janadhvani

Kannada Online News Paper

ಕೆಸಿಎಫ್ ಓಮಾನ್ ಶಿನಾಸ್ ಸೆಕ್ಟರ್ ರೂಪೀಕರಣ. 2022 – 23 ರ ನೂತನ ಸಾರಥಿಗಳು

ಕೆಸಿಎಫ್ ಒಮಾನ್ ಶಿನಾಸ್ ಸೆಕ್ಟರ್ ರೂಪೀಕರಣ ವು 11-3-2022 ಶುಕ್ರವಾರ ಫಿಶ್ ಫ್ಯಾಕ್ಟರಿ ಅಸ್ರಾರ್ ನಲ್ಲಿ ಕೆಸಿಎಫ್ ಸೊಹಾರ್ ಝೋನ್ ಅಧ್ಯಕ್ಷ ಅಶ್ರಫ್ ಕುತ್ತಾರ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕೆಸಿಎಫ್ ಸೊಹಾರ್ ಝೋನ್ ಸಾಂತ್ವನ ವಿಭಾಗದ ಅಧ್ಯಕ್ಷ ಅಝೀಝ್ ಉಪ್ಪಳ ಇವರು ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಮೀಡಿಯಾ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ ಇವರು ಉಪಸ್ಥಿತರಿದ್ದರು. ನೂತನ ಸಮಿತಿ ರಚನೆಯನ್ನು ಕೆಸಿಎಫ್ ಸೊಹಾರ್ ಕೋಶಾಧಿಕಾರಿ ಆರಿಫ್ ಮದಕ ನಡೆಸಿಕೊಟ್ಟರು.

ನೂತನ ಅಧ್ಯಕ್ಷರಾಗಿ ಸೂಫಿ ಇಬ್ರಾಹಿಂ ಕೋಡಿ, ಉಪಾಧ್ಯಕ್ಷರಾಗಿ ಆಸಿಫ್ ಕೊಟೇಪುರ, ಪ್ರಧಾನ ಕಾರ್ಯದರ್ಶಿಯಾಗಿ ನಝೀರ್ ಕೋಡಿ ಹಾಗೂ ಕೋಶಾಧಿಕಾರಿಯಾಗಿ ಝಿಯಾದ್ ವಿಟ್ಲ ರವರು ಆಯ್ಕೆಯಾದರು. ಅಲ್ಲದೇ ಸಾಂತ್ವನ ವಿಭಾಗದ ಕಾರ್ಯದರ್ಶಿಯಾಗಿ ಮುತ್ತಲಿಬ್ ಕೊಟೇಪುರ,
ಆಡಳಿತ ವಿಭಾಗದ ಕಾರ್ಯದರ್ಶಿಯಾಗಿ ಉಮ್ಮರ್ ಫಾರೂಕ್ ಕುತ್ತಾರ್ ,
ಶಿಕ್ಷಣ ವಿಭಾಗ ಕಾರ್ಯದರ್ಶಿ ಯಾಗಿ ಸಲೀಮ್ ಲತೀಫಿ ಕೊಡಗು
ಇಹ್ಸಾನ್ ವಿಭಾಗದ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ ಕೋಡಿ ಹಾಗೂ ಪ್ರಕಾಶನ ವಿಭಾಗದ ಕಾರ್ಯದರ್ಶಿಯಾಗಿ ಫಹದ್ ಬಂದರ್ ಸಂಘಟನಾ ವಿಭಾಗದ ಕಾರ್ಯದರ್ಶಿಯಾಗಿ ರಮೀಝ್ ನ್ಯೂ ಪಡ್ಪು ಹಾಗೂ
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವಾರಿಸ್ ಶಿವಮೊಗ್ಗ ಇವರು ಆಯ್ಕೆಯಾದರು.

ಕೆಸಿಎಫ್ ಒಮಾನ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಎರ್ಮಾಳ್ ಸ್ವಾಗತಿಸಿ, ನೂತನ ಕಾರ್ಯದರ್ಶಿ ವಂದಿಸಿ
ಸೆಕ್ಟರ್ ಪ್ರದಾನ ಕಾರ್ಯದರ್ಶಿ ಮುಬೀನ್ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿದರು.