janadhvani

Kannada Online News Paper

‘ಹಯ್ಯಾ ಕಾರ್ಡ್’ ಹೊಂದಿರುವವರಿಗೆ ಉಚಿತ ಉಮ್ರಾ ವೀಸಾ – ಅನುಮತಿ ಜಾರಿ

ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ಮುಂಚಿತವಾಗಿ ವೈದ್ಯಕೀಯ ವಿಮೆಯನ್ನು(Health Insurance) ಪಡೆಯುವುದು ಕಡ್ಡಾಯವಾಗಿದೆ

ರಿಯಾದ್: ವಿಶ್ವಕಪ್ ಪಂದ್ಯಗಳನ್ನು(World Cup) ವೀಕ್ಷಿಸಲು ಕತಾರ್‌ನ ‘ಹಯ್ಯಾ ಕಾರ್ಡ್'(Hayya Card) ಹೊಂದಿರುವವರಿಗೆ ಉಮ್ರಾ ಯಾತ್ರೆ ಮತ್ತು ಮದೀನಾ ಝಿಯಾರತ್‌ಗಾಗಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಅನುಮತಿಸಲಾಗಿದೆ.

ಹಯಾ ಕಾರ್ಡ್ ಹೊಂದಿರುವವರಿಗೆ ಸೌದಿ ಅರೇಬಿಯಾ, ಉಚಿತ ವೀಸಾವನ್ನು ನೀಡಲಿದೆ. ಆದರೆ, ಸೌದಿ ಅರೇಬಿಯಾಕ್ಕೆ ಭೇಟಿ ನೀಡುವ ಮುಂಚಿತವಾಗಿ ವೈದ್ಯಕೀಯ ವಿಮೆಯನ್ನು(Health Insurance) ಪಡೆಯುವುದು ಕಡ್ಡಾಯವಾಗಿದೆ. ಸೌದಿ ಅರೇಬಿಯಾದ ವೀಸಾ ಫ್ಲಾಟ್ಫಾಂ ಮೂಲಕ ವೈದ್ಯಕೀಯ ವಿಮಾ ಪಾಲಿಸಿಯನ್ನು ಪಡೆಯಬಹುದು.

ಸೌದಿ ಅರೇಬಿಯಾ, ಹಯಾ ಕಾರ್ಡ್ ಹೊಂದಿರುವವರಿಗೆ ಬಹು ಪ್ರವೇಶ ವೀಸಾಗಳನ್ನು(Multi Entry Visa) ಅನುಮತಿಸುತ್ತದೆ. ಈ ವೀಸಾ ಅವಧಿಯೊಳಗೆ ಎಷ್ಟು ಬಾರಿ ಬೇಕಾದರೂ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು ಮತ್ತು ನಿರ್ಗಮಿಸಬಹುದಾಗಿದೆ.

ಹಯಾ ಕಾರ್ಡ್ ಬಳಸಿ ವೀಸಾ ಪಡೆಯುವವರು ಮೊದಲು ಕತಾರ್‌ಗೆ ಪ್ರವೇಶಿಸುವ ಅಗತ್ಯವಿಲ್ಲ. ಅವರು ನೇರವಾಗಿ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದಾಗಿದೆ. ಹಯಾ ಕಾರ್ಡ್ ಹೊಂದಿರುವವರು ವಿಶ್ವಕಪ್ ಪಂದ್ಯಗಳ ಸಮಯದಲ್ಲಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡಲು ಮತ್ತು ಕಡಿಮೆ ವೆಚ್ಚದಲ್ಲಿ ಸೌದಿ ಅರೇಬಿಯಾದಲ್ಲಿ ಉಳಿಯಲು ಸೌದಿ ಅರೇಬಿಯಾ ಅವಕಾಶವನ್ನು ಸಿದ್ಧಪಡಿಸಿದೆ.

error: Content is protected !! Not allowed copy content from janadhvani.com