janadhvani

Kannada Online News Paper

ಹಾರಾಟದ ವೇಳೆ ವಿಮಾನದ 22 ಟೈರ್‌ಗಳ ಪೈಕಿ ಒಂದು ಟೈರ್‌ ಸಿಡಿದಿರುವುದು ಗಮನಕ್ಕೆ ಬಂದಿದೆ.
ಈ ವರದಿಯ ಧ್ವನಿಯನ್ನು ಆಲಿಸಿ

ದುಬೈ: ಆಸ್ಟ್ರೇಲಿಯಾದ ಬ್ರಿಸ್ಬೇನ್ ಗೆ ತೆರಳಿದ್ದ ಎಮಿರೇಟ್ಸ್ ಏರ್ ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಶುಕ್ರವಾರ ಕಾರ್ಯನಿರ್ವಹಿಸಿದ್ದ ಎಮಿರೇಟ್ಸ್ ವಿಮಾನ ಇಕೆ 430 ದೋಷಪೂರಿತವಾಗಿತ್ತು.

ವಿಮಾನದ ಟೈರ್ ಸ್ಫೋಟಗೊಂಡಿದ್ದು, ಹೊರಭಾಗದಲ್ಲಿ ರಂಧ್ರ ಕಂಡುಬಂದಿದೆ. ಆದರೆ ಯಾವುದೇ ಅವಘಡ ಸಂಭವಿಸದೆ 14 ಗಂಟೆಗಳ ಹಾರಾಟ ನಡೆಸಿ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತು. ಹಾರಾಟ ಸಂದರ್ಭದಲ್ಲಿ ಭಾರೀ ಶಬ್ದವೊಂದು ಕೇಳಿರುವುದಾಗಿ ಯಾತ್ರಿಕರು ತಿಳಿಸಿದ್ದಾರೆ. ಯಾವುದೇ ಅವಗಡ ಸಂಭವಿಸದೆ ಲ್ಯಾಂಡಿಂಗ್ ಆದ ಬಳಿಕ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಹಾರಾಟದ ವೇಳೆ ವಿಮಾನದ 22 ಟೈರ್‌ಗಳ ಪೈಕಿ ಒಂದು ಟೈರ್‌ ಸಿಡಿದಿರುವುದು ಗಮನಕ್ಕೆ ಬಂದಿದೆ. ವಿಮಾನದ ಚರ್ಮ ಎಂದು ಕರೆಯಲ್ಪಡುವ ಕಡೆಯಲ್ಲಿ ಒಂದು ರಂಧ್ರವೂ ಕಂಡುಬಂದಿದೆ. ಆದರೆ ಇದು ವಿಮಾನದ ಫ್ಯೂಸ್ಲೇಜ್, ಫ್ರೇಮ್ ಅಥವಾ ರಚನೆಯ ಮೇಲೆ ಪರಿಣಾಮ ಬೀರುವ ದೋಷವಲ್ಲ. ಆದ್ದರಿಂದ ವಿಮಾನವು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಯಾವುದೇ ಅಡ್ಡಿಯಾಗಿಲ್ಲ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com