ ಒಂದು ಪುಣ್ಯ ಕಾರ್ಯದಲ್ಲಿ ಕೈಜೋಡಿಸಿ ಸಹಕರಿಸಿದ ಕೆ.ಸಿ.ಎಫ್ ಜುಬೈಲ್ ಝೋನ್ ಸಾಂತ್ವನ ಇಲಾಖೆಯ ಕಾರ್ಯದರ್ಶಿ ನೌಫಲ್ ಮುಲ್ಕಿ, ಜುಬೈಲ್ ಝೋನ್ ಶೋಲ ಸೆಕ್ಟರ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಕಲಂದರ್ ಮುಕ್ಕ, ದಮ್ಮಾಮ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷರಾದ ಬಾಷಾ ಗಂಗಾವಳಿ ಹಾಗೂ ಹಿತೈಶಿಗಳಾದ ಇಬ್ಬ ಬಜ್ಪೆ, ಜಲೀಲ್ ಕಣ್ಣಂಗಾರ್ ಮತ್ತು ಹನೀಫ್ ಸಿತಾರಾ ಇವರುಗಳಿಗೆ ಕೆಸಿಎಫ್ ಜುಬೈಲ್ ಸಮಿತಿಯ ಸಾಂತ್ವಾನ ವಿಭಾಗವು ಎಲ್ಲಾ ವಿಧದ ಕೃತಜ್ಞತೆಗಳನ್ನು ಸಲ್ಲಿಸಿರುವುದಾಗಿ ಈ ಮೂಲಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.