janadhvani

Kannada Online News Paper

ದೇಶದಲ್ಲಿ ಸಂವಿಧಾನವನ್ನು ಉಳಿಸಲು ಎಸ್ಟಿಪಿಐ ಬದ್ಧ- ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು

ಎಸ್ಟಿಪಿಐ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಜನಾಧಿಕಾರ ಸಮಾವೇಶ ಯಶಸ್ವಿ ಸಮಾಪ್ತಿ
ಈ ವರದಿಯ ಧ್ವನಿಯನ್ನು ಆಲಿಸಿ

ಮಂಗಳೂರು,ಮೇ.27: ಇಲ್ಲಿನ ಹೊರವಲಯದ ಕಣ್ಣೂರು ಮೈದಾನದಲ್ಲಿಂದು ಎಸ್ಟಿಪಿಐ ಕರ್ನಾಟಕ ವತಿಯಿಂದ ಹಮ್ಮಿಕೊಂಡಿದ್ದ ಜನಾಧಿಕಾರ ಸಮಾವೇಶವು ಯಶಸ್ವಿಯಾಗಿ ಸಮಾಪ್ತಿಗೊಂಡಿತು.

ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ, ಎಸ್ಟಿಪಿಐ ರಾಜ್ಯ ಸಮಿತಿಯ ಅಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಅವರು ದೇಶದಲ್ಲಿ ಸಂವಿಧಾನವನ್ನು ಉಳಿಸಲು, ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಎಸ್ಟಿಪಿಐ ಬದ್ಧವಾಗಿದೆ ಎಂದರು.

ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಸರಕಾರ ಜನರ ಪರವಾಗಿಲ್ಲ, ಅಂಬಾನಿ, ಅದಾನಿ ಅವರ ಪರವಾಗಿದೆ. ದೇಶವನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ ಮಾಡುವ ಬದಲು ಅಧಿಕಾರ ಪಡೆದಿರುವ ಫ್ಯಾಸಿಸ್ಟ್ ಶಕ್ತಿಗಳು ಈ ದೇಶವನ್ನು ಭ್ರಷ್ಟಾಚಾರ, ಕೋಮವಾದ, ದ್ವೇಷದ ರಾಜಕಾರಣದ ಮೂಲಕ ಛಿದ್ರಗೊಳಿಸಲು ಹೊರಟಿವೆ.

ನೋಟ್ ಬ್ಯಾನ್, ಜಿಎಸ್ಟಿ, ಎನ್‌ಇಪಿ ಮೊದಲಾದ ನೀತಿಯ ಮೂಲಕ ಬಿಜೆಪಿ ಜನ ಸಾಮಾನ್ಯರ ಸಂಕಷ್ಟಕ್ಕೆ ಕಾರಣವಾಗಿದೆ. ಪೋಲೀಸರ ಸಮ್ಮಖದಲ್ಲಿಯೇ ಅಲ್ಪ ಸಂಖ್ಯಾತರ ಮೇಲೆ ದೌರ್ಜನ್ಯ ನಡೆದಿದೆ. ಪರಿಹಾರ ನಿಡುವಲ್ಲಿ ತಾರತಮ್ಯ ನಡೆಯುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಹಿಂದೆಂದಿಗೂ ಕಂಡು ಕೇಳರಿಯದ ರೀತಿಯಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ವಿರೋಧ ಪಕ್ಷಗಳು ಮೌನವಹಿಸಿವೆ.

ಹಿಜಾಬ್ ಧಾರ್ಮಿಕ ಆಚರಣೆಯಲ್ಲ ಎಂದು ರಾಜ್ಯ ಸರಕಾರ ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿದ ಸಂದರ್ಭದಲ್ಲಿ ವಿಪಕ್ಷದಲ್ಲಿದ್ದ ಮುಸ್ಲಿಂ ಸಮುದಾಯದ ಶಾಸಕರಿಗೆ ನಾಚಿಕೆಯಾಗಬೇಕು. ಎನ್‌ಇಪಿ ಎಂಬುವುದು ಆರೆಸೆಸ್ ಶಿಕ್ಷಣ ನೀತಿ ಹೊರತು ಬೇರೆ ಅಲ್ಲ ಎಂದು ಅಬ್ದುಲ್ ಮಜೀದ್ ತಿಳಿಸಿದರು.

