ಮಕ್ಕಾ: ಸೌದಿ ಅರೇಬಿಯಾದ ಮಕ್ಕಾ ಮತ್ತು ಮದೀನಾದ ಪವಿತ್ರ ಮಸೀದಿಗಳಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ. ವಿಶುದ್ದ ಮಕ್ಕಾದ ಮಸ್ಜಿದುಲ್ ಹರಾಮ್ ಹಾಗೂ ಮದೀನಾದ ಮಸ್ಜಿದುನ್ನಬವಿಯಲ್ಲಿ ಫೋಟೋ ತೆಗೆಯುವುದನ್ನು ನಿಷೇಧಿಸಲಾಗಿದೆ.
ಪವಿತ್ರ ಮಸೀದಿಗಳಿಗೆ ಭೇಟಿ ನೀಡುವ ವಿಶ್ವಾಸಿಗಳನ್ನು ಅಧಿಕಾರಿಗಳು ಮೇಲ್ವಿಚಾರಣೆ ನಡೆಸುತ್ತಾರೆ. ಫೋಟೋ ತೆಗೆಯುವುದರಿಂದ ಇತರ ವಿಶ್ವಾಸಿಗಳಿಗೆ ತೊಂದರೆಯಾಗುತ್ತಿದೆ. ಹರಂಗೆ ಭೇಟಿ ನೀಡಿ ಪ್ರಾರ್ಥನೆ ನಡೆಸುತ್ತಿರುವ ಇತರ ಯಾತ್ರಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಹಜ್ ಮತ್ತು ಉಮ್ರಾ ಸಚಿವಾಲಯವು ಕೇಳಿಕೊಂಡಿದೆ.
ಈ ಎರಡೂ ಪವಿತ್ರ ಸ್ಥಳಗಳಲ್ಲಿ ಫೋಟೋ ಹಾಗೂ ವೀಡಿಯೋ ಚಿತ್ರೀಕರಣವನ್ನು ಈ ಹಿಂದೆಯೇ ನಿರ್ಬಂಧಿಸಲಾಗಿದೆ, ಆದರೂ ಕೆಲವು ಯಾತ್ರಾರ್ಥಿಗಳು ಅದನ್ನು ಗಮನಿಸದೆ ಫೋಟೋ ಕ್ಲಿಕ್ಕಿಸುವಲ್ಲಿ ತೊಡಗಿರುತ್ತಾರೆ.
ಮಕ್ಕಾದಲ್ಲಿರುವ ಮಸ್ಜಿದುಲ್ ಹರಾಮ್ ಮತ್ತು ಮದೀನಾದಲ್ಲಿನ ಪ್ರವಾದಿ ಮಸೀದಿಯಾದ ಪವಿತ್ರ ಮಸ್ಜಿದುನ್ನಬವೀಯಲ್ಲಿ ಫೋಟೋ ತೆಗೆಯುವ ವೇಳೆ, ಪ್ರಾರ್ಥನೆಯಲ್ಲಿ ತೊಡಗಿರುವ ಇತರ ಯಾತ್ರಾರ್ಥಿಗಳಿಗೆ ತೊಂದರೆಯಾಗಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಪುನಃ ಎಚ್ಚರಿಕೆ ನೀಡಿದ್ದಾರೆ.