janadhvani

Kannada Online News Paper

ಬೀಫ್ ಸ್ಟಾಲ್ ಗೆ ವೇದವ್ಯಾಸ್ ವಿರೋಧ: ತಾಕತ್ತಿದ್ದರೆ ರಫ್ತು ಪ್ಲಾಂಟ್ ತಡೆಯಲಿ- ಕೆ.ಅಶ್ರಫ್

ಮಂಗಳೂರು ದಕ್ಷಿಣ ವಿಧಾನ ಸಭಾ ಶಾಸಕರಾದ ವೇದವ್ಯಾಸ ಕಾಮತ್ ಗೆ ಪ್ರಸ್ತುತ ಒಟರಲು ಯಾವುದೇ ವಿಷಯವಿಲ್ಲದಾಗ, ತಕ್ಷಣ ಲಭ್ಯವಾದದ್ದು, ಉದ್ದೇಶಿತ ಮಂಗಳೂರು ಸೆಂಟ್ರಲ್ ಮಾರ್ಕೆಟ್ ಸಂಕೀರ್ಣ ದಲ್ಲಿ ದೂರ ಭವಿಷ್ಯದಲ್ಲಿ ಸ್ಥಾಪನೆ ಆಗಲಿರುವ ಅದಾನಿ , ಅಂಬಾನಿ ಅಥವಾ ರಾಜೀವ್ ಚಂದ್ರಶೇಖರ್ ಕಂಪೆನಿ ಪೂರೈಕೆಯ ಪ್ಯಾಕೇಜ್ಡ್ ಬಫೆಲ್ಲೂ ಮೀಟ್ ( ಬೀಫ್ ಮಾಂಸ) ಸ್ಟಾಲ್.

ಪ್ರಸ್ತುತ ಮಂಗಳೂರು ಸ್ಮಾರ್ಟ್ ಸಿಟಿಯ ಭಾಗವಾಗಿ ಖಾಸಗಿ ಹೂಡಿಕೆಯ ಸಹಭಾಗಿತ್ವದಲ್ಲಿ ಸೆಂಟ್ರಲ್ ಮಾರ್ಕೆಟ್ ಸಂಕೀರ್ಣ ನಿರ್ಮಾಣವಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯ ಸಭೆಯು ಪ್ರತೀ ತಿಂಗಳು ಶಾಸಕರ, ಸಂಸದರ, ಕಾರ್ಪೊರೇಟರ್ ಗಳ ಹಾಜರಾತಿಯಲ್ಲಿ ನಡೆಯುತ್ತಿದೆ. ಸಂಕೀರ್ಣದ ವಿನ್ಯಾಸದಲ್ಲಿ ಅಗತ್ಯ ಸ್ಟಾಲ್ ಗಳ ವಿಷಯ ಅದೆಷ್ಟೋ ಬಾರಿ ಪ್ರಸ್ತಾಪ ಆಗಿ ಸ್ಟಾಲ್ ಗಳ ನಿರ್ಮಾಣ ರಚನೆ ಆಗುತ್ತಿದೆ.

ಪ್ರಸ್ತುತ ಶಾಸಕರು ಮೊಸಳೆ ಕಣ್ಣೀರು ಸುರಿಸುತ್ತಿದ್ದು ಮಂಗಳೂರಿನ ಪ್ರಜೆಗಳನ್ನು ಮೂರ್ಖ ಮಾಡುತ್ತಿದ್ದಾರೆ. ಬೀಫ್ ಸ್ಟಾಲ್ ವಿವಾದ ಎಂಬುದು ಮುಂಬರುವ ವಿಧಾನ ಸಭಾ ಚುನಾವಣೆಗೆ ಬಿ.ಜೆ.ಪಿ ತಯಾರು ಮಾಡಿದ ತುರ್ತು ಅಜೆಂಡಾ,ಆ ಮೂಲಕ ಜಿಲ್ಲೆಯ ಜನರನ್ನು ನಂಬಿಕೆಯ ಆಧಾರದಲ್ಲಿ ಅಮಲೀಕರಿಸುವ ಪ್ರಯತ್ನವಾಗಿದೆ.