ಎಸ್ಟಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮುಹಮ್ಮದ್ ತುಂಬೆ, ಎಸ್ಟಿಪಿಐ ಜನಾಧಿಕಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ, ರಾಜ್ಯದಲ್ಲಿ ಹತ್ಯಾಕಾಂಡಕ್ಕೆ ಬಹಿರಂಗವಾಗಿ ಕರೆ ನೀಡುವ ಬಿಜೆಪಿಯ ಈಶ್ವರಪ್ಪನಂತಹ ನಾಯಕರಿಂದ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಹೇಳಿಕೆ ನೀಡುವ ರಾಜ್ಯದ ಮುಖ್ಯಮಂತ್ರಿ ನೇತೃತ್ವದ ಸರಕಾರದಿಂದ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಹಿಂದೂ ಮುಸ್ಲಿಂ ಸಂಘರ್ಷ ಹೆಚ್ಚುತ್ತಿದೆ. ವೈಷಮ್ಯದ ರಾಜಕಾರಣಕ್ಕೆ ಸಂಚು ನಡೆಸುವವರಿಗೆ ಪರೋಕ್ಷವಾಗಿ ಬೆಂಬಲ ನೀಡಲಾಗುತ್ತಿದೆ. ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವ ಬದಲು ದ್ವೇಷದ, ಕೋಮುವಾದದ ರಾಜಕಾರಣ, ಶೇ.40 ಭ್ರಷ್ಟಾಚಾರದಲ್ಲಿ ತೊಡಗಿದ ಬಿಜೆಪಿಯ ಈ ನೀತಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಂಪೂರ್ಣ ವಿಫಲವಾಗಿವೆ. ಈ ಹಿನ್ನೆಲೆಯಲ್ಲಿ ಎಸ್ಬಿಪಿಐ ಪರ್ಯಾಯ ರಾಜಕೀಯ ಶಕ್ತಿಯಾಗಿ ಮೂಡಿ ಬರುತ್ತಿದೆ ಎಂದು ಇಲ್ಯಾಸ್ ತುಂಬೆ ಹೇಳಿದರು.

