‘ನೈಜ ಮುಹ್‌ಮಿನ್ ಆಗದೆ ಇರುವುದೇ ಎಲ್ಲಾ ರೀತಿಯ
ಪರಾಜಯಗಳಿಗೂ ಕಾರಣ’ : ಸಯ್ಯಿದ್ ಸಾದಾತ್ ತಂಙಳ್ ಕರ್ವೇಲು
ಮಾಣಿ : ಎಸ್‌ವೈಎಸ್ ಮತ್ತು ಎಸ್ಸೆಸ್ಸೆಫ್ ಸೂರಿಕುಮೇರು ಇದರ ವತಿಯಿಂದ ರಬೀಉಲ್ ಆಖರನ್ನು ಜೀಲಾನಿ ಜಲ್ಸಾ ತಿಂಗಳಾಗಿ ಆಚರಿಸಲಾಯಿತು.ಅದರ ಪ್ರಯುಕ್ತ ಚಿಕನ್ ಉಮ್ಮರ್ ರವರ ನಿವಾಸದಲ್ಲಿ “ಮುಹ್ಯಿದ್ದೀನ್ ಮಾಲೆ” ಆಲಾಪನೆ ಕಾರ್ಯಕ್ರಮ, ಉಬೈದ್ ಬದ್ರಿಯಾ ಗ್ರೌಂಡ್ ನಿವಾಸದಲ್ಲಿ “ಕುತುಬಿಯ್ಯತ್” ಮತ್ತು ಯೂಸುಫ್ ಹಾಜಿಯವರ ನಿವಾಸದಲ್ಲಿ “ಜಲಾಲಿಯ್ಯಾ ರಾತೀಬ್” ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾಜುಲ್ ಉಲಮಾ,ಸಂಶುಲ್ ಉಲಮಾ,ನೂರುಲ್ ಉಲಮಾ,ಬೇಕಲ್ ಉಸ್ತಾದ್, ಪೊಸೋಟ್ ತಂಙಳ್, ಮುಂತಾದ ಎಲ್ಲಾ ಮಹಾತ್ಮರ ಅನುಸ್ಮರಣೆ ನಡೆಯಿತು. ಕ್ರಮವಾಗಿ ಅಶ್ರಫ್ ಸಖಾಫಿ ಸೂರಿಕುಮೇರು, ಇಸಾಕ್ ಮಾಣಿ,ಮುಹ್ಯಿದ್ದೀನ್ ಮಾಲೆ ಆಲಾಪನೆಗೆ ನೇತೃತ್ವ ನೀಡಿದ್ದರು,ಕುತುಬಿಯ್ಯತ್‌ಗೆ ಇಬ್ರಾಹಿಂ ಸಅದಿ ಮಾಣಿ,ಜಲಾಲಿಯ್ಯಾ ರಾತೀಬ್ ಗೆ ಸಯ್ಯಿದ್ ಸಾದಾತ್ ತಂಙಳ್ ಕರುವೇಲು,ಮತ್ತು ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಮಂಜನಾಡಿ ನೇತೃತ್ವ ನೀಡಿದರು.ಜಲಾಲಿಯ್ಯ ಮಜ್ಲಿಸ್ ನಲ್ಲಿ ದುಆ ಮಾಡಿದ ಸಾದಾತ್ ತಂಙಳ್ ರವರು ನಮ್ಮ ಎಲ್ಲಾ ರೀತಿಯ ಪರಾಜಯಗಳಿಗೆ ಕಾರಣ ನಾವು ನೈಜ ಮುಹ್‌ಮಿನ್ ಆಗದೇ ಇರುವುದು ಆಗಿದೆ ,ಅಲ್ಲಾಹನನ್ನು ಭಯಪಟ್ಟು ಧಾರ್ಮಿಕ ಚೌಕಟ್ಟಿನಲ್ಲಿ ಜೀವಿಸಿದ್ದರೆ ಯಾರನ್ನೂ ಭಯ ಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಜೀಲಾನಿ ಜಲ್ಸಾ ಕಾರ್ಯಕ್ರಮಗಳಲ್ಲಿ ,ಜಿಲ್ಲಾ ಈಸ್ಟ್ ಎಸ್‌ವೈಎಸ್ ಮಾಧ್ಯಮ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಎಸ್ ಎಸ್ ಅಬ್ದುಲ್ ಬಶೀರ್ ಝುಹ್ರಿ ಸೂರಿಕುಮೇರು,ಸೆಂಟರ್ ಪ್ರಧಾನ ಕಾರ್ಯದರ್ಶಿ ಸ್ವಾದಿಕ್ ಪೇರಮೊಗರು, ಸೆಂಟರ್ ಕೋಶಾಧಿಕಾರಿ ದಾವೂದ್ ಕಲ್ಲಡ್ಕ,ಸಾಂತ್ವನ ಕಾರ್ಯದರ್ಶಿ ಸುಲೈಮಾನ್ ಸೂರಿಕುಮೇರು, ಯೂಸುಫ್ ಹಾಜಿ ಸೂರಿಕುಮೇರು,ಇಬ್ರಾಹಿಂ ಮದನಿ ಶೇರಾ,ಬ್ರಾಂಚ್ ಉಸ್ತುವಾರಿ ಹೈದರ್ ಸಖಾಫಿ ಶೇರಾ,ಅಬ್ಬಾಸ್ ಗಡಿಯಾರ, ಹನೀಫ್ ಸಂಕ,ಅಬ್ದುಲ್ ರಝಾಕ್ ಕೊಡಾಜೆ, ಫಾರೂಕ್ ಶೂ ಪ್ಯಾಲೇಸ್,ಬದ್ರಿಯಾ ಗ್ರೌಂಡ್,ಇಬ್ರಾಹಿಂ ಮಾಣಿ,ಇಮ್ರಾನ್ ಸೂರಿಕುಮೇರು,ಹಂಝ ಸೂರಿಕುಮೇರು,ಟೈಲರ್ ಹಸೈನ್ ಸೂರಿಕುಮೇರು, ಫತ್ತಾಹ್ ಮಾಣಿ,ಮುಂತಾದವರು ಉಪಸ್ಥಿತರಿದ್ದರು.
ಕರೀಂ ಸೂರಿಕುಮೇರು ಅಧ್ಯಕ್ಷತೆಯಲ್ಲಿ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ, ಧನ್ಯವಾದಗೈದು ಕಾರ್ಯಕ್ರಮ ನಿರೂಪಿಸಿದರು.