ಕುಪ್ಪೆಪದವು: ಮಸ್ಜಿದುರ್ರಹ್ಮಾನ್ ಜುಮಾ ಮಸ್ಜಿದ್ ಬಾರ್ದಿಲ ಇದರ ಅಧೀನದಲ್ಲಿ ಎರಡು ದಿನಗಳ ಮತ ಪ್ರಭಾಷಣ ಹಾಗೂ ದುಆ ಮಜ್ಲಿಸ್ ಮಸ್ಜಿದುರ್ರಹ್ಮಾನ್ ಜುಮಾ ಮಸ್ಜಿದ್ ಬಾರ್ದಿಲ ಇದರ ಅಧ್ಯಕ್ಷರಾದ ಪಿ ಎಂ ಅಲಿ ಪೋನೊಟು ಇವರ ಅಧ್ಯಕ್ಷತೆಯಲ್ಲಿ 9-3-2022 ಬುಧವಾರ ಆರಂಭವಾಗಿ 10-3-2022 ಗುರುವಾರ ರಾತ್ರಿ ಯಶಸ್ವಿಯಾಗಿ ಸಮಾಪ್ತಿ ಗೊಂಡಿತು.
ಕಾರ್ಯಕ್ರಮದ ಮೊದಲ ದಿನ ಮಸೀದಿ ಮುಹಝಿನ್ ಸಂಶುದ್ದೀನ್ ನಿಝಾಮಿಯವರ ಸ್ವಾಗತ ಭಾಷಣ, ಬಹು | ಅಬ್ದುಲ್ ರಹೀಂ ಹನೀಫಿ ಖತೀಬರ ಪ್ರಾಸ್ತಾವಿಕ ಭಾಷಣ ಜೊತೆಗೆ ಬಹು ಸಯ್ಯಿದ್ ಫಝಲ್ ಜಮಲುಲೈಲಿ ತಂಙಳ್ ವಾದಿ ಇರ್ಫಾನಿ ಅಕಾಡೆಮಿ ಮದ್ಯಡ್ಕ ಯವರ ದುಆ ನೇತ್ರತ್ವ ಹಾಗೂ ಪ್ರವಚನದ ನಡೆಯಿತು. ಇದರ ಮೊದಲು ಮಸ್ಜಿದುರ್ರಹ್ಮಾನ್ ಜುಮಾ ಮಸ್ಜಿದ್ ಬಾರ್ದಿಲ ಇದರ ಎರಡನೆ ಕೊಠಡಿ(ಹಾಲ್) ಕೂಡಾ ತಂಙಳ್ ಅವರಿಂದ ವಕ್ಪ್ ಮಾಡಿ ಕೊಡಲಾಯಿತು.
ಕಾರ್ಯಕ್ರಮದ ಎರಡನೇ ದಿನ, ವಾಗ್ಮಿ ಬಹು | ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಇವರಿಂದ ಪ್ರಭಾಷಣ ನಡೆದು ದುಆ ಮೂಲಕ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು. ಈ ಸಂದರ್ಭದಲ್ಲಿ ಮೊದಲ ದಿನ ತಂಙಳ್ ಅವರ ಮುಖಾಂತರ ಕೈಗೊಂಡ ಮಸೀದಿಗೆ ವರಮಾನವನ್ನು ತಂದು ಕೊಡುವ ನಿಟ್ಟಿನಲ್ಲಿ ರೂಪಿಸಿದ ಯೋಜನೆಗೆ ಹಣ ಸಂಗ್ರಹಣೆ ಕುಕ್ಕಿಲ ದಾರಿಮಿಯವರ ಮುಖಾಂತರವೂ ಯಶಸ್ವಿಯಾಗಿ ನಡೆಸಲಾಯಿತು.
