janadhvani

Kannada Online News Paper

ರಿಯಾದ್ :ಕೊಡಗು ಸುನ್ನಿ ವೆಲ್ಫೇರ್ ಮೀಲಾದ್ ಸಮಾವೇಶಕ್ಕೆ ಪ್ರೌಢ ಸಮಾಪ್ತಿ

ರಿಯಾದ್ : ಕೊಡಗು ಸುನ್ನಿ ವೆಲ್ಫೇರ್ ಸೌದಿ ರಾಷ್ಟ್ರೀಯ ಸಮಿತಿ ವತಿಯಿಂದ “ಪ್ರವಾದಿ (ಸ) ಹಾದಿಯಲ್ಲಿ ಗೆಲುವಿದೆ” ಎಂಬ ಘೋಷ ವಾಕ್ಯದೊಂದಿಗೆ ಮೀಲಾದ್ ಸಮಾವೇಶ ರಿಯಾದ್ ಅಲ್ ಮಾಸ್ ರೆಸ್ಟೋರೆಂಟ್ ನಲ್ಲಿ ವಿಜ್ರಂಭಣೆಯಿಂದ ನಡೆಯಿತು.

ರಿಯಾಝ್ ಹಾಷ್ಮಿ ಯವರ ಕಿರಾಅತ್ತ್ ನೊಂದಿಗೆ ಪ್ರಾರಂಭಗೊಂಡ ಸಮಾವೇಶವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ KCF ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಬೈತಾರ್ ಉಧ್ಘಾಟಿಸಿದರು.

ಕೇವಲ ಒಂದು ಜಿಲ್ಲೆಯ ಅನಿವಾಸಿ ಒಕ್ಕೂಟವಾಗಿದ್ದರೂ ಸಹ ಸಂಘದ ಕಾರ್ಯ ವೈಖರಿಯ ಕುರಿತು ಅವಲೋಕನ ಮಾಡಿದಾಗ ಸಾಂತ್ವನ ರಂಗದಲ್ಲಿ ತನ್ನದೇ ಆದ ಅಭೂತಪೂರ್ವ ಕಾರ್ಯ ಚಟುವಟಿಕೆಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಮುನ್ನುಗ್ಗುತ್ತಿರುವ ಕೊಡಗು ಸುನ್ನೀ ವೆಲ್ಪೇರ್ ಅಸೋಸಿಯೇಷನ್ ಎಲ್ಲರಿಗೂ ಮಾದರಿಯಾಗಿದೆ ಎಂದು ತಮ್ಮ ಉಧ್ಘಾಟನಾ ಭಾಷಣದಲ್ಲಿ ಹೇಳಿದರು.

ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಂಝ ಮುಸ್ಲಿಯಾರ್ ಚೋಕಂಡಳ್ಳಿ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಯ್ಯದ್ ಜಾಬಿರ್ ತಂಙಳ್ ಹಾಸನ,ಶಂಸುದ್ದೀನ್ ಬಾಖವಿ ಕಂಬಿಬಾಣೆ, ಮುಹಮ್ಮದ್ ಸಖಾಫಿ ಕೊಟ್ಟಮುಡಿ ,ನಾಸಿರ್ ಮರ್ಝೂಖಿ ಬಲಮುರಿ,ಹಂಸ ಮುಸ್ಲಿಯಾರ್ ಪೊನ್ನಂಪೇಟೆ,ಮುಸ್ತಫ ಝೈನಿ ಕಂಬಿಬಾಣೆ ಮುಂತಾದವರು ಮೌಲಿದ್ ಮಜ್ಲಿಸ್’ಗೆ ನೇತೃತ್ವ ವಹಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯೂಸುಫ್ ಸಖಾಫಿ ಬೈತಾರ್ KSA (KCF ಅಂತರರಾಷ್ಟ್ರೀಯ ಸಮಿತಿ ಅಧ್ಯಕ್ಷರು)
ಅಲಿ ಮುಸ್ಲಿಯಾರ್ Bahrain (KCF ಅಂತರರಾಷ್ಟ್ರೀಯ ಸಮಿತಿ ಖೋಶಾಧಿಕಾರಿ/ KSWA GCC ಚೆಯರ್ಮೆನ್)
ಅಬೂಬಕ್ಕರ್ ಹಾಜಿ ಕೊಟ್ಟಮುಡಿ UAE (KSWA GCC ಸಮಿತಿ ಅಧ್ಯಕ್ಷರು)
ಹಾಗೂ KSWA GCC ಸಮಿತಿಗೆ ಖೋಶಾಧಿಕಾರಿಯಾಗಿ ಆಯ್ಕೆಯಾದ ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಮುಂತಾವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು..

ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಬೇಕಾದ ಸರ್ವ ವ್ಯವಸ್ಥೆಗಳನ್ನು ಒದಗಿಸಲು ಸಂಘವು ಆಧ್ಯತೆ ನೀಡಬೇಕೆಂದು ರಾಷ್ಟ್ರೀಯ ಸಮಿತಿ ಚೆಯರ್ಮೆನ್ Dr:ಫಹೀಂ ರಹ್ಮಾನ್ (Indo-Saudi Medical Diplomatic Secretary) ಆಹ್ವಾನಿಸಿದರು

ಸೌದಿಯಲ್ಲಿರುವ ಜಿಲ್ಲೆಯ ಸರ್ವ ಸುನ್ನಿ ಅನಿವಾಸಿಗಳನ್ನು ಒಗ್ಗೂಡಿಸಿ ಸಂಘಟನೆಯನ್ನು ಬಲಿಷ್ಠ ಗೊಳಿಸಲು ಅಬುಬಕ್ಕರ್ ಹಾಜಿ (UAE) ಮತ್ತು ಅಲಿ ಮುಸ್ಲಿಯಾರ್ (Bahrain) ಕಾರ್ಯಕ್ರಮದಲ್ಲಿ ಕಿವಿ ಮಾತು ನುಡಿದರು..

ಹುಬ್ಬು ರಸೂಲ್ ಪ್ರಭಾಷಣವನ್ನು ಮುಖ್ಯ ಅತಿಥಿ ಐಸಿಎಫ್ ದಾಯಿ ಅಬ್ದುಲ್ಲಾ ಸಖಾಫಿ ಓಂಙಲ್ಲೂರ್ ನಿರ್ವಹಿಸಿದರು

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಬಿದ್ ಕಂಡಕ್ಕರೆ ಸ್ವಾಗತಿಸಿಸುತ್ತಾ ಸಂಘಟನೆಯ ಸೌದಿ ಮತ್ತು ಕೂಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾಡಿರುವ ಸಾಂತ್ವನ ಚಟುವಟಿಕೆಗಳ ಬಗ್ಗೆ ಸವಿಸ್ತರವಾಗಿ ವಿವರಿಸಿದರು…

ಕೊನೆಯಲ್ಲಿ ಹಾಸನ ಸಯ್ಯದ್ ಜಾಬಿರ್ ತಂಙಳ್ ರವರ ನೇತೃತ್ವದಲ್ಲಿ ಕಾಂದಪುರಂ ಎ. ಪಿ ಉಸ್ತಾದರ ಆರೋಗ್ಯಕ್ಕಾಗಿ ವಿಷೇಷ ಪ್ರಾರ್ಥನೆ ನಡೆಸಲಾಯಿತು

ನಾಸಿರ್ ಮರ್ಝೂಖಿ ಕಾರ್ಯಕ್ರಮನ್ನು ನಿರೂಪಿಸಿ ಮುಸ್ತಫ ಝೈನಿ ವಂದಿಸಿದರು.

error: Content is protected !! Not allowed copy content from janadhvani.com