janadhvani

Kannada Online News Paper

ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್ ಐನ್ ಝೋನ್ ವಾರ್ಷಿಕ ಮಹಾಸಭೆ

ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಲ್ ಐನ್ ಝೋನ್ ಇದರ ವಾರ್ಷಿಕ ಮಹಾಸಭೆಯು ದಿನಾಂಕ 11-03-2022 ರಂದು ಶುಕ್ರವಾರ ರಾತ್ರಿ ಸಮಯ 8 ಕ್ಕೆ ಕೆಸಿಎಫ್ ಅಲ್ ಐನ್ ಕಛೇರಿ ಯಲ್ಲಿ ನಡೆಯಿತು.

ಝೋನಲ್ ಅಧ್ಯಕ್ಷರಾದ ಹಾಫಿಳ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಸೈನಾರ್ ಅಮಾನಿ ಉಸ್ತಾದರು ಉಧ್ಘಾಟಿಸಿದರು. ಉಸ್ಮಾನ್ ಸಖಾಫಿಯವರು ಸ್ವಾಗತಿಸಿದರು. ಮುನೀರ್ ಉಳ್ಳಾಲರವರು ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ರಾಷ್ಟ್ರೀಯ ಸಮಿತಿ ನಾಯಕರಾದ ಕೆ.ಎಚ್ ಉಸ್ತಾದ್ ರವರು ವೀಕ್ಷಕರಾಗಿ ಆಗಮಿಸಿ ವರದಿ ಮತ್ತು ಲೆಕ್ಕ ಪತ್ರಗಳನ್ನು ಪರಿಶೀಲಿಸಿದರು. ರಾಷ್ಟ್ರೀಯ ನಾಯಕರಾದ ನವಾಝ್ ಕೋಟೆಕಾರ್ ಉಪಸ್ಥಿತರಿದ್ದರು. ನಂತರ ಸರ್ವಾನುಮತದಿಂದ ವರದಿ ಮತ್ತು ಲೆಕ್ಕಪತ್ರವನ್ನು ಅಂಗೀಕರಿಸಲಾಯಿತು.

ಕೊನೆಯಲ್ಲಿ ಸಂಘಟನೆಯ ಕಾರ್ಯಾಚರಣೆಯ ಬಗ್ಗೆ ಚರ್ಚೆ ನಡೆಸಲಾಯಿತು. ನಂತರ ಹೊಸ ಸಮಿತಿಗೆ ರೂಪು ನೀಡಲಾಯಿತು.

ಅಧ್ಯಕ್ಷರಾಗಿ ಉಸ್ಮಾನ್ ಸಖಾಫಿ, ಪ್ರಧಾನ ಕಾರ್ಯದರ್ಶಿಯಾಗಿ ನವಾಝ್ ಕುಪ್ಪೆಟ್ಟಿ, ಕೋಶಾಧಿಕಾರಿಯಾಗಿ ಮುಸ್ತಾಕ್ ತುಂಬೆ, ಆರ್ಗನೈಸೇಶನ್ ಅಧ್ಯಕ್ಷರಾಗಿ ರಹೀಂ ಸಕಲೇಶಪುರ, ಕಾರ್ಯದರ್ಶಿಯಾಗಿ ಅರ್ಶದ್ ಕುತ್ತಾರು, ಕ್ನೋಲೇಜ್ ಅಧ್ಯಕ್ಷರಾಗಿ ರಫೀಕ್ ಉಸ್ತಾದ್,ಕಾರ್ಯದರ್ಶಿಯಾಗಿ ಮುನೀರ್ ಉಳ್ಳಾಲ, ಅಡ್ಮಿನಿಸ್ಟ್ರೇಷನ್ ಅಧ್ಯಕ್ಷರಾಗಿ ಹಾರಿಸ್ ಪೆರಿಯಪಾದೆ,ಕಾರ್ಯದರ್ಶಿಯಾಗಿ ಅನ್ಸಾರ್ ಪಾಟ್ರಕೋಡಿ.
ವೆಲ್ಫೇರ್ ಅಧ್ಯಕ್ಷರಾಗಿ ಇಸ್ಮಾಯಿಲ್ ಕಂಬಳಬೆಟ್ಟು, ಕಾರ್ಯದರ್ಶಿಯಾಗಿ ನವಾಝ್ ಕಾಟಿಪಳ್ಳ, ಪಬ್ಲಿಕೇಶನ್ಸ್ ಅಧ್ಯಕ್ಷರಾಗಿ ಅಶ್ರಫ್ ನಾಟೆಕಲ್,ಕಾರ್ಯದರ್ಶಿಯಾಗಿ ರಿಯಾಝ್ ದೇರಳಕಟ್ಟೆ,
ಇಹ್ಸಾನ್ ಅಧ್ಯಕ್ಷರಾಗಿ ಇಬ್ರಾಹಿಮ್ ಬಾಯ್, ಕಾರ್ಯದರ್ಶಿಯಾಗಿ ಪೈಝಲ್ ನಾಟೆಕಲ್ ಹೀಗೆ ಹೊಸ ಸಮಿತಿಯನ್ನು ರಚಿಸಲಾಯಿತು. ಕೊನೆಯಲ್ಲಿ ದನ್ಯವಾದ ಹೇಳಿ ಸ್ವಲಾತ್ ಹೇಳಿ ಮುಕ್ತಾಯಗೊಳಿಸಲಾಯಿತು.