ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ – ಕೆಸಿಎಫ್ ಖತ್ತರ್ ಅಧೀನದ ದೋಹಾ ಝೋನ್ ಸಮಿತಿ ವತಿಯಿಂದ ಪವಿತ್ರ ರಬೀವುಲ್ ಅವ್ವಲ್ ಮಾಸದ ಪ್ರಯುಕ್ತ ಮಹಬ್ಬ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮವು ದಿನಾಂಕ 14-10-2022 ರಂದು ದೋಹಾದ ಐಐಸಿಸಿ ಸಭಾಂಗಣದಲ್ಲಿ ನಡೆಯಿತು.
ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸಯ್ಯಿದ್ ಅರ್ಶದ್ ಅಲಿ ತಂಙಳ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರವನ್ನು, ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗದ ಸದಸ್ಯರಾದ ಯೂಸುಫ್ ಸಖಾಫಿ ಅಯ್ಯಂಗೇರಿ ಉದ್ಘಾಟಿಸಿ, ಮೀಲಾದ್ ಆಚರಣೆಯ ಮಹತ್ವವನ್ನು ವಿವರಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಐಸಿಎಫ್ ಖತ್ತರ್ ಪಬ್ಲಿಕೇಶನ್ ಹಾಗೂ ಮೀಡಿಯಾ ವಿಭಾಗ ಚೆರ್ಮಾನ್ ಅಹ್ಮದ್ ಸಖಾಫಿ ಪೇರಾಂಬ್ರ ರವರು ಪ್ರವಾದಿ (ಸ.ಅ) ರವರ ತ್ಯಾಗ ಹಾಗೂ ಸಹನೆಯ ಜೀವನದ ಬಗ್ಗೆ ಸಭಿಕರಿಗೆ ಸವಿಸ್ತಾರವಾಗಿ ವಿವರಿಸಿದರು. ವಿಶೇಷ ಆಹ್ವಾನಿತ ವ್ಯಕ್ತಿಗಳಾಗಿ ಆಗಮಿಸಿದ್ದ ಕೆ.ಸಿ.ಎಫ್ ಖತ್ತರ್ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹನೀಫ್ ಪಾತೂರು, ರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗ ಚೆರ್ಮಾನ್ ಖಾಲಿದ್ ಹಿಮಮಿ, ರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಚೇರ್ಮಾನ್ ಸತ್ತಾರ್ ಅಶ್ರಫಿ ಮಠ ಹಾಗೂ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಫಾರೂಕ್ ಕೃಷ್ಣಾಪುರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಶುಭಹಾರೈಸಿದರು.
ವೇದಿಕೆಯಲ್ಲಿ ಕೆ.ಸಿ.ಎಫ್ ಅಂತರರಾಷ್ಟ್ರೀಯ ಸಮಿತಿ ಅಡ್ಮಿನ್ ವಿಭಾಗ ಚೆರ್ಮಾನ್ ಕಬೀರ್ ದೇರಳಕಟ್ಟೆ, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಮಾಗುಂಡಿ, ಕೆ.ಸಿ.ಎಫ್ ದೋಹಾ ಝೋನ್ ಅಧ್ಯಕ್ಷರಾದ ನಿಯಾಝ್ ಕುರ್ನಾಡ್, ಮದೀನ ಖಲೀಫಾ ಝೋನ್ ಅಧ್ಯಕ್ಷರಾದ ಇಸ್ಹಾಖ್ ನಿಝಾಮಿ, ಅಝೀಝಿಯಾ ಝೋನ್ ಅಧ್ಯಕ್ಷರಾದ ಅಲಿ ಕೊಡಗು, ಕೆಸಿಎಫ್ ಹಿರಿಯ ಸದಸ್ಯ ಮತ್ತು ಅಲ್’ಮದೀನ ಮಂಜನಾಡಿ ಖತ್ತರ್ ಸಮಿತಿ ರಾಷ್ಟ್ರೀಯ ಅಧ್ಯಕ್ಷರಾದ ಹಾಜಿ ಅರಬಿ ಕುಂಙಿ ಹಾಗೂ ದೋಹಾ ಝೋನ್ ನಾಯಕರಾದ ಜಮಾಲ್ ಮೂಡಬಿದ್ರೆ ಉಪಸ್ಥಿತರಿದ್ದರು..
ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಕಾರ್ಯದರ್ಶಿ ಹಾಫಿಳ್ ಉಮರುಲ್ ಫಾರೂಖ್ ಸಖಾಫಿ ಎಮ್ಮೆಮ್ಮಾಡು ರವರ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ನಡೆಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯ್ತು. ಆಸಿಫ್ ಅಹ್ಸನಿ ಅನ್ವರಿ ಕೊಡಗು, ಇಸ್ಹಾಖ್ ನಿಝಾಮಿ, ಝಾಕಿರ್ ಚಿಕ್ಕಮಗಳೂರು ಸಂಗಡಿಗರಿಂದ ಬುರ್ದಾ ಹಾಗೂ ದಫ್ ಕಾರ್ಯಕ್ರಮವು ನೆರೆದಿರುವ ಅತಿಥಿಗಳು ಮತ್ತು ಕಾರ್ಯಕರ್ತರಿಗೆ ವಿಶೇಷ ಮನರಂಜನೆಯಾಗಿತ್ತು. ಕೆಸಿಎಫ್ ದೋಹಾ ಝೋನ್ ಪ್ರಧಾನ ಕಾರ್ಯದರ್ಶಿ ಸದಕತುಲ್ಲಾ ಕೂಳೂರು ಸ್ವಾಗತಿಸಿ, ದೋಹಾ ಝೋನ್ ಸಂಘಟನಾ ವಿಭಾಗ ಕಾರ್ಯದರ್ಶಿ ಫಾರೂಖ್ ಜೆಪ್ಪು ಧನ್ಯವಾದಗೈದರು. ದೋಹಾ ಝೋನ್ ಅಡ್ಮಿನ್ ವಿಭಾಗ ಕಾರ್ಯದರ್ಶಿ ಹಸೈನಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.