ರಿಯಾದ್: ಸೌದಿ ಅರೇಬಿಯಾಕ್ಕೆ ಪ್ರವಾಸಿಗರನ್ನು ಆಕರ್ಷಿಸಲು 2019 ರಲ್ಲಿ ಪರಿಚಯಿಸಲಾದ ವಿಶೇಷ ವೀಸಾ ಆಗಿದೆ ಪ್ರವಾಸಿ ವೀಸಾ (Tourist Visa). ಇದು ಬಹು (Multiple) ಮತ್ತು (Single) ಏಕರೂಪದಲ್ಲಿ ಲಭ್ಯವಿದೆ.
ಅಮೇರಿಕಾ (US) ಮತ್ತು ಬ್ರಿಟನ್ (UK) ವೀಸಾಗಳು ಹೊಂದಿರುವ ಇತರ ದೇಶಗಳಿಂದ ಆಗಮಿಸುವವರಿಗೆ ಈಗಾಗಲೇ ಆಗಮನದ ವೀಸಾವನ್ನು (on arrival) ನೀಡಲಾಗುತ್ತಿದೆ. ಇದರ ಹೊರತಾಗಿ, ಸೌದಿ ಅರೇಬಿಯಾಕ್ಕೆ ಪ್ರವಾಸಿ ವೀಸಾಗಳನ್ನು ವಲಸಿಗರು ಮತ್ತು GCC ದೇಶಗಳ ನಾಗರಿಕರಿಗೂ ನೀಡಲಾಗುತ್ತದೆ.
ಇ-ವೀಸಾವನ್ನು ಪಡೆಯಲು www.visitsaudi.com ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಪಡೆದ ಇ-ವೀಸಾ ವನ್ನು ಬಳಸಿ ರಸ್ತೆ ಮತ್ತು ವಾಯುಯಾನ ಮೂಲಕ ಸೌದಿ ಅರೇಬಿಯಾವನ್ನು ಪ್ರವೇಶಿಸಬಹುದು.
ಬಹು ಪ್ರವೇಶ ಇ-ವೀಸಾಗಳು( Multiple E-Visa) ಒಂದು ವರ್ಷಕ್ಕೆ ಮಾನ್ಯವಾಗಿರುತ್ತವೆ. ಏಕ ಪ್ರವೇಶ ವೀಸಾ (Single Entry) 3 ತಿಂಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಬಹು ಪ್ರವೇಶ ವೀಸಾದಲ್ಲಿ ಬರುವವರು ಪ್ರತಿ ಮೂರು ತಿಂಗಳಿಗೊಮ್ಮೆ ಸೌದಿ ಅರೇಬಿಯಾವನ್ನು ತೊರೆದು ಮರು-ಪ್ರವೇಶಿಸಬೇಕು. 300 ರಿಯಾಲ್ ವೀಸಾ ಶುಲ್ಕ ಮತ್ತು 140 ರಿಯಾಲ್ ವಿಮೆ ಸೇರಿದಂತೆ ಇ-ವೀಸಾದ ವೆಚ್ಚ 440 ರಿಯಾಲ್ ಆಗಿದೆ. ಪಾವತಿಗಾಗಿ ಕ್ರೆಡಿಟ್ ಕಾರ್ಡ್ ಅಥವಾ ಮದಾ ಕಾರ್ಡ್ ಅನ್ನು ಬಳಸಬಹುದು.
ಟೂರಿಸ್ಟ್ ವೀಸಾದಲ್ಲಿ ಬರುವವರಿಗೆ ಹಜ್ ನಿರ್ವಹಿಸುವುದಕ್ಕೆ ನಿರ್ಬಂಧವಿದೆ. ಆದರೆ, ಸೌದಿ ಅರೇಬಿಯಾಕ್ಕೆ ಆಗಮಿಸಿದ ಬಳಿಕ ಆನ್‌ಲೈನ್ ಅಪ್ಲಿಕೇಶನ್ ಮೂಲಕ ಪರವಾನಗಿ ಪಡೆದರೆ ಉಮ್ರಾ ನಿರ್ವಹಿಸಲು ಅನುಮತಿಯಿದೆ.
ಜಿಸಿಸಿ ದೇಶಗಳಿಂದ ಆಗಮಿಸುವವರಿಗೆ ಆ ದೇಶದ ಕನಿಷ್ಠ ಮೂರು ತಿಂಗಳ ಸಿಂಧುತ್ವದ ವೀಸಾ ಅಥವಾ ರೆಸಿಡೆನ್ಸಿ ಕಾರ್ಡ್ ಹೊಂದಿರಬೇಕು ಮತ್ತು ಕನಿಷ್ಠ ಆರು ತಿಂಗಳ ಮಾನ್ಯತೆಯಿರುವ ಪಾಸ್‌ಪೋರ್ಟ್ ಹೊಂದಿರಬೇಕು. 18 ವರ್ಷದೊಳಗಿನ ಮಕ್ಕಳಿಗೆ ಪೋಷಕರೊಂದಿಗೆ ಮಾತ್ರ ಆಗಮಿಸಲು ಅವಕಾಶವಿದೆ.ಪೋಶಕರು ಸೌದಿ ಇ-ವೀಸಾ ಪೋರ್ಟಲ್‌ನಿಂದ ಅನುಮೋದಿಸಲ್ಪಟ್ಟ ಕೆಲಸವನ್ನು ಹೊಂದಿರುವುದು ಸಹ ಅಗತ್ಯವಾಗಿದೆ.
ಸೌದಿ ಅರೇಬಿಯಾಕ್ಕೆ ಬರುವವರಿಗೆ ದೇಶದಲ್ಲಿ ಉಳಿಯಲು ಆನ್‌ಲೈನ್ ಮೂಲಕವೇ ಹೋಟೆಲ್‌ಗಳನ್ನು ಆಯ್ಕೆ ಮಾಡಬಹುದು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುವ ಉದ್ದೇಶದಿಂದ ಚಾಲ್ತಿಯಲ್ಲಿರುವ ಪ್ರವಾಸ ವೀಸಾ ಯೋಜನೆಯನ್ನು ಜಿಸಿಸಿ ದೇಶಗಳಿಗೂ ಲಭ್ಯವಾಗುವಂತೆ ಮಾಡಲಾಗಿದೆ.
















ಇನ್ನಷ್ಟು ಸುದ್ದಿಗಳು
ಅನಿವಾಸಿ ಭಾರತೀಯರ ಪಾಸ್‌ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