ಶಾಸಕರು ಮತ್ತು ನಗರ ಪಾಲಿಕೆ ಬೀಫ್ ಸ್ಟಾಲ್ ಕಾರಣಕ್ಕಾಗಿ ಭೂಮಿ ಪೂಜೆ ನಡೆಸುವುದಿಲ್ಲ ಎಂಬ ತನ್ನ ಹೇಳಿಕೆಗೆ ಬದಲಾಗಿ, ತಾಕತ್ತು ಇದ್ದರೆ ಭಾರತದಿಂದ ವಿದೇಶಕ್ಕೆ ರಫ್ತು ಗೊಳ್ಳುತ್ತಿರುವ ಗುಜರಾತ್ ಮತ್ತು ಉತ್ತರ ಭಾರದಾದ್ಯಂತ ಅಸ್ತಿತ್ವದಲ್ಲಿ ಇರುವ, ಜೈನ ಮತ್ತು ವೈದಿಕ ಒಡೆತನದ, ಬಿ. ಜೆ. ಪಿ ರಾಜ್ಯ ಸಭಾ ಸದಸ್ಯರಾದ ರಾಜೀವ್ ಚಂದ್ರ ಶೇಕರ್ ಒಡೆತನದ ಬೀಫ್ ರಫ್ತು ಪ್ಲಾಂಟ್ ನಿಂದ ಹೊರಡುವ ಶೀತಲೀಕೃತ ರಫ್ತು ಹಡಗುಗಳನ್ನು ತಡೆಯುವ ವಿಘ್ನ ನಿವಾರಕ ಪೂಜೆ ನಡೆಸಲಿ.

ಇಂದು ಬೀಫ್ ಹೆಸರಿನಲ್ಲಿ ರಾಜಕೀಯ ಮಾಡುವ ಬಿ.ಜೆ.ಪಿ ಸರ್ಕಾರ ತಾಕತ್ತು ಇದ್ದರೆ ಬೀಫ್ ರಫ್ತು ನಿಲ್ಲಿಸುವಂತೆ ಹೇಳಿಕೆ ನೀಡಲಿ. ಸೆಂಟ್ರಲ್ ಮಾರ್ಕೆಟ್ ನಲ್ಲಿ ಭವಿಷ್ಯದಲ್ಲಿ ಮಾರಾಟವಾಗುವ ಬೀಫ್ ಮುಸಲ್ಮಾನರು ಮಾರಾಟ ಮಾಡುವ ಬೀಫ್ ಅಲ್ಲ, ಬದಲಾಗಿ ಅದಾನಿ, ಅಂಬಾನಿ ರಾಜೀವ್ ಚಂದ್ರ ಶೇಕರ್ ಒಡೆತನದ ಪ್ಯಾಕೇಜ್ ಡ್ ಬಫೆಲ್ಲೋ ಮೀಟ್ ಎಂಬ ಸಂಸ್ಕರಿತ ಬೀಫ್ ಎಂಬುದು ಜನರು ಅರ್ಥ ಮಾಡಿ ಕೊಳ್ಳಲಿ.

ವೇದವ್ಯಾಸ ಕಾಮತ್ ಅರಿಯಲಿ ಈ ದೇಶದ ಜನ ಜಾಗೃತಿ ಹೊಂದಿದ್ದಾರೆ ಎಂದು. ಸಂಘ ಪರಿವಾರದ ಪ್ರಹಸನ ಜನರಿಗೆ ಅರ್ಥವಾಗಲಿದೆ. ಎಂದು ಕೆ.ಅಶ್ರಫ್( ಮಾಜಿ ಮೇಯರ್)
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com