ಮುಖ್ಯ ಅತಿಥಿಗಳಾಗಿ ಅಶ್ರಫ್ ಮೌಲವಿ ಮುವಾಟ್ಟುಪುಝ (ರಾಜ್ಯಾಧ್ಯಕ್ಷರು: ಎಸ್‌ಡಿಪಿಐ ಕೇರಳ) ರಿಯಾಝ್ ಫರಂಗಿಪೇಟೆ (ರಾಷ್ಟ್ರೀಯ ಕಾರ್ಯದರ್ಶಿ, ಎಸ್‌ಡಿಪಿಐ) ಅಲ್ಫಾನೋ ಫ್ರಾಂಕೋ (ರಾಷ್ಟ್ರೀಯ ಕಾರ್ಯದರ್ಶಿ, ಎಸ್‌ಡಿಪಿಐ) ದೇವನೂರು ಪುಟ್ನಂಜಯ್ಯಾ (ರಾಜ್ಯ ಉಪಾಧ್ಯಕ್ಷರು, ಎಸ್‌ಡಿಪಿಐ, ಕರ್ನಾಟಕ) ಬಿ.ಆರ್ ಭಾಸ್ಕರ್ ಪ್ರಸಾದ್ (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಅಬ್ದುಲ್ ಲತೀಫ್ ಪುತ್ತೂರು (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಆನ್ಸರ್ ಕೊಡ್ಲಿಪೇಟೆ (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಆಯಿಶಾ ಬಜಪೆ(ರಾಷ್ಟ್ರೀಯ ಕಾರ್ಯದರ್ಶಿ, ವಿಮೆನ್ ಇಂಡಿಯಾ ಮೂವ್‌ಮೆಂಟ್) ಶಾಹಿದಾ ತಸ್ವೀಮ್ (ರಾಜ್ಯಾಧ್ಯಕ್ಷೆ, ವಿಮೆನ್ ಇಂಡಿಯಾ ಮೂವ್‌ಮೆಂಟ್, ಕರ್ನಾಟಕ) ಫರ್ಝಾನಾ ಮುಹಮ್ಮದ್ (ರಾಜ್ಯಾಧ್ಯಕ್ಷ, ನ್ಯಾಷನಲ್ ವಿಮೆನ್ ಫ್ರೆಂಟ್, ಕರ್ನಾಟಕ) ಅಥಾವುಲ್ಲಾ ಪೂಂಜಾಲಕಟ್ಟೆ (ರಾಜ್ಯಾಧ್ಯಕ್ಷರು, ಕ್ಯಾಂಪಸ್ ಫ್ರೆಂಟ್, ಕನಾಟಕ) ಮಜೀದ್ ತುಂಬೆ (ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್‌ಡಿಪಿಐ ಕರ್ನಾಟಕ) ಅಶ್ರಫ್ ಮಾಚಾರ್ (ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಆನಂದ ಮಿತ್ತಬೈಲ್ (ರಾಜ್ಯ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ), ಶಾಫಿ ಬೆಳ್ಳಾರೆ (ರಾಜ್ಯ ಕಾರ್ಯದರ್ಶಿ, ಎಸ್‌ಡಿಪಿಐ ಕರ್ನಾಟಕ) ಅಬ್ದುಲ್ ಮಜೀದ್ ಖಾನ್ (ರಾಜ್ಯ ಸಮಿತಿ ಸದಸ್ಯರು ಎಸ್‌ಡಿಪಿಐ ಕರ್ನಾಟಕ) ಝೀನತ್ ಬಂಟ್ವಾಳ (ರಾಜ್ಯ ಸಮಿತಿ ಎಸ್‌ಡಿಪಿಐ ಕರ್ನಾಟಕ) ಜಲೀಲ್ ಕೆ. (ರಾಜ್ಯ ಸಮಿತಿ ಸದಸ್ಯರು ಎಸ್‌ಡಿಪಿಐ ಕರ್ನಾಟಕ) ಅಕ್ಟರ್ ಅಲಿ(ರಾಜ್ಯ ಸಮಿತಿ ಸದಸ್ಯರು ಎಸ್‌ಡಿಪಿಐ ಕರ್ನಾಟಕ) ರಿಯಾಝ್ ಕಡಂಬು (ರಾಜ್ಯ ಸಮಿತಿ ಸದಸ್ಯರು ಎಸ್‌ಡಿಪಿಐ ಕರ್ನಾಟಕ) ಅಬೂಬಕ್ಕರ್ ಕುಳಾಯಿ (ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ ದಕ್ಷಿಣ ಕನ್ನಡ) ನಝೀರ್ ಅಹಮದ್ (ಜಿಲ್ಲಾಧ್ಯಕ್ಷರು ಎಸ್‌ಡಿಪಿಐ ಉಡುಪಿ) ತೌಫೀಕ್ ಬ್ಯಾರಿ (ಜಿಲ್ಲಾದ್ಯಕ್ಷರು, ಎಸ್‌ಡಿಪಿಐ ಉತ್ತರ ಕನ್ನಡ) ಗೌಸ್ ಮುನೀರ್ (ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ ಚಿಕ್ಕ ಮಗಳೂರು) ಸಲೀಂ ಸಕಲೇಶಪುರ (ಜಿಲ್ಲಾಧ್ಯಕ್ಷರು, ಎಸ್‌ಡಿಪಿಐ ಹಾಸನ ಗ್ರಾಮಾಂತರ) ನಸೀಯಾ ಬೆಳ್ಳಾರೆ (ಜಿಲ್ಲಾಧ್ಯಕ್ಷೆ, ವಿಮೆನ್ ಇಂಡಿಯಾ ಮೂವೆಂಟ್ ದಕ್ಷಿಣ ಕನ್ನಡ) ಮಿಶ್ರಿಯಾ ಕಣ್ಣೂರು (ಜಿಲ್ಲಾ ಉಪಾಧ್ಯಕ್ಷೆ, ಎಸ್‌ಡಿಪಿಐ ದಕ್ಷಿಣ ಕನ್ನಡ) ವಿಕ್ಟರ್ ಮಾರ್ಟಿಸ್ (ಜಿಲ್ಲಾ ಉಪಾಧ್ಯಕ್ಷರು, ಎಸ್‌ಡಿಪಿಐ ದಕ್ಷಿಣ ಕನ್ನಡ) ಸಂಶಾದ್ ಅಬೂಬಕ್ಕರ್ (ಮ.ನ.ಪಾ ಸದಸ್ಯರು) ಮುನೀಬ್ ಬೆಂಗರೆ (ಮ.ನ.ಪಾ ಸದಸ್ಯರು) ಮಹಮ್ಮದ್ ಪಕ್ಯಾರ್ (ಜಿಲ್ಲಾಧ್ಯಕ್ಷರು, ಕಾಸರಗೋಡು) ಪೌಝಿಯಾ (ಅಧ್ಯಕ್ಷರು, ಸಜಿಪ ಗ್ರಾಮ ಪಂಚಾಯತ್) ಇಸ್ಮಾಯಿಲ್ (ಅಧ್ಯಕ್ಷರು ಮಳ್ಳೂರು ಗ್ರಾಮ ಪಂಚಾಯತ್) ಪೌಸ್ಪಿನ್ ಡಿ ಸೋಜ (ಸಜಿಪ ಮುನ್ನೂರು ಗ್ರಾಮ ಪಂಚಾಯತ್) ಮೊದಲಾದವರು ಉಪಸ್ಥಿತರಿದ್ದರು.

ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಸ್ವಾಗತಿಸಿದರು.

error: Content is protected !! Not allowed copy content from janadhvani.com