janadhvani

Kannada Online News Paper

ಸಅದಿಯ್ಯ ಮಿಸ್ಬಾಹುಸ್ಸುಆದ ಕನ್ನಡ ಸಾಹಿತ್ಯ ವೇದಿಕೆಗೆ ನವ ಸಾರಥ್ಯ

ಈ ವರದಿಯ ಧ್ವನಿಯನ್ನು ಆಲಿಸಿ

ಕಾಸರಗೋಡು: ದಕ್ಷಿಣ ಕೇರಳದ ಪ್ರತಿಷ್ಠಿತ ಸಂಸ್ಥೆಯಾದ ಜಾಮಿಅ ಸಅದಿಯ್ಯ ಅರಬಿಯ್ಯ ಇದರ ಪ್ರಧಾನ ಸಂಸ್ಥೆಯಾದ ಶರೀಅತ್ ಕಾಲೇಜಿನ ಕನ್ನಡಿಗ ವಿದ್ಯಾರ್ಥಿ ಸಂಘಟನೆಯಾದ (Moks: organisation of Kannada students ) ಮಿಸ್ಬಾಹುಸ್ಸುಆದ ಕನ್ನಡ ಸಾಹಿತ್ಯ ವೇದಿಕೆ ಇದರ ವಾರ್ಷಿಕ ಮಹಾಸಭೆಯು ಬುಧವಾರ ಮಧ್ಯಾಹ್ನ ಸಅದಿಯ ಸಭಾಂಗಣಲ್ಲಿ ನಡೆಯಿತು.

ಪ್ರಸ್ತುತ ಕಾರ್ಯಕ್ರಮದಲ್ಲಿ ಸಅದಿಯ ಪ್ರಿನ್ಸಿಪಲ್ ಮಾಣಿಕೋತ್ ಅಬ್ದುಲ್ಲಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಇಸ್ಮಾಯಿಲ್ ಅಲ್ ಹಾದಿ ಪಾನೂರ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ಸಅದಿಯ ಪ್ರೊಫೆಸರ್ ಹುಸೈನ್ ಸಅದಿ ಕೆಸಿ ರೋಡ್ ಸಂಘಟನೆಯ ಅವಶ್ಯಕತೆ ಮತ್ತು ಜವಾಬ್ದಾರಿಯ ಕುರಿತು ಮಾತನಾಡಿ ನೂತನ ಸಮಿತಿಯನ್ನು ಘೋಷಿಸಿದರು.

Moks ನೂತನ ಸಮಿತಿ:

ಅಧ್ಯಕ್ಷರು: ರಫ್ತಾನ್ ಅಲ್-ಹಾದಿ ಸುರತ್ಕಲ್.

ಉಪಾಧ್ಯಕ್ಷರು: ಸಯ್ಯದ್ ನಿಝಾಮುದ್ದೀನ್ ಕೊಡಗು, ಶಿಹಾಬುದ್ದೀನ್ ಹಾಸನ.

ಪ್ರಧಾನ ಕಾರ್ಯದರ್ಶಿ: ರಊಫ್ ಎಲಿಮಲೆ

ಜೊತೆ ಕಾರ್ಯದರ್ಶಿ : ಸಯ್ಯಿದ್ ಝಕರಿಯ್ಯ ಅಲ್ ಹೈದ್ರೋಸಿ ಕೊಡಗು, ಕಾದರ್ ಸುಹೈಲ್ ಸರಳಿಕಟ್ಟೆ, ಯಾಸಿರ್ ನೆಲ್ಯಾಡಿ .

ಕೋಶಾಧಿಕಾರಿ : ನಿಝಾರ್ ಚೆನ್ನಾರ್

error: Content is protected !! Not allowed copy content from janadhvani.com