janadhvani

Kannada Online News Paper

“ಹಿಜ್ರಾ ಪ್ರವಾದಿಯ ಹಾದಿಯಲ್ಲಿ” ಸೌದಿ ಅರೇಬಿಯಾದಲ್ಲಿ ವಸ್ತು ಪ್ರದರ್ಶನಕ್ಕೆ ಚಾಲನೆ

"ಹಿಜ್ರಾ ಪ್ರವಾದಿಯ ಹಾದಿಯಲ್ಲಿ" ಎಂಬ ಶೀರ್ಷಿಕೆಯೊಂದಿಗೆ ಪ್ರದರ್ಶನವು ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಚರಿತ್ರೆಯ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

ವರದಿ: ಇಸ್ಹಾಕ್ ಸಿ.ಐ.ಫಜೀರ್ (ಗಲ್ಫ್ ಕನ್ನಡಿಗ)

ದಮ್ಮಾಮ್: ಲೋಕಗುರು ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ
ಮಕ್ಕಾ ಟೂ ಮದೀನಾದ
ವಲಸೆಯ ಕುರಿತಾದ ಪ್ರದರ್ಶನಕ್ಕೆ ಶನಿವಾರದಂದು ಸೌದಿ ಅರೇಬಿಯಾದ ದಮ್ಮಾಮ್ ಸಮೀಪದ ಧಹ್ರಾನ್‌ನಲ್ಲಿರುವ King abdul aziz center for world culture (ithra) ನಲ್ಲಿ ಚಾಲನೆ ನೀಡಲಾಯಿತು.

“ಹಿಜ್ರಾ ಪ್ರವಾದಿಯ ಹಾದಿಯಲ್ಲಿ” ಎಂಬ ಶೀರ್ಷಿಕೆಯೊಂದಿಗೆ ಪ್ರದರ್ಶನವು ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಚರಿತ್ರೆಯ ಅರಿವು ಮೂಡಿಸುವ ಗುರಿಯನ್ನು ಹೊಂದಿದೆ.

ವಸ್ತು ಪ್ರದರ್ಶನವನ್ನು ಪೂರ್ವ ಪ್ರಾಂತ್ಯದ ಗವರ್ನರ್ ಪ್ರಿನ್ಸ್ ಸೌದ್ ಬಿನ್ ನಾಯೆಫ್ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಅಧಿಕಾರಿಗಳು, ಇಸ್ಲಾಮಿಕ್ ಕಲೆ ಮತ್ತು ಇತಿಹಾಸ ಸಂಶೋಧಕರು ಭಾಗವಹಿಸಿದ್ದರು.

ಪ್ರದರ್ಶನವು ರಿಯಾದ್, ಜಿದ್ದಾ ಮತ್ತು ಮದೀನಾಗೆ ತೆರಳುವ ಮೊದಲು ಒಂಬತ್ತು ತಿಂಗಳ ಕಾಲ ಧಹ್ರಾನ್‌ನಲ್ಲಿ ನಡೆಯಲಿದೆ.

ಪ್ರದರ್ಶನವು ಸಮಕಾಲೀನ ಶೈಲಿಯಲ್ಲಿ ಮತ್ತು ಅಸಾಧಾರಣ ಮತ್ತು ಅಭೂತಪೂರ್ವ ರೀತಿಯಲ್ಲಿ ಪ್ರಸ್ತುತಪಡಿಸಲಾದ ಸಮಗ್ರ ಗುಣಾತ್ಮಕ ಯೋಜನೆಯಾಗಿದೆ ಎಂದು ಇತ್ರಾ ನಿರ್ದೇಶಕ ಅಬ್ದುಲ್ಲಾ ಅಲ್-ರಶೀದ್ ಹೇಳಿದ್ದಾರೆ.

ಇದು ಮೊಬೈಲ್ ಜಾಗತಿಕ ಪ್ರದರ್ಶನವಾಗಿದ್ದು, ಗತಕಾಲದ ವಸ್ತುಗಳು ಮತ್ತು ಸಂಗ್ರಹಣೆಗಳ ಸಂಗ್ರಹ, ಸ್ಥಳೀಯ ಮತ್ತು ಅಂತರರಾಷ್ಟ್ರೀಯ ತಜ್ಞರು ಎಚ್ಚರಿಕೆಯಿಂದ ವಿನ್ಯಾಸಗೊಳಿಸಿದ 14 ಸಂವಾದಾತ್ಮಕ ಅಂಶಗಳು, ಸಾಕ್ಷ್ಯಚಿತ್ರ ಮತ್ತು ವಲಸೆಯ ಕಥೆಯನ್ನು ಹೇಳುವ ಪುಸ್ತಕವನ್ನು ಒಳಗೊಂಡಿದೆ.

error: Content is protected !! Not allowed copy content from janadhvani.com