janadhvani

Kannada Online News Paper

ಸೌದಿ: ಆನ್‌ಲೈನ್ ಸೇವಾ ಅಪ್ಲಿಕೇಶನ್ ‘ಅಬ್ಶೀರ್’ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಿಸುವ ವಿಧಾನ

ನೋಂದಾಯಿತ ಖಾತೆಯಲ್ಲಿನ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಮತ್ತು ಹೊಸದನ್ನು ಸೇರಿಸುವ ವಿಧಾನವನ್ನು ವ್ಯಕ್ತಪಡಿಸಲಾಗಿದೆ.

ರಿಯಾದ್: ಸೌದಿ ಆಂತರಿಕ ಸಚಿವಾಲಯದ(Ministry of Interior) ಆನ್‌ಲೈನ್ ಸೇವಾ ಅಪ್ಲಿಕೇಶನ್ ‘ಅಬ್ಶೀರ್’ನಲ್ಲಿ ಗ್ರಾಹಕರು ಮೊಬೈಲ್ ಸಂಖ್ಯೆಯನ್ನು ಮೂರು ರೀತಿಯಲ್ಲಿ ಬದಲಾಯಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೋಂದಾಯಿತ ಖಾತೆಯಲ್ಲಿನ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವ ಮತ್ತು ಹೊಸದನ್ನು ಸೇರಿಸುವ ವಿಧಾನವನ್ನು ವ್ಯಕ್ತಪಡಿಸಲಾಗಿದೆ.

1.ಮೊದಲ ಮಾರ್ಗವೆಂದರೆ ಚಾಲ್ತಿಯಲ್ಲಿರುವ ಹಳೆಯ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವುದು. ಲಾಗಿನ್ ಮಾಡಿ ಮತ್ತು ‘ಬಳಕೆದಾರ ಮಾಹಿತಿ’ (User Information) ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಅಗತ್ಯವಿರುವ ಮಾಹಿತಿ ಮತ್ತು ಹೊಸ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಉಳಿಸಿ. ಹೊಸ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿ ಕೋಡ್ ಅನ್ನು ಅಬ್ಶೀರ್‌ನಲ್ಲಿ ನಮೂದಿಸಿದ ನಂತರ, ಹೊಸ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಲಾಗುತ್ತದೆ.

2.ಹಳೆಯ ಮೊಬೈಲ್ ಸಂಖ್ಯೆ ರದ್ದತಿ ಅಥವಾ ನಷ್ಟ ಹೊಂದಿದ ಕಾರಣ ಲಾಗಿನ್ ಆಗಲು ಸಾಧ್ಯವಾಗದಿದ್ದರೆ, ಹತ್ತಿರದ ಅಬ್ಶೀರ್ ಸೆಲ್ಫ್ ಸರ್ವಿಸ್ ಕಿಯೋಸ್ಕ್‌ಗೆ ಭೇಟಿ ನೀಡಿ. ಯಂತ್ರದಲ್ಲಿರುವ ‘ಅಪ್‌ಡೇಟ್ ಮೊಬೈಲ್ ಸಂಖ್ಯೆ'(Update Mobile Number) ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ಮೊಬೈಲ್ ಸೇರಿದಂತೆ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ. ಮೊಬೈಲ್ ಸಂಖ್ಯೆಗೆ ಕಳುಹಿಸಲಾದ OTP ಕೋಡ್ ಅಬ್ಶೀರ್‌ನಲ್ಲಿ ರೆಕಾರ್ಡ್ ಮಾಡಿದ ನಂತರ, ಹೊಸ ಮೊಬೈಲ್ ಸಂಖ್ಯೆ ನೋಂದಣಿಯಾಗುತ್ತದೆ.

3.ಬಳಕೆದಾರರ ಗುರುತಿನ ಚೀಟಿಯಲ್ಲಿ ಬೇರೆ ಮೊಬೈಲ್ ಸಂಖ್ಯೆ ನೋಂದಣಿಯಾಗಿದ್ದರೆ, ಅಬ್ಶೀರ್ ವೆಬ್‌ಸೈಟ್‌ಗೆ ಭೇಟಿ ನೀಡಿ, ‘ಮೊಬೈಲ್ ಸಂಖ್ಯೆ ಬದಲಿಸಿ'(Change Mobile Number) ಐಕಾನ್ ಆಯ್ಕೆ ಮಾಡಿ ಮತ್ತು ಅಗತ್ಯ ಮಾಹಿತಿಯನ್ನು ನಮೂದಿಸುವ ಮೂಲಕ ಸಂಖ್ಯೆಯನ್ನು ಬದಲಾಯಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Absheer ಪ್ಲಾಟ್‌ಫಾರ್ಮ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ID ಕಾರ್ಡ್‌ನಲ್ಲಿ ನೋಂದಾಯಿಸಲಾದ ಅದೇ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದೆ.

error: Content is protected !! Not allowed copy content from janadhvani.com