ರಿಯಾದ್ : ಉಮ್ರಾಕ್ಕಾಗಿ ಸೌದಿ ಅರೇಬಿಯಾಕ್ಕೆ ಆಗಮಿಸುವವರಿಗೆ ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಹೆಚ್ಚಿನ ರಿಯಾಯಿತಿಗಳನ್ನು ಘೋಷಿಸಿದೆ. ಸೌದಿ ಅರೇಬಿಯಾದ ಯಾವುದೇ ವಿಮಾನ ನಿಲ್ದಾಣವನ್ನು ಉಮ್ರಾ ಯಾತ್ರಿಗಳ ನಿರ್ಗಮನ ಮತ್ತು ಆಗಮನಕ್ಕಾಗಿ ಬಳಸಬಹುದು.
ಮೂರು ತಿಂಗಳ ಕಾಲಾವಧಿಯ ವೀಸಾ ಮುಗಿದ ನಂತರ, ಅದೇ ವರ್ಷದಲ್ಲಿ ಮತ್ತೆ ವಿಸಾಕೆ ಅರ್ಜಿ ಸಲ್ಲಿಸಬಹುದು. ಹೊಸ ಉಮ್ರಾ ವೀಸಾ ವ್ಯವಸ್ಥೆಯು ವಲಸಿಗರಿಗೆ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ.
ಈ ಹಿಂದೆ ಹಜ್ ಉಮ್ರಾ ಯಾತ್ರಿಕರಿಗಾಗಿ ಜಿದ್ದಾ ಮತ್ತು ಮದೀನಾ ವಿಮಾನ ನಿಲ್ದಾಣಗಳನ್ನು ನಿಗದಿಪಡಿಸಲಾಗಿತ್ತು. ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಉಮ್ರಾ ಯಾತ್ರಿಕರು ಯಾವುದೇ ವಿಮಾನ ನಿಲ್ದಾಣದ ಮೂಲಕ ಸೌದಿ ಅರೇಬಿಯಾಕ್ಕೆ ಆಗಮಿಸಲು ಮತ್ತು ನಿರ್ಗಮಿಸಲು ಅನುಮತಿಸಲಾಗಿದೆ. ಇದರೊಂದಿಗೆ, ಯಾತ್ರಾರ್ಥಿಗಳು ಸೌದಿ ಪ್ರವಾಸೋದ್ಯಮದ ಯಾವುದೇ ಭಾಗ ಮತ್ತು ಐತಿಹಾಸಿಕ ಕೇಂದ್ರಗಳಿಗೆ ಭೇಟಿ ನೀಡಬಹುದು. ಮತ್ತು ಅವರೊಂದಿಗೆ ಪ್ರಯಾಣಿಸಲು ಬಯಸುವ ಸಂಬಂಧಿಕರಿಗೂ ಇದು ಅನುಕೂಲಕರವಾಗಿರುತ್ತದೆ.
ಸಂದರ್ಶಕ ವೀಸಾ ಮೂಲಕ ಕುಟುಂಬಸ್ಥರನ್ನು ಕರೆತರಲು ಸಾಧ್ಯವಾಗದ ವಲಸಿಗರಿಗೂ ಹೊಸ ನಿರ್ಧಾರದಿಂದ ಅನುಕೂಲವಾಗಲಿದೆ. ಆನ್ಲೈನ್ ಮೂಲಕ ಸ್ವಂತವಾಗಿ ಉಮ್ರಾ ಬುಕ್ಕಿಂಗ್ ವ್ಯವಸ್ಥೆಯನ್ನೂ ಸಚಿವಾಲಯ ಸಿದ್ಧಪಡಿಸಿದೆ.
















ಇನ್ನಷ್ಟು ಸುದ್ದಿಗಳು
ಗ್ರಾಹಕರ ಗಮನಕ್ಕೆ: ಎಲ್ಪಿಜಿ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