janadhvani

Kannada Online News Paper

ಜಾತಿ ಬೇಧ ಮರೆತು ತುರ್ತು ಸೇವೆಯಲ್ಲಿ ಸಕ್ರೀಯರಾಗಲು ಎಸ್ಸೆಸ್ಸೆಫ್ ಕರೆ

ಶಾಲಾ ಕಾಲೇಜು, ಮದ್ರಸಾ ತೆರಳುವ ವಿದ್ಯಾರ್ಥಿಗಳು, ಹೆಂಗಸರು ವೃದ್ಧರು ಮುಂತಾದವರ ಬಗ್ಗೆ ಎಚ್ಚರವಹಿಸಬೇಕಾಗಿದೆ.

ಕಳೆದ 2 ದಿನಗಳಿಂದ ಅತೀ ಭೀಕರ ಮಳೆಯಿಂದಾಗಿ ಹಲವಾರು ಪ್ರದೇಶಗಳ ಜನರು, ಜಾನುವಾರುಗಳು ತೊಂದರೆಗೀಡಾಗಿವೆ. ಅಲ್ಲಾಹು ಭೀಕರ ದುರಂತಗಳಿಂದ ನಮ್ಮನ್ನೆಲ್ಲರನ್ನು ಕಾಪಾಡಲಿ.ಸರ್ವರೂ ಪ್ರಾರ್ಥನೆ ಮಾಡುವುದರೊಂದಿಗೆ ಹೆಚ್ಚು ಜಾಗರೂಕರಾಗಬೇಕಾಗಿದೆ.

ಶಾಲಾ ಕಾಲೇಜು, ಮದ್ರಸಾ ತೆರಳುವ ವಿದ್ಯಾರ್ಥಿಗಳು, ಹೆಂಗಸರು ವೃದ್ಧರು ಮುಂತಾದವರ ಬಗ್ಗೆ ಎಚ್ಚರವಹಿಸಬೇಕಾಗಿದೆ. ಜೊತೆಗೆ ಜಾತಿಧರ್ಮ ನೋಡದೇ ತುರ್ತು ಅಗತ್ಯ ಸೇವೆಗಳಲ್ಲಿ ಸಕ್ರೀಯರಾಗಲು ಎಸ್ಸೆಸ್ಸೆಫ್ ಕಾರ್ಯಕರ್ತರು ಸಿದ್ದರಾಗಬೇಕಾಗಬೇಕೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಕರೆ ನೀಡಿದ್ದಾರೆ.