ದಮ್ಮಾಮ್: ಸೌದಿ ಅರೇಬಿಯಾದ ದಮ್ಮಾಮ್ನ ಕಿಂಗ್ ಫಹದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಪ್ರಯಾಣಿಕರಿಗೆ ಚೆಕ್ಡ್ ಇನ್ ಬ್ಯಾಗೇಜ್ಗೆ ಸಂಬಂಧಿಸಿದ ಹೊಸ ನೀತಿಗಳನ್ನು ಪ್ರಕಟಿಸಿದೆ.
ದಮ್ಮಾಮ್ ಏರ್ಪೋರ್ಟ್ ಕಂಪನಿ (DACO) ಎಲ್ಲಾ ವಿಮಾನಯಾನ ಕಂಪೆನಿಗಳಿಗೆ ಹೊಸ ನೀತಿಯ ಸುತ್ತೋಲೆಯನ್ನು ಹೊರಡಿಸಿದೆ.ವಿಮಾನ ನಿಲ್ದಾಣಕ್ಕೆ ತೆರಳುವ ಮುಂಚಿತವಾಗಿ ಬ್ಯಾಗೇಜ್ ನೀತಿಯನ್ನು ಪರಿಶೀಲಿಸುವಂತೆ ಯಾತ್ರಿಕರೊಂದಿಗೆ ವಿನಂತಿಸಲಾಗಿದೆ. ಇದು ವಿಮಾನ ನಿಲ್ದಾಣದಲ್ಲಿ ಉಂಟಾಗಬಹುದಾದ ತೊಂದರೆಯನ್ನು ತಡೆಗಟ್ಟಲು ಸಹಕಾರಿ.

ಅನುಮತಿಸಲಾದ ಲಗೇಜ್ ಮಾದರಿ:
* 76 ಸೆಂ.ಮೀ ಉದ್ದ, 51 ಸೆಂ.ಮೀ ಅಗಲ ಮತ್ತು 31 ಸೆಂ.ಮೀ ಎತ್ತರ, ಕನಿಷ್ಠ ಒಂದು ಸಮತಟ್ಟಾದ ಮೇಲ್ಮೈ ಹೊಂದಿರುವ ಬ್ಯಾಗೇಜ್.
* 76 ಸೆಂ.ಮೀ ಉದ್ದ, 51 ಸೆಂ.ಮೀ ಅಗಲ ಮತ್ತು 31 ಸೆಂ.ಮೀ ಎತ್ತರದೊಳಗೆ ಸಮತಟ್ಟಾದ ಮೇಲ್ಮೈ ಹೊಂದಿರುವ ಸರಿಯಾಗಿ ಪ್ಯಾಕ್ ಮಾಡಿರುವ ಪೆಟ್ಟಿಗೆಗಳು.
* ನಿಯಮಿತ ಆಕಾರದ ಸಾಮಾನ್ಯ ಟ್ರಾವೆಲ್ ಬ್ಯಾಗೇಜ್

ಅನುಮತಿಸಲಾಗದ ಬ್ಯಾಗೇಜ್ ಮಾದರಿ:
- 76 ಸೆಂ.ಮೀ ಗಿಂತ ಹೆಚ್ಚು ಉದ್ದ, 51 ಸೆಂ.ಮೀ ಗಿಂತ ಅಗಲ ಮತ್ತು 31 ಸೆಂ.ಮೀ ಗಿಂತ ಎತ್ತರ ಇರುವ ಬ್ಯಾಗೇಜ್.
- ದುಂಡಗಿನ ಮತ್ತು ಅನಿಯಮಿತ ಆಕಾರದ ಲಗೇಜ್.
- ಹಗ್ಗದಿಂದ ಕಟ್ಟಲಾದ ಅನಿಯಮಿತ ಆಕಾರದ ಚೀಲಗಳು.
- ಉದ್ದವಾದ ಅಥವಾ ಸಡಿಲವಾದ ಪಟ್ಟಿಗಳನ್ನು ಹೊಂದಿರುವ ಲಗೇಜ್.
- ಝಂಝಂ ಅಥವಾ ಇತರ ಲಿಕ್ವಿಡ್ ಹೊಂದಿರುನ ಲಗೇಜ್.
















ಇನ್ನಷ್ಟು ಸುದ್ದಿಗಳು
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