janadhvani

Kannada Online News Paper

ಮನಸ್ಥಿತಿ ಬದಲಾಗ ಬೇಕಾದುದು, ಪ್ರತಾಪ ಸಿಂಹ ನದ್ದು, ಮುಸ್ಲಿಮರದ್ದಲ್ಲ- ಮುಸ್ಲಿಮ್ ಒಕ್ಕೂಟ

ಮಂಗಳೂರು: ಮುಸ್ಲಿಮರು ಕಲ್ಲು ತೂರುವ ಸಂಸ್ಕೃತಿಯ ವರು,ಅವರ ಮನಸ್ಥಿತಿ ಬದಲಾಗೇಕಿದೆ,ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿ ಗಲಭೆಗೆ ಪ್ರಚೋದನೆ ಆದದ್ದು, ದುಷ್ಕರ್ಮಿ ಯುವಕನ, ಮುಸ್ಲಿಮ್ ಧರ್ಮದ ಆರಾಧನಾ ಕೇಂದ್ರದ ಮೇಲಿನ ದ್ವಜ ಸ್ಥಾಪನೆ ಎಂಬ ನಿಂದನಾತ್ಮಕ ಸಾಮಾಜಿಕ ಜಾಲ ತಾಣ ಪೋಸ್ಟ್ ಚಿತ್ರವಾಗಿದೆ. ಪೊಲೀಸರು ಕ್ಲಪ್ತ ಸಮಯಕ್ಕೆ ಕ್ರಮ ಕೈಗೊಂಡಿದ್ದರೆ, ಹುಬ್ಬಳಿ ಸ್ಥಿತಿ ಈ ಮಟ್ಟಕ್ಕೆ ಹೋಗುತ್ತಿರಲಿಲ್ಲ.ಆದರೆ,ಹುಬ್ಬಳಿಯ ಕೇಶವ ಕುಂಜ ಅಣತಿಯಂತೆ, ಯೋಜನೆ ಬೇರೆಯೇ ತಯಾರಾಗಿದ್ದು, ಅಲ್ಲಿನ ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಏನು ಗೊತ್ತು.

ಅಂದು ಗುಂಪಿನಲ್ಲಿ ಸೇರಿಕೊಂಡ ಸಂಘ ಪ್ರೇರಿತ ಹಿಂದುಳಿದ ವರ್ಗದ ಪುಂಡ ಹುಡುಗರು ಘಟನಾ ಸ್ಥಳದಲ್ಲಿ ಪೂರ್ವ ಯೋಜಿತ ರೀತಿಯಲ್ಲಿಯೇ ಕಲ್ಲು ಬಿಸಾಡಿದ್ದನ್ನು, ಇಂದು ತನಿಖೆ ನಡೆಯುತ್ತಿದೆ. ನೈಜ ಕೃತ್ಯ ಬಹಿರಂಗವಾಗಲಿ. ಪ್ರತಾಪ್ ಸಿಂಹ ಏನೋ ತುರ್ತು ಸ್ಥಿಯಲ್ಲಿದ್ದಾರೆ. ಬಹುಷ ಮೈಸೂರಿನ ಮಾಧವ ಕೃಪಾ ಅಣತಿ ಬಂದಿರಬೇಕು. ಪ್ರತಾಪ್ ಸಿಂಹ ಕೃಪಾ ಪ್ರೇರಿತ ಹೇಳಿಕೆ ನೀಡಿ ಮುಸ್ಲಿಮರ ಚಿಂತನೆಯನ್ನು ಬದಲಿಸಲು ಹೊರಟಿದ್ದಾರೆ.

ಸಿಂಹ ತಿಳಿಯಲಿ, ಈ ದೇಶದ ಮುಸ್ಲಿಮರು ಚಿಂತಿಸಿಯೇ ಈ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಜೀವವನ್ನು ಬಲಿ ನೀಡಿದ್ದಾರೆ. ಅಗತ್ಯ ಬಿದ್ದರೆ ಈ ದೇಶದ ಸಂವಿಧಾನದ ಉಳಿವಿಗೆ ಕೂಡಾ ಜೀವ ಬಲಿ ನೀಡಲು ಸಿದ್ಧರಿದ್ದಾರೆ. ಡಾ. ಬೀ.ಆರ್.ಅಂಬೇಡ್ಕರ್,ಮಹಾತ್ಮಾ ಗಾಂಧಿ, ಮೌಲಾನ ಅಬುಲ್ ಕಲಾಂ ಅಜಾದ್, ಬಸವಣ್ಣ, ಕೆಂಪೇಗೌಡ, ಹಜ್ರತ್ ಟಿಪ್ಪು ಸುಲ್ತಾನ್, ಕುವೆಂಪು, ದೊರೆಸ್ವಾಮಿ, ದೇವರಾಜ ಅರಸ್, ಸ್ವಾಮಿ ವಿವೇಕಾನಂದರು, ಬ್ರಹ್ಮ ಶ್ರೀ ನಾರಾಯಣ ಗುರುಸ್ವಾಮಿ ಮುಂತಾದ ಸಾಮಾಜಿಕ ಸುಧಾರಕರು ಹಾಕಿ ಕೊಟ್ಟ ನೈತಿಕ ಪ್ರತಿಪಾದನೆ ಯಿಂದ ಈ ದೇಶದ ಮುಸ್ಲಿಮರು, ಹಿಂದುಳಿದ ವರ್ಗ, ಪರಿಶಿಷ್ಟರು, ಬುಡಕಟ್ಟು ಜನರು ಅನಾದಿ ಕಾಲದಿಂದ ತಮ್ಮ ಮನಸ್ಥಿತಿಯನ್ನು ಪಾಲನೆ ಮಾಡಿ ಸೌಹಾರ್ದ ಪರಂಪರೆ ಮೆರೆದಿದ್ದಾರೆ. ಮುಸ್ಲೀಮರ ಚಿಂತನಾ ಲಹರಿ ಸಮರ್ಪಕವಾಗಿ ಯೇ ಇದೆ. ಬದಲಾಗ ಬೇಕಾದುದು ಪ್ರತಾಪ್ ಸಿಂಹ ರಂತಹ, ಮಾಧವಾ ಕೃಪಾ ಲಿಖಿತ ಹೇಳಿಕೆ ನೀಡುವ ವ್ಯಕ್ತಿಗಳದ್ದು ಎಂದು ಆರಿಯಲಿ.

ಕೆ.ಅಶ್ರಫ್.
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.

error: Content is protected !! Not allowed copy content from janadhvani.com