janadhvani

Kannada Online News Paper

ಧರ್ಮ ನಿಂದನೆ: ರಾಧಾಕೃಷ್ಣ ಅಡ್ಯಾಂತಾಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯ

ವಿಟ್ಲ :ಇಲ್ಲಿ ನಡೆದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಭಾಷಣ ಮಾಡಿದ ರಾಧಾಕೃಷ್ಣ ಅಡ್ಯಾಂತಾಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯ.

ಜೂನ್, 06, 2022 ರಂದು ವಿಟ್ಲದಲ್ಲಿ ನಡೆದ ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಇಸ್ಲಾಂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ”ಇಸ್ಲಾಂ ಧರ್ಮವಲ್ಲ, ಕಾಮುಕರ ಗ್ಯಾಂಗ್” ಎಂದು ಭಾಷಣ ಮಾಡಿದ ಹಿಂ.ಜಾ.ವೇ ಮುಖಂಡ ರಾಧಾಕೃಷ್ಣ ಅಡ್ಯಾಂತಾಯ ಅವರ ವಿರುದ್ಧ ಫೋಲಿಸ್ ಇಲಾಖೆಯು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ವಿಟ್ಲದ ಸುನ್ನೀ ಕೋಆರ್ಡಿನೇಶನ್ ಸಮಿತಿ ವತಿಯಿಂದ ವಿಟ್ಲ ಠಾಣೆಯ ಎಸ್.ಐ ಮಂಜುನಾಥ್ ಟಿ. ಅವರಿಗೆ ಮನವಿ ಸಲ್ಲಿಸಲಾಗಿದೆ.