ಮಂಗಳೂರು: ಜಾಮಿಯಾ ಮಸೀದಿ ಮಳಲಿ ಪೇಟೆಗೆ ಸಂಭಂದಿಸಿದಂತೆ ಇಂದು ಮಾನ್ಯ 3 ನೆ ಸಿವಿಲ್ ಮತ್ತು ಜೆ.ಎಂ. ಎಫ್.ಸಿ ನ್ಯಾಯಾಲಯ ವ್ಯಾಜ್ಯದ ವ್ಯಾಪ್ತಿಯ ಬಗ್ಗೆಗಿನ ಮಸೀದಿ ಆಡಳಿತ ಮಂಡಳಿಯ ಅರ್ಜಿಯನ್ನು ವಜಾಗೊಳಿಸಿ, ತನಿಖೆಯ ವ್ಯಾಪ್ತಿಯನ್ನು ಸಿವಿಲ್ ನ್ಯಾಯಾಲಯದ ವ್ಯಾಪ್ತಿಯಲ್ಲಿಯೇ ಮುಂದುವರಿಸಿ ಕೊಂಡು ಹೋಗುವ ತೀರ್ಪು ನೀಡಿದೆ.
ಈ ಬೆಳವಣಿಗೆಯನ್ನು ಕೆಲವು ಸಂಘಟನೆಗಳು ಪತ್ರಿಕಾ ಹೇಳಿಕೆಯ ಮೂಲಕ ವೈಭವೀಕರಿಸಿ, ನ್ಯಾಯಲಯ ವ್ಯಾಪ್ತಿಯ ವಿಷಯಗಳನ್ನು ಪ್ರಸ್ತಾಪಿಸಿ ವ್ಯಾಜ್ಯದ ಬಗ್ಗೆಗಿನ ಮಾನ್ಯ ನ್ಯಾಯಾಲಯದ ಇತಿ ಮಿತಿ ಯನ್ನು ಮೀರಿ ವಿಷಯವನ್ನು ಸಾರ್ವಜನಿಕವಾಗಿ ಬಿಂಬಿಸುವುದು ಕಂಡು ಬರುತ್ತಿದೆ.ಇದು ಕಾನೂನಿನ ನಡೆಯ ಪ್ರಕ್ರಿಯೆಗೆ ವಿರುದ್ದವಾದ ನಡೆ ಆಗಿರುತ್ತದೆ ಎಂದು ಮಾಜಿ ಮೇಯರ್ ಕೆ.ಅಶ್ರಫ್ ಅವರು ಪತ್ರಿಕಾ ಹೇಳಿಕೆ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂಘಟನೆಗಳ ಇಂತಹ ಹೇಳಿಕೆಗಳು ಸರಿಯಲ್ಲ ಮತ್ತು ಕಾನೂನಿಗೆ ವಿರುದ್ದವಾದ ನಡೆ ಆಗಿರುತ್ತದೆ. ಇದು ಸಾರ್ವಜನಿಕ ಗೊಂದಲ ಸೃಷ್ಟಿಗೆ ಕೂಡಾ ಕಾರಣ ಆಗುತ್ತದೆ. ಆದುದರಿಂದ ಸಂಘಟನೆಗಳ ಅಥವಾ ವ್ಯಕ್ತಿಗಳ ಅಂತಹ ವ್ಯಾಪ್ತಿಯೇತರ ಹೇಳಿಕೆಯನ್ನು ಪರಿಗಣಿಸದೆ ಇರುವಂತೆ ಸಾರ್ವಜನಿಕರೊಂದಿಗೆ ಮಾಜಿ ಮೇಯರ್ ಕೆ.ಅಶ್ರಫ್(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ವಿನಂತಿಸಿದ್ದಾರೆ.