ಪಂಜಿಮೊಗರು :ಅಲ್-ಮಸ್ಜಿದುಲ್ ರಿಫಾಯಿಯ್ಯಾ ವತಿಯಿಂದ ದೇಶದ 75 ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮ ಅದ್ದೂರಿಯಾಗಿ ಅಧ್ಯಕ್ಷರಾದ ಅಹ್ಮದ್ ಬಶೀರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಧ್ವಜಾರೋಹಣವನ್ನು ಗೌರವಾಧ್ಯಕ್ಷರಾದ ಅಬ್ಬುಲ್ಲಾ ನೆರವೇರಿಸಿದರು.
ಗಣ್ಯ ಅತಿಥಿಗಳಾಗಿ ಕೆ.ಎಂ.ಜೆ.ಎಂ ಖತೀಬರಾದ ಇಕ್ರಾಮುಲ್ಲಾಹ್ ಸಖಾಫಿ, ಅಧ್ಯಕ್ಷರಾದ ಅಬ್ಬಾಸ್ ಹಾಜಿ, ಪ್ರ.ಕಾರ್ಯದರ್ಶಿ ಶೇಕಬ್ಬ, ಪಂಜಿಮೊಗರು ವಾರ್ಡ್ ಕಾರ್ಪೊರೇಟರ್ ಅನಿಲ್ ಕುಮಾರ್, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ ಆಗಮಿಸಿದ್ದರು.
ಅಲ್-ಮಸ್ಜಿದುಲ್ ರಿಫಾಯಿಯ್ಯಾ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ತಫಾ ಸ್ವಾಗತಿಸಿ, ಸವಾದ್ ಪಂಜಿಮೊಗರು ಧನ್ಯವಾದ ಗೈದರು.







