janadhvani

Kannada Online News Paper

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್: ರಿಯಾದ್ ಸಮಿತಿಗೆ ನವ ಸಾರಥ್ಯ

ಈ ವರದಿಯ ಧ್ವನಿಯನ್ನು ಆಲಿಸಿ

ರಿಯಾದ್: ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯ ಇದರ ಅಧೀನದಲ್ಲಿ ಕಾರ್ಯಾಚರಿಸುತಿರುವ ರಿಯಾದ್ ಸಮಿತಿಗೆ ನೂತನ ಸಮಿತಿಯನ್ನು
ಮಲಾಸ್ ಕಿಸ್ವ ವಿಲ್ಲದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅಯ್ಕೆ ಮಾಡಲಾಯಿತು.

ಹಂಸ ಮುಸ್ಲಿಯಾರ್ ಚೋಕಂಡಳ್ಳಿ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ ಶಿಹಾಬ್ ಸಖಾಫಿ ಮುಖ್ಯ ಭಾಷಣ ಮಾಡಿದರು.

ಅಧ್ಯಕ್ಷರಾಗಿ ನಝೀರ್ (ಗುಂಡಿಕೆರೆ) ಪ್ರಧಾನ ಕಾರ್ಯದರ್ಶಿಯಾಗಿ ನಿಹಾದ್ (ಹೊಸಕತೋಟ) ಖೋಶಾಧಿಕಾರಿಯಾಗಿ ಕರೀಂ ಮುಸ್ಲಿಯಾರ್ (ಸುಂಟಿಕೊಪ್ಪ) ಆಯ್ಕೆಮಾಡಿದರು.

ಉತ್ತಮ ಸೇವಕನಾಗಿ ಆಯ್ಕೆಯಾದ ಷಂಸು ತಕ್ಕಪ್ಪಳ್ಳಿ ಯವರನ್ನು ಮತ್ತು ರಫೀಕ್ ತಂಙಳ್ ಮಾಲ್ದಾರೆ ಯವನ್ನು ಸಭೆಯಲ್ಲಿ ಆಧರಿಸಿದರು.

ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಹಂಸ ಮುಸ್ಲಿಯಾರ್ (ಚೋಕಂಡಳ್ಳಿ) ಮತ್ತು ಇತರೆ ನೇತಾರರು ಉಪಸ್ಥಿತರಿದ್ದರು
ಕರೀಂ ಮುಸ್ಲಿಯಾರ್ ಸ್ವಾಗತಿಸಿದರು.

error: Content is protected !! Not allowed copy content from janadhvani.com