✍️ಕೆ.ಎಂ ಇರ್ಶಾದ್ ಪಕ್ಷಿಕೆರೆ
ಹೌದು ಕರ್ನಾಟಕ ಯಾತ್ರೆ ಎಂದು ಕೇಳುವಾಗ ಮೈ ನವಿರೇಳುತ್ತದೆ, ಕರುನಾಡಿನ ಮಣ್ಣನ್ನು ಮಾನವೀಯ ಸಂದೇಶಗಳ ಮೂಲಕ ಧನ್ಯಗೊಳಿಸಿದ ಐತಿಹಾಸಿಕ ಯಾತ್ರೆ. ಕೋಮುವಾದದಿಂದ ಕಲುಷಿತ ಗೊಂಡ ಕರುನಾಡಿನ ಮಣ್ಣಲ್ಲಿ ಮನು ಕುಲವನ್ನು ಗೌರವಿಸಿ ಎಂಬ ಉದಾತ್ತವಾದ ಸಂದೇಶದೊಂದಿಗೆ ಮಾನವೀಯ ಸಂದೇಶಗಳನ್ನು ಬಿತ್ತರಿಸುತ್ತಾ ಗುಲ್ಬರ್ಗಾದಿಂದ ಮಂಗಳೂರು ತನಕ ನಡೆದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ಕರ್ನಾಟಕ ಯಾತ್ರೆ ಪ್ರತಿಯೊಬ್ಬರ ಕಣ್ಣಂಗಳದಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ.
ಅಂದು ಎಪ್ರಿಲ್ 29, 2014 Ssf ಕರ್ನಾಟಕ ಸ್ಥಾಪಕ ದಿನದ ಅಂಗವಾಗಿ ಪುತ್ತೂರು ಲಯನ್ಸ್ ಹಾಲ್ ನಲ್ಲಿ SSF ಬೆಳ್ಳಿ ಹಬ್ಬ ಘೋಷಣಾ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು, ಬೆಳ್ಳಿ ಹಬ್ಬದ ಪ್ರಯುಕ್ತ 25 ಕಾರ್ಯಕ್ರಮ ಘೋಷಣೆಯಲ್ಲಿ ಎ.ಪಿ ಉಸ್ತಾದರ ಕರ್ನಾಟಕ ಯಾತ್ರೆಯು ಒಂದಾಗಿತ್ತು, ಆ ಯಾತ್ರೆ ಘೋಷಣೆಯಾದ ಅಂದಿನಿಂದ ಜಾತಿ ಭೇದಮನ್ಯೆ ಸರ್ವರೂ ಆ ಧನ್ಯ ನಿಮಿಷಕ್ಕಾಗಿ ಕಾದು ಕುಳಿತರು, ಗುಂಬಝ್ ನಗರ ಗುಲ್ಬರ್ಗಾದಿಂದ ಬಂದರು ನಗರ ಮಂಗಳೂರು ತನಕ ಯಾತ್ರೆ ನಿಗದಿ ಆಯಿತು,
ಆಗ ಅಸೂಯೆಯಿಂದ ಕೆಲವರಿಗೆ ತುರಿಕೆ ಆರಂಭವಾಯಿತು, ಮಂಗಳೂರಿನಲ್ಲಾದರೆ ಓಕೆ, ಆದರೆ ಗುಲ್ಬರ್ಗಾದ ಗೌಡ ಜನರಿಗೆ ಏನು ಗೊತ್ತು ಎ.ಪಿ ಉಸ್ತಾದರನ್ನು, ಎಂದು ಅಪಹಾಸ್ಯ ಮಾಡಿದರು, ಆದರೆ ನಡೆದದ್ದೆ ಬೇರೆ ಟೀಕೆ ಮಾಡಿದವರನ್ನು ನಾಚಿಸುವಂತೆ ಕರ್ನಾಟಕ ಯಾತ್ರೆ ಅಭೂತಪೂರ್ವ ಯಶ ಕಂಡಿತು, ಎ.ಪಿ ಉಸ್ತಾದ್ ಸರಿ ಸುಮಾರು 9 ದಿನದಲ್ಲಿ 21 ಜಿಲ್ಲೆಗಳಿಗೆ ಬೇಟಿ ಕೊಟ್ಟಾಗ ಅಲ್ಲಿಯ ಜನರ ಬೃಹತ್ ಸ್ವಾಗತ ಸಮ್ಮೇಳನಗಳು ನಿಜಕ್ಕೂ ಅವಿಸ್ಮರಣೀಯ, ಎ.ಪಿ ಉಸ್ತಾದ್ ಯಾತ್ರೆಯುದ್ದಕ್ಕೂ ಸರ್ವ ಧರ್ಮದ.ನಾಯಕರು ಒಗ್ಗೂಡಿದ ಸ್ವಾಗತ ಸಮ್ಮೇಳನದಲ್ಲಿ ಮಾನವೀಯ ಸಂದೇಶಗಳನ್ನು ನಿರರ್ಗಳವಾಗಿ ಉರ್ದುವಿನಲ್ಲಿ ಬಿತ್ತರಿಸಿದಾಗ, ಸರ್ವ ಧರ್ಮದ ನಾಯಕರು ಶ್ಲಾಘಿಸಿ ಹೇಳಿದ ಮಾತು, *ಎ.ಪಿ ಉಸ್ತಾದ್ ನೀವು ಕರ್ನಾಟಕ ಮಾತ್ರವಲ್ಲ ಇಡೀ ಭಾರತ ಯಾತ್ರೆ ಮಾಡಬೇಕು, ನಿಮ್ಮ ಹಿಂದೆ ನಾವಿದ್ದೇವೆ.
ಹೀಗೆ ಸಾಗಿದ ಯಾತ್ರೆ ನವೆಂಬರ್ 2ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಸಮಾರೋಪ ಗೊಳ್ಳುವಾಗ ಅಕ್ಷರಾರ್ಥದಲ್ಲಿ ಸಮ್ಮೇಳನ ನಗರಿ ಹಾಲ್ಗಡಲಾಗಿತ್ತು, ಸಮ್ಮೇಳನದ ಮದ್ಯೆ ಧಾರಾಕಾರವಾಗಿ ಮಳೆ ಸುರಿಯಿತು, ಮುಖ್ಯ ಮಂತ್ರಿ ಮಾನ್ಯ ಸಿದ್ದರಾಮಯ್ಯನವರು ಭಾಷಣ ಮಾಡುತ್ತಿದ್ದರು, ಮಳೆ ಬಂದದರಿತು ಅವರು ಭಾಷಣ ನಿಲ್ಲಿಸಲೇ ಎಂದು ನೆರೆದ ಸಭಿಕರೊಂದಿಗೆ ಕೇಳಿದಾಗ ಕೂಡಿದ ಲಕ್ಷಾಂತರ ಮಂದಿ ಅಲ್ಲಾಹು ಅಕ್ಬರ್ ಎಂದು ತಕ್ಬೀರ್ ಹೇಳುತ್ತಾ ಮಳೆ ರಾಯನ ಆರ್ಭಟಕ್ಕೆ ಬೆದರದೆ ಕುಳಿತು ಭಾಷಣ ಮುಂದುವರಿಸುವಂತೆ ಹೇಳಿದರು.
ಆ ಶಿಸ್ತನ್ನು ಕಂಡು ವೇದಿಕೆಯಲ್ಲಿದ್ದ ಹಿಂದೂ ನಾಯಕ ಪೇಜಾವರ ಶ್ರೀ SSF ನ ಸದಸ್ಯರನ್ನು ಶ್ಲಾಘಿಸಿ, ಧಾರಾಕಾರವಾಗಿ ಸುರಿದ ಮಳೆಗೆ ವಿಚಳಿತರಾಗದೆ ಕುಳಿತ Ssf ನವರ ಶಿಸ್ತು ನಿಜಕ್ಕೂ ಮಾದರಿಯೋಗ್ಯವಾದದ್ದು, ದೇಶಕ್ಕೆ ಅಪಾಯ ಎದುರಾದಾಗ ಇದೇ ರೀತಿ ಎದೆಯೊಡ್ಡಿ ನಿಲ್ಲುತ್ತೀರೆಂಬ ಭರವಸೆಯನ್ನು ಮೂಡಿಸಿದ್ದೀರೆಂದು ಹೇಳಿದರು.
ಸುಲ್ತಾನುಲ್ ಉಲಮಾ ತಾನು ಭೇಟಿ ಕೊಟ್ಟ ಎಲ್ಲಾ ಸ್ತಳದಲ್ಲೂ ಸಾಂತ್ವನ, ಮನೆ ನಿರ್ಮಾಣ, ಮದುವೆ, ಮಸೀದಿ ಉದ್ಘಾಟನ ಕಾರ್ಯಕ್ರಮಗಳಿಗೆ ನೇತೃತ್ವ ನೀಡಿ ಅಕ್ಷರಾರ್ಥದಲ್ಲಿ ಮನು ಕುಲವನ್ನು ಗೌರವಿಸುವ ಸಂದೇಶವನ್ನು ಸಾಕ್ಷಾತ್ಕಾರ ಗೊಳಿಸಿದರು.
ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನಡೆಸಿದ ಅಭೂತಪೂರ್ವ ಯಶ ಕಂಡ ಕರ್ನಾಟಕ ಯಾತ್ರೆಗೆ ಇಂದು ಎಂಟು ವರ್ಷ ತುಂಬಿತು… ಅಲ್ಲಾಹನು ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಗೆ ಆಫಿಯತ್ತಿರುವ ದೀರ್ಘಾಯುಶ್ಯವನ್ನು ನೀಡಿ ಅನುಗ್ರಹಿಸಲಿ ಆಮೀನ್.