ಉಮ್ಮಾ ಹ್ಯೂಮ್ಯಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ)ಇದರ ಸದಸ್ಯರಾದ ಸಿರಾಜ್ ಪೋನೊಟ್ಟು, ಬದುರು ಕಲ್ಲಾಡಿ ಹಾಗೂ ಶೆರೀಫ್ ಹಮ್ದ್ ರವರು ಹಣ ಸಂಗ್ರಹ ಯಶಸ್ವಿಯಾಗಿ ನೆರವೇರಲು ಸಹಕರಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಬೂಝೈದ್ ಶಾಫಿ ಮದನಿ ಕರಾಯ, ಖತೀಬರು ಬದ್ರಿಯಾ ಜುಮ್ಮಾ ಮಸೀದಿ ಕುಪ್ಪೆಪದವು, ಕೆ. ಎಚ್. ಇಕ್ಬಾಲ್, ಮುಸ್ಲಿಯಾರ್ ಖತೀಬರು ಶಂಸುಲ್ ಉಲಮಾ ಎಜುಕೇಶನ್ ಟ್ರಸ್ಟ್ ಕುಪ್ಪೆಪದವು, ಹಸೈನಾರ್ ಹಾಜಿ (ಅಧ್ಯಕ್ಷರು ಶಂಸುಲ್ ಉಲಮಾ ಕುಪ್ಪೆಪದವು), ಅಬ್ದುಲ್ ರಹಿಮಾನ್ (ಅಧ್ಯಕ್ಷರು ಬದ್ರಿಯಾ ಜುಮ್ಮಾ ಮಸೀದಿ ಕುಪ್ಪೆಪದವು), ರಫೀಕ್ (ಗ್ರಾಮಪಂಚಾಯತ್ ಸದಸ್ಯರು), ಶೆರೀಫ್ ಕಜೆ (ಗ್ರಾಮಪಂಚಾಯತ್ ಸದಸ್ಯರು), ಮಾಜಿ ಅಧ್ಯಕ್ಷರಾದ ಬಿ ಎ ಅಬೂಬಕ್ಕರ್, ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ವಕೀಲರೂ ಆದ ಬಿ. ಎ. ಹನೀಫ್ ಉಪಸ್ಥಿತರಿದ್ದರು.
ಅಲ್ಲದೆ ಕಮಿಟಿ ಸದಸ್ಯರಾದ ರಝಾಕ್ ಬಾರ್ದಿಲ, ಬಿ ಸಿ ಮಾಮು ಬಾರ್ದಿಲ, ಅಹ್ಮದ್ ಬಾವ ಕೊರೊಟು, ಹಮೀದ್ ಬಾಳೆಮಾರ್ (ಪ್ರಧಾನ ಕಾರ್ಯದರ್ಶಿ), ಸುಲೈಮಾನ್ ಬರ್ಕೆ, ಬದುರು ಕಲ್ಲಾಡಿ, ಅಬೂಬಕ್ಕರ್ ಹೊಸಮಾರಪದವು ಜೊತೆಗೆ ಹಿರಿಯವರು ಹಾಗೂ ಊರವರಾದ ಅಬೂಬಕ್ಕರ್ ಮೇಸ್ಟು ಬಾರ್ದಿಲ, ಅಬ್ದುಲ್ ಖಾದರ್ ಪೋನೊಟ್ಟು, ಪಿ. ಎಮ್ ಹಸನಬ್ಬ ಪೋನೊಟ್ಟು, ಹಸನಬ್ಬ ಕಲ್ಲಾಡಿ, ಎಸ್ ಕೆ ಇಬ್ರಾಹಿಂ ಕಟ್ಟೆಮಾರ್, ಅಬ್ದುಲ್ ರಹಿಮಾನ್ ಕಲ್ಲಾಡಿ, ಮೋನು ಪೋನೊಟ್ಟು, ಹಂಝ ಪೋನೊಟ್ಟು, ಸಿನಾನ್, ಸುಹೈಲ್, ಕಾದರ್ ಬಾಳೆಮಾರ್ ಮುಂತಾದವರು ಉಪಸ್ಥಿತರಿದ್ದರು.
✍️ ಖಲೀಲ್ ಪೋನೊಟ್ಟು