ಮಂಗಳೂರು: ಕಡಬ ತಾಲೂಕಿನ ಕಾಣಿಯೂರು ಸಮೀಪದ ದೋಳ್ಪಾಡಿ ಬಳಿ ಕಾರಿನಲ್ಲಿ ಜವಳಿ ವ್ಯಾಪಾರ ನಡೆಸುತ್ತಿದ್ದ ಇಬ್ಬರು ಯುವಕರ ಮೇಲೆ ಬಜರಂಗದಳ, ಸಂಘಪರಿವಾರದ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಕೃತ್ಯವನ್ನು ಮುಸ್ಲಿಮ್ ಮುಖಂಡರ ನಿಯೋಗವು ತೀವ್ರವಾಗಿ ಖಂಡಿಸಿದೆ.
ವ್ಯಾಪಾರಕ್ಕೆ ತಡೆಯೊಡ್ಡಿ, ಎರಡು ತಾಸುಗಳ ಕಾಲ ಗಂಭೀರವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಮತಿ ತಪ್ಪುವ ಸ್ಥಿತಿವರೆಗೆ ಹೊಡೆಯಲಾಗಿ, ದ್ವಿಚಕ್ರ ವಾಹನವನ್ನು ಗಾಯಾಳು ಮೇಲೆ ಚಲಾಯಿಸಿ ಕೊಲೆ ಯತ್ನ ನಡೆಸಲಾಗಿದೆ. ಕಾರಿಗೆ ಹಾನಿಗೊಳಿಸಲಾಗಿದೆ. ನಿಯೋಗವು, ಇಂದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ನೀಡಿತು.
ಹಲವಾರು ವರ್ಷಗಳಿಂದ ಜವಳಿ ವ್ಯಾಪಾರ ನಡೆಸುತ್ತಿರುವ ಯುವಕರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದಾರೆ. ಆದರೆ ವ್ಯಾಪಾರಿಗಳು ಮುಸ್ಲಿಮರೆಂಬ ಕಾರಣಕ್ಕೆ ಬಜರಂಗದಳ ಮತ್ತು ಸಂಘಪರಿವಾರ ಕಾರ್ಯಕರ್ತರು ಇವರ ಮೇಲೆ ಮಾರಣಾಂತಿಕ ಗುಂಪು ಹಲ್ಲೆ ನಡೆಸಿ, ಮಹಿಳೆಯ ಮೇಲೆ ಕೈ ಹಾಕಿದ್ದಾರೆ ಎಂಬ ಕಟ್ಟು ಕಥೆಗಳನ್ನು ಕಟ್ಟಿ ಆಪಾದಿಸಲಾಗಿದೆ.
ಆರೋಪಿಗಳನ್ನು ಸುರಕ್ಷಿತರಾಗಿ ಬಿಟ್ಟು, ಹಲ್ಲೆಗೊಳಗಾದವರ ಮೇಲೆಯೇ ಪ್ರಕರಣ ದಾಖಲಾಗಿರುವುದು ತೀವ್ರ ಖಂಡನೀಯ, ಆದುದರಿಂದ ಪೊಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇವರ ಕಟ್ಟು ಕಥೆಯನ್ನು ಭೇದಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಒತ್ತಾಯಿಸಲಾಗಿದೆ.
ಭೇಟಿ ಸಂದರ್ಬದಲ್ಲಿ ಕೆ.ಅಶ್ರಫ್,ಮೊಯಿದಿನ್ ಬಾವ, ಸಾಲಿಹ್ ಬಜ್ಪೆ, ಷರೀಫ್ ನಾಟಿಕಲ್, ಸಿ.ಎಂ.ಮುಸ್ತಾಫಾ ಇದ್ದು,ಪೊಲೀಸು ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಕೃತ್ಯದ ವಿರುದ್ಧ ನಾಗರಿಕ ಸಮುದಾಯ ಒಟ್ಟಾಗಿ ಪ್ರತಿಭಟಿಸಲಿದೆ. ಪೊಲೀಸು ಇಲಾಖೆ ಇದ್ದೂ ದುಷ್ಕರ್ಮಿಗಳಿಗೆ ಕಾನೂನಿನ ಯಾವುದೇ ಭಯ ಇಲ್ಲದಾಗಿದೆ,ಈ ಬಗ್ಗೆ ಪೊಲೀಸು ಇಲಾಖೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳ ಬೇಕಾಗಿದೆ ಎಂದು ನಿಯೋಗದಲ್ಲಿದ್ದ ಕೆ.ಅಶ್ರಫ್.
(ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ) ಆಗ್ರಹಿಸಿದರು.