ಮಂಗಳೂರು,ಏ.2: ಇಂದು ( ಶನಿವಾರ ಅಸ್ತ ಆದಿತ್ಯವಾರ ) ರಾತ್ರಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ 03 – 04 – 2022 ಆದಿತ್ಯವಾರದಿಂದ ( ನಾಳೆಯಿಂದ ) ರಮಳಾನ್ ಉಪವಾಸ ಪ್ರಾರಂಭವಾಗಿರುತ್ತದೆ ಎಂದು ಉಳ್ಳಾಲ ಹಾಗು ದ.ಕ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿ ಗೌರವಾನ್ವಿತ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಳ್ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.
ಅದೇ ರೀತಿ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಮೊಹಲ್ಲಾಗಳ ಖಾಝಿಯವರಾದ ಶೈಖುನಾ ಅಲ್-ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ರವರು ನಾಳೆ ರಂಜಾನ್ ಉಪವಾಸವೆಂದು ಘೋಷಿಸಿದ್ದಾರೆ.
ಎಪ್ರಿಲ್ 3 ಆದಿತ್ಯವಾರ ಉಪವಾಸ ಆರಂಭ- ಖಾಝಿ ಮಾಣಿ ಉಸ್ತಾದ್
ಉಡುಪಿ : ಎ,2 (ಇಂದು) ರಂಝಾನ್ ತಿಂಗಳ ಚಂದ್ರದರ್ಶನವಾದ ಬಗ್ಗೆ ದೃಢೀಕರಣಗೊಂಡ ಕಾರಣ ಎಪ್ರಿಲ್ 3 ನಾಳೆ ಉಪವಾಸ ಆಚರಿಸುವುದಾಗಿ ಉಡುಪಿ, ಚಿಕ್ಕಮಗಳೂರು, ಹಾಗೂ ಹಾಸನ ಜಿಲ್ಲೆಗಳ ಸಂಯುಕ್ತ ಜಮಾಅತ್ ಖಾಝಿ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ತಿಳಿಸಿದ್ದಾರೆ.