ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಖತರ್ ಅಧೀನದ ಅಝೀಝಿಯ ಝೋನ್ ಸಮಿತಿ ವತಿಯಿಂದ ಪವಿತ್ರ ರಬೀವುಲ್ ಅವ್ವಲ್ ಮಾಸದ ಪ್ರಯುಕ್ತ ಮಹಬ್ಬ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ದಿನಾಂಕ 21-10-2022 ಶುಕ್ರವಾರ ರಂದು ದೋಹಾದಲ್ಲಿ ನಡೆಯಿತು.
ಝೋನ್ ಅಧ್ಯಕ್ಷರಾದ ಮುಹಮ್ಮದ್ ಅಲಿ ಕೊಡಗು ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರವನ್ನು, ಕೆ.ಸಿ.ಎಫ್ ಖತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರು ಉದ್ಘಾಟಿಸಿ, ಸಂಘಟನೆ ಹಾಗು ಮೀಲಾದ್ ಆಚರಣೆಯ ಮಹತ್ವವನ್ನು ವಿವರಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಐಸಿಎಫ್ ಖತರ್ ನಾಯಕರಾದ ಅಬ್ದುಲ್ ಹಮೀದ್ ಅಝ್ಹರಿ ಯವರು ಪ್ರವಾದಿ (ಸ.ಅ) ರವರ ತ್ಯಾಗ ಹಾಗೂ ಸಹನೆಯ ಜೀವನದ ಬಗ್ಗೆ ನಾವು ಕಲಿಯಬೇಕು ಮತ್ತು ಹೇಗೆ ಕಲಿಯಬಹುದು ಎಂದು ಸಭಿಕರಿಗೆ ಸವಿಸ್ತಾರವಾಗಿ ವಿವರಿಸಿದರು. ವಿಶೇಷ ಆಹ್ವಾನಿತ ವ್ಯಕ್ತಿಗಳಾಗಿ ಆಗಮಿಸಿದ್ದ ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿಯ ಅಡ್ಮಿನ್ ನಾಯಕರಾದ ಯೂಸುಫ್ ಸಖ್ವಾಫಿ ಅಯ್ಯಂಗೇರಿ, ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಕಾರ್ಯದರ್ಶಿ ಹಾಫಿಳ್ ಉಮರುಲ್ ಫಾರೂಖ್ ಸಖ್ವಾಫಿ ಎಮ್ಮೆಮ್ಮಾಡು, ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗ ಚೆರ್ಮಾನ್ ಖಾಲಿದ್ ಹಿಮಮಿ, ರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಚೇರ್ಮಾನ್ ಸತ್ತಾರ್ ಅಶ್ರಫಿ ಮಠ, ಕೆ.ಸಿ.ಎಫ್ ಅಂತರರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಚೆರ್ಮಾನ್ ಕಬೀರ್ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಮಾಗುಂಡಿ, ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರಾದ ಮಿರ್ಶಾದ್ ಕನ್ಯಾನ ರಾಷ್ಟ್ರೀಯ ಸಮಿತಿ ಪ್ರಕಾಶನ ವಿಭಾಗ ಅಧ್ಯಕ್ಷರಾದ ಯಾಹ್ಯಾ ಸ’ಅದಿ, ರಾಷ್ಟ್ರೀಯ ಸಮಿತಿ ಸಾಂತ್ವನ ವಿಭಾಗ ಅಧ್ಯಕ್ಷರಾದ ಇಖ್ಬಾಲ್ ಪುಂಜಾಲಕಟ್ಟೆ, ಝೋನ್ ಕಂಟ್ರೋಲರ್ ಸಿದ್ದೀಖ್ ಕೃಷ್ಣಾಪುರ, ಮದೀನಾ ಖಲೀಫಾ ಝೋನ್ ಅಧ್ಯಕ್ಷರಾದ ಇಸ್ಹಾಖ್ ನಿಝಾಮಿ, ಅಝೀಝಿಯ ಝೋನ್ ಕೋಶಾಧಿಕಾರಿ ಹಾಗು ಮೀಲಾದ್ ಸ್ವಾಗತ ಸಮಿತಿ ಚೆರ್ಮಾನ್ ನಸ್ರಾತುಲ್ಲಾ ಮಲ್ಪೆ ಉಪಸ್ಥಿತರಿದ್ದರು.
ಕೆ.ಸಿ.ಎಫ್ ಅಂತಾರಾಷ್ಟ್ರೀಯ ಸಮಿತಿಯ ಅಡ್ಮಿನ್ ನಾಯಕರಾದ ಯೂಸುಫ್ ಸಖ್ವಾಫಿ ಅಯ್ಯಂಗೇರಿ ರವರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಆಸಿಫ್ ಅಹ್ಸನಿ ಅನ್ವಾರಿ ಕೊಡಗು, ಇಸ್ಹಾಖ್ ನಿಝಾಮಿ, ಝಾಕಿರ್ ಚಿಕ್ಕಮಗಳೂರು, ಯಾಸಿನ್ ಕೋಟ ಸಂಗಡಿಗರಿಂದ ಬುರ್ದಾ ಮಜ್ಲಿಸ್ ಹಾಗೂ ದಫ್ ಪ್ರದರ್ಶನವು ನೆರೆದಿರುವ ಅತಿಥಿಗಳು ಮತ್ತು ಕಾರ್ಯಕರ್ತರಿಗೆ ವಿಶೇಷ ಅನುಭವವಾಗಿತ್ತು. ಕೆಸಿಎಫ್ ಅಝೀಝಿಯ ಝೋನ್ ಪ್ರಧಾನ ಕಾರ್ಯದರ್ಶಿ ಬಷೀರ್ ತೋಕೂರು ಸ್ವಾಗತಿಸಿ, ಅಝೀಝಿಯ ಝೋನ್ ನಾಯಕರಾದ ಶರೀಫ್ ಉಸ್ತಾದ್ ಉಪ್ಪಿನಂಗಡಿ ಧನ್ಯವಾದಗೈದರು. ಅಝೀಝಿಯ ಝೋನ್ ಅಡ್ಮಿನ್ ವಿಭಾಗ ಅಧ್ಯಕ್ಷರಾದ ಝಾಕಿರ್ ಚಿಕ್ಕಮಗಳೂರು ಕಾರ್ಯಕ್ರಮ ನಿರೂಪಿಸಿದರು.