ಜಿದ್ದಾ : ಸೌದಿ ಅರೇಬಿಯಾದಲ್ಲಿನ ಹೊಸ ಸುಧಾರಣೆಗಳು ದೇಶವನ್ನು ಉನ್ನತಿಗೇರಿಸಲಿದೆ ಎಂದು ಜಿದ್ದಾದಲ್ಲಿನ ಬ್ರಿಟಿಷ್ ಕೌನ್ಸಿಲ್ ಜನರಲ್ ಬಾರಿ ಪೀಚ್ ಹೇಳಿದ್ದಾರೆ.
ಚಿತ್ರಮಂದಿರಗಳ ಪುನರಾಗಮನ, ಮಹಿಳೆಯರಿಗೆ ವಾಹನ ಚಲಾಯಿಸುವ ಅನುಮತಿ, ಕ್ರೀಡಾಂಗಣಗಳಿಗೆ ಮಹಿಳೆಯರಿಗೆ ಪ್ರವೇಶ ಮುಂತಾದ ಸೌದಿಯ ಕ್ರಾಂತಿಕಾರಿ ಬದಲಾವಣೆಗಳನ್ನು ವಿಶ್ವವು ಕಾತರದಿಂದ ಎದುರು ನೋಡುತ್ತಿದೆ ಎಂದು ಪೀಚ್ ಹೇಳಿದರು.
ಸೌದಿ ಅರೇಬಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಬಂಧವು ವಾಣಿಜ್ಯ ಹೂಡಿಕೆಯ ಕ್ಷೇತ್ರದಲ್ಲಿ ಸುಧಾರಣೆಯಾಗಿದೆ.ಹೊಸ ಹೂಡಿಕೆಯು ಸೌದಿ ಅರೇಬಿಯಾ ಮತ್ತು ಯುಕೆ ಯ ನಡುವಿನ ಸಂಬಂಧವನ್ನು ಇನ್ನಷ್ಟು ಸುಧಾರಿಸುತ್ತದೆ ಎಂದು ಅವರು ಹೇಳಿದರು.
17.5 ಶತಕೋಟಿ ಡಾಲರ್ ಮೌಲ್ಯದ ಇನ್ನೂರಕ್ಕಿಂತಲೂ ಹೆಚ್ಚಿನ ಸಂಯುಕ್ತ ಯೋಜನೆಗಳು ಈ ಎರಡು ದೇಶಗಳ ನಡುವೆ ಇದೆ ಎಂದು ಅವರು ತಿಳಿಸಿದರು.
ಜಿದ್ದಾದಲ್ಲಿನ ಲುಲು ಹೈಪರ್ ಮಾರ್ಕೆಟ್ ನಲ್ಲಿ ಒಂದು ವಾರ ನಡೆಯಲಿರುವ ಬ್ರಿಟಿಷ್ ಉತ್ಸವದ ಉದ್ಘಾಟನೆಗೆ ಕಾನ್ಸಲ್ ಜನರಲ್ ಆಗಮಿಸಿದ್ದರು. ಅವರು ಸೌದಿ ಅರೇಬಿಯಾದಲ್ಲಿ ಭಾರತೀಯ ಉದ್ಯಮಿಗಳು ಮತ್ತು ಕಾರ್ಮಿಕರ ಸೇವೆಗಳನ್ನು ಕೊಂಡಾಡಿದರು.
ಲುಲು ಗ್ರೂಪ್ ನೂರಾರು ಬ್ರಿಟಿಷ್ ಉತ್ಪನ್ನಗಳನ್ನೊಳಗೊಂಡ ಬ್ಯೂಟಿಫುಲ್ ಬ್ರಿಟನ್ ಫೆಸ್ಟ್ ಉತ್ಸವವನ್ನು ಆಯೋಜಿಸುತ್ತಿದೆ.