janadhvani

Kannada Online News Paper

ಮುಈನುಸುನ್ನಾ ಗುಲ್ಬರ್ಗಾದ ಲ್ಲಿ ಜಲಾಲಿಯ್ಯ ಮಜ್ಲಿಸ್

ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ಅಧೀನ ಸಂಸ್ಥೆಯಾದ ಜಾಮಿಅ ಹುಸ್ನೀಯಾ ಗುಲ್ಬರ್ಗಾ ದಲ್ಲಿ ಜಲಾಲಿಯ್ಯಾ ಆಧ್ಯಾತ್ಮಿಕ ಸಂಗಮ ನಡೆಯಿತು… ಮುಈನುಸುನ್ನಾ ವಿದ್ಯಾಸಂಸ್ಥೆ ಯ ಗೌರವಾಧ್ಯಕ್ಷ ರೂ,ಜಲಾಲಿಯ್ಯಾ ಅಮೀರ್ ಆದ ಸಯ್ಯಿದ್ ಜ‌ಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ನಡೆಯಿತು..

ಮೌಲಾನ ಹಾಫಿಳ್ ಹಝ್ರತ್ ಹುಸೈನ್ ಸಖಾಫಿ ನೇಪಾಳ ಉದ್ಬೋದನೆ ನಡೆಸಿದರು..ಮುಈನುಸುನ್ನಾ ಹಸನೈನ್ ಮಸ್ಜಿದ್ ಅಧ್ಯಕ್ಷ ರಾದ ಮೌಲಾನ ಖಾಸಿಂ ಬಂದೇ ನವಾಝಿ, ಸಂಸ್ಥೆಯ ಡೈರೆಕ್ಟರ್ ಕೆ.ಎಂ ಮುಸ್ತಫಾ ನ‌ಈಮಿ ಹಾವೇರಿ, ಇನಾಂದಾರ್ ಮೆಡಿಕಲ್ ಕಾಲೇಜು ಚೆಯರ್ಮಾನ್ ಡಾ ಖಮರ್ರುರಝಾ ಗುಲ್ಬರ್ಗಾ, ಬದ್ರುದ್ದೀನ್ ಹಾಜಿ ಬಜ್ಬೆ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು..

ಮುಈನುಸುನ್ನಾ , ಜಾಮಿಯಾ ಹುಸ್ನೀಯಾ ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಜಿಸಿ ಹುಸ್ನೀ ಪದವೀಧರರಾದ ವಿದ್ವಾಂಸರ ಒಕ್ಕೂಟ ವಾದ ಹುಸ್ನೀ ಫೌಂಡೇಶನ್ ಇದರ ನೂತನ ಲೋಗೋ ಲಾಚಿಂಗ್ ಮಾಡಲಾಯಿತು.