ಬೆಂಗಳೂರು: ಎಸ್ .ಎಸ್ .ಎಫ್ ಬೆಂಗಳೂರು ಜಿಲ್ಲೆ ಹಮ್ಮಿಕೊಂಡಿದ್ದ ಕ್ಯಾಂಪಸ್ ಅಸೆಂಬ್ಲಿ ವಿದ್ಯಾರ್ಥಿ ಸಂಗಮ ಜು. 31ರಂದು ಅಲ್ ಅಮೀನ್ ಕಾಲೇಜಿನಲ್ಲಿ ನಡೆಯಿತು.
ಸಮಾರಂಭದಲ್ಲಿ ಸಯ್ಯದ್ ಇಬ್ರಾಹಿಂ ಬಾಫಕಿ ತಂಗಳ್ ಅವರು ದುಆ ನೆರವೇರಿಸಿದರು.
ಅಲ್ ಅಮೀನ್ ವಿದ್ಯಾಸಂಸ್ಥೆಗಳ ಚಯರ್ಮ್ಯಾನ್ ಉಮರ್ ಇಸ್ಮಾಯಿಲ್ ಖಾನ್ ಸಭೆಯನ್ನು ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್ ಎಸ್ ಎಫ್ ಬೆಂಗಳೂರು ಜಿಲ್ಲಾಧ್ಯಕ್ಷರಾದ ಸಂಶುದ್ದೀನ್ ಅಝ್ಹರಿ ಅವರು ವಹಿಸಿದ್ದರು.
ಸಮಾರಂಭದಲ್ಲಿ ಅಬ್ದುಲ್ ಅಝೀಝ್ ಅವರು ನವ ಭಾರತದಲ್ಲಿ ವಿದ್ಯಾರ್ಥಿಗಳ ಜವಾಬ್ದಾರಿ ಹಾಗೂ ನಾಸಿರ್ ಬಜ್ಪೆಯವರು ಗ್ಲೋಬಲ್ ಒಪರ್ಚುನಿಟಿಸ್ ಎಂಬ ವಿಷಯವನ್ನು ಮಂಡಿಸಿದರು.
ಅಬಿದ್ ಲುತುಫಿ ಹಾಗೂ ಜಝೀಲ್ ಅಹ್ಸನಿ ಅವರು ಇತರೆ ವಿಷಯಗಳಲ್ಲಿ ತರಗತಿ ನಡೆಸಿ ಕೊಟ್ಟರು.
ಸಭೆಯಲ್ಲಿ ಮುಜೀಬ್ ಸಖಾಫಿ ,ಇಬ್ರಾಹಿಂ ಸಖಾಫಿ ಪಯೋಟ ,ಅಬ್ದುರ್ರಹ್ಮಾನ್ ಹಾಜಿ ,ಶಾಫಿ ಸ’ಅದಿ ಮೆಜೆಸ್ಟಿಕ್ ,ಶಿಹಾಬ್ ಮಡಿವಾಳ ,ಶಬೀಬ್ ಅಲ್ಸೂರ್ ಹಾಗೂ ಸುನ್ನೀ ಸಂಘಸಂಸ್ಥೆಗಳ ನೇತಾರರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಜಿಲ್ಲೆಯ 140 ಕ್ಕೂ ಮಿಕ್ಕ ಕಾಲೇಜ್’ನ ವಿಧ್ಯಾರ್ಥಿಗಳು ಭಾಗವಹಿಸಿದರು .
ಸಿನಾನ್ ಭಟ್ಕಳ್ ಸ್ವಾಗತಿಸಿ,
ನಿಝಾರ್ ಅಲ್ ಖಾದಿರಿ ವಂದಿಸಿದರು.