ಮನುಕುಲವನ್ನೇ ಬೆಚ್ಚಿಬೀಳಿಸುವಂತಹ ಆಸಿಫಾ ಹತ್ಯಾ ಪ್ರಕರಣ: ಕೆಸಿಎಫ್ ಯುಎಇ ತೀವ್ರ ಖಂಡನೆ

ದುಬೈ: ಮನುಕುಲವನ್ನೇ ಬೆಚ್ಚಿ ಬೀಳಿಸುವ ಹೃದಯವಿದ್ರಾವಕ‌ ಘಟನೆಯೊಂದು ಭಾರತದ ಕಾಶ್ಮೀರದಲ್ಲಿ ನಡೆದಿರುವುದು ಖಂಡನೀಯ.
ಜಮ್ಮು ಕಾಶ್ಮೀರದ ಕಾಥುವಾ ಎಂಬಲ್ಲಿ ಎಂಟು ವರ್ಷ ಪ್ರಾಯದ ಆಸಿಫಾ ಎಂಬ ಮುಗ್ದ ಬಾಲಕಿಯನ್ನು ಅಪಹರಿಸಿ ಬಾಲಾಪರಾಧಿ ಸಹಿತ ಉನ್ನತ ಪೋಲೀಸ್ ಅಧಿಕಾರಿಗಳನ್ನೊಳಗೊಂಡು ನಾಲ್ಕು ಜನರ ತಂಡವು ಏಳು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆಗೈದ ಘಟನೆಯು ಭಾರತವನ್ನು ತಲೆತಗ್ಗಿಸುವಂತೆ ಮಾಡಿದೆ.

ತನ್ನ ಗ್ರಾಮದಲ್ಲಿನ ಕಾಡು ಪ್ರದೇಶಕ್ಕೆ ಕುದುರೆಯನ್ನು ಮೇಯಿಸಲು ಹೋಗಿದ್ದ ಆಸಿಫಾಳನ್ನು ಅಪಹರಿಸಿ ಅತ್ಯಾಚಾರ ನಡೆಸಿ‌ ಹತ್ಯೆಗೈದ ಕಾಮ-ನರ ಪಿಶಾಚಿಗಳು ಮಾನವ ಸಮೂಹಕ್ಕೆ ಕಂಠಕ. ಪವಿತ್ರ ಆರಾಧನಾಲಯದಲ್ಲಿ ಆ ಮುಗ್ದ ಮಗುವನ್ನು ಸತತ ಏಳು ದಿನಗಳ ಕಾಲ ನಿದ್ದೆ ಮಾತ್ರೆ ನೀಡಿ , ಆಹಾರ ನೀಡದೆ ದೈಹಿಕವಾಗಿ ಕಿರುಕುಳ ನೀಡಿ ಸಾಮೂಹಿಕವಾಗಿ ಅತ್ಯಾಚಾರಗೈದು ಮೃಗೀಯವಾಗಿ ಕೊಲೆಗೈದ ಕಿರಾತಕರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿ ಕೂಡಲೇ ನೇಣುಗಂಬಕ್ಕೆ ಏರಿಸುವಂತೆ ಸರ್ವ ಭಾರತೀಯರ ಅಭಿಲಾಷೆಯೂ, ಒತ್ತಾಯವೂ ಆಗಿದೆ.

ಈ ನಿಟ್ಟಿನಲ್ಲಿ ಕೆಸಿಎಫ್ ಯುಎಇ ಯು ತೀವ್ರ ಸಂತಾಪ ವ್ಯಕ್ತಪಡಿಸಿ ಆಸಿಫಾಲ ಪಾರತ್ರಿಕ ಮೋಕ್ಷಕ್ಕಾಗಿ ಹಾಗೂ ಆಕೆಯ ಕುಟುಂಬಕ್ಕೆ ಕ್ಷಮೆ ನೀಡಲು ಪ್ರಾರ್ಥಿಸಿ ನರ-ಕಾಮ ಪಿಶಾಚಿ ಕುಟುಕರಿಗೆ ಅತೀ ಶೀಘ್ರವಾಗಿ ಶಿಕ್ಷೆಯನ್ನು ವಿಧಿಸುವಂತಾಗಲಿ ಎಂದು ಪ್ರಾರ್ಥಿಸಿದರು.

ನರ ಹಂತಕರಿಗೆ ಸಾಥ್ ನೀಡುವ ಶಕ್ತಿಗಳನ್ನು ತರಾಟೆಗೆ ತೆಗೆದ ಕೆಸಿಎಫ್ ಯುಎಇ ಶೀಘ್ರವೇ ನರಹಂತಕರು ನೇಣುಗಂಬಕ್ಕೆ ಏರುವಂತಾಗಲಿ ಎಂದು ಆಶಿಸಿತು.
ಆಸಿಫಾ ಪ್ರಕರಣವು ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ ಪ್ರಕರಣವಾಗಿದೆ. ಇದಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಕೆಸಿಎಫ್ ಯುಎಇ ಆಸಿಫಾಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಭಾರತ ಸರಕಾರದಲ್ಲಿ ಮನವಿ ಮಾಡಿಕೊಂಡಿದೆ.

Leave a Reply

Your email address will not be published. Required fields are marked *

error: Content is protected !!