ಬಹರೈನ್ : ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಅಲೆಮಾರಿ ಮುಸ್ಲಿಂ ಬಕರ್ ವಾಲ್ ಬುಡಕಟ್ಟು ಸಮುದಾಯದ ಎಂಟರ ಹರೆಯದ ಬಾಲಕಿ “ಆಸಿಪಾ”ಳ ಅತ್ಯಾಚಾರ ಮತ್ತು ಉತ್ತರ ಪ್ರದೇಶದ ಉನ್ನೊವೊ ಹಾಗು ಗುಜಾರಾತಿನ ಸೂರತಿನಲ್ಲಿ ನಡೆದ ಹತ್ಯೆಯನ್ನು ಖಂಡಿಸಿ ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಸಮಾರಂಭವನ್ನು 20-04-2018 ರಂದು ಶುಕ್ರವಾರ ರಾತ್ರಿ 7 ಕ್ಕೆ ಸರಿಯಾಗಿ ಗುದೈಬಿಯ ಅಂಡಲಸ್ ಗಾರ್ಡನ್ ಪಾರ್ಕ್ ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಎಸ್ ಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಹಾಗೂ ವಿವಿಧ ಸಂಘಟನೆಗಳ ನೇತಾರರು ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಐ ಟೀಮ್ ಚೇರ್ಮ್ಯಾನ್ ರಿಯಾಜ್ ಸುಳ್ಯ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ.






