ದುಬೈ: ಟ್ರಾನ್ಸಿಟ್ ಪ್ರಯಾಣಿಕರಿಗೆ ನಗರ ವೀಕ್ಷಣೆಗೆ ಅನುಮತಿ ನೀಡುವ ನಿರ್ದಿಷ್ಟ ವೀಸಾ ಕಾನೂನಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಅನುಮೋದನೆ ನೀಡಿದೆ.ದೇಶದ ಯಾವುದೇ ವಿಮಾನ ನಿಲ್ದಾಣದಲ್ಲಿ ಇಳಿದರೂ, ನಗರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಅನುಮತಿ ನೀಡುವುದಾಗಿದೆ ಹೊಸ ಯೋಜನೆ.
ಈ ಬಗ್ಗೆ ಅಧ್ಯಯನ ನಡೆಸಲು ಫೆಡರಲ್ ಐಡೆಂಟಿಟಿ ಪ್ರಾಧಿಕಾರ ನೇತೃತ್ವದ ಕ್ರಿಯಾ ಸಮಿತಿಯ ರಚನೆಗೆ ಕ್ಯಾಬಿನೆಟ್ ನಿರ್ದೇಶನ ನೀಡಿದೆ.ಯುಎಇ ವಿಮಾನ ನಿಲ್ದಾಣಗಳಿಗೆ ತಲುಪುವ ಪ್ರಯಾಣಿಕರ ಪೈಕಿ ಶೇಕಡಾ 70 ರಷ್ಟು ಟ್ರಾನ್ಸಿಟ್ ಯಾತ್ರಿಕರಾಗಿದ್ದಾರೆ ಎಂದು ಗುರುತಿಸಲಾಗಿರುವ ಕಾರಣ ಈ ಹೊಸ ಕಾನೂನು ಜಾರಿಗೆ ತರಲಾಗುತ್ತಿದೆ.
ಈ ಕಾನೂನು ಜಾರಿಗೆ ಬಂದಲ್ಲಿ, ದೇಶವು ಪ್ರವಾಸೋದ್ಯಮದ ಮೂಲಕ ದೊಡ್ಡ ಆದಾಯವನ್ನು ಹೊಂದಲಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಸ್ತಾಪವನ್ನು ದುಬೈ ಎಮಿರೇಟ್ ಮುಂದಿಟ್ಟಿದೆ.45 ಲಕ್ಷ ಪ್ರಯಾಣಿಕರು ಪ್ರತಿ ತಿಂಗಳು ದುಬೈಗೆ ಬರುತ್ತಿದ್ದಾರೆ.
ಕನಿಷ್ಠ 4 ಗಂಟೆಗಳ ಕಾಲ, ವಿಮಾನನಿಲ್ದಾಣ ದಲ್ಲಿ ಉಳಿಯುವ ಟ್ರಾನ್ಸಿಟ್ ಗಳಿಗೆ ನಗರ ದರ್ಶನಕ್ಕೆ ಪರವಾನಗಿ ನೀಡಲಾಗುತ್ತದೆ.ಪ್ರವಾಸಿ ವೀಸಾಗಳಲ್ಲಿ ತಲುಪುವವರು ಸರಾಸರಿ ಸಾವಿರ ದಿರ್ಹಂ ಖರ್ಚು ಮಾಡಬಹುದೆಂದು ಅಂದಾಜಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ, ಸರಾಸರಿ ಒಂಬತ್ತು ದಿರ್ಹಂಗಳನ್ನು ಖರ್ಚು ಮಾಡಲಾಗುತ್ತದೆ.
ಹೊಸ ಸಮಿತಿಯು ಇ-ವೀಸಾ ಶುಲ್ಕ ಮತ್ತು ಇತರ ವಿಷಯಗಳ ಬಗ್ಗೆ ನಿರ್ಧರಿಸುತ್ತದೆ. ಯುರೋಪ್‌ಗೆ ಮತ್ತು ಇತರ ಕಡೆಗಳಿಗೆ ದುಬೈ ಮೂಲಕ ಪ್ರಯಾಣಿಸುವ ಪ್ರಯಾಣಿಕರಿಗೆ ಈ ನಿರ್ಧಾರವು ಉತ್ತಮವಾಗಲಿದೆ.
ಯುಎಇಯಲ್ಲಿರುವ ಸಂಬಂಧಿಕರನ್ನು ಒಂದು ದಿನ ಭೇಟಿ ಮಾಡಲು ಈ ಮೂಲಕ ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.